ಕೆ.ಕೆ ಎಕ್ಸಪ್ರಸ್ ಟ್ರೈನ್ ಸ್ಪೋಟಿಸುವುದಾಗಿ ಹೇಳಿಕೆ : ಓರ್ವನನ್ನು ವಶಕ್ಕೆ ಪಡೆದ ರೈಲ್ವೆ ಪೊಲೀಸ್

ಕಲಬುರಗಿ: ಕೆ.ಕೆ.ಎಕ್ಸಪ್ರೆಸ್ ರೈಲು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಓರ್ವ ವ್ಯಕ್ತಿಯನ್ನು ವಾಡಿ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತನ್ನ ಸಹೋದರನಿಗೆ ಫೈನ್ ಹಾಕಿದ್ದಕ್ಕೆ ಆಕ್ರೋಶಗೊಂಡು ಆರೋಪಿ ಬೆದರಿಕೆ ಹಾಕಿರುವುದಾಗಿ ತನಿಖೆ ವೇಳೆ ತಿಳಿದು ಬಂದಿದೆ.

ತನ್ನ ಸಹೋದರನಿಗೆ ಫೈನ್ ಹಾಕಿದ್ದಕ್ಕೆ ಆಕ್ರೋಶಗೊಂಡಿದ್ದ ಆರೋಪಿ ಮದ್ಯದ ಅಮಲಿನಲ್ಲಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಕೆ.ಕೆ.ಎಕ್ಸಪ್ರೆಸ್ ರೈಲು ಸ್ಫೋಟಗೊಳ್ಳುವುದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದ. ಈ ವೇಳೆ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕನೊಬ್ಬನನ್ನು ವಶಕ್ಕೆ ಪಡೆದು ರೈಲ್ವೆ ಪೊಲೀಸರು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಇದು ಕುಡುಕ ಸಹೋದರನ ಕಿತಾಪತಿ ಎನ್ನುವುದು ಬಯಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಾಡಿ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದ ವ್ಯಕ್ತಿ ಕೆ.ಕೆ.ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ರೈಲಿನಲ್ಲೇ ಸಿಗರೇಟು ಸೇದಿದ್ದಾನೆ. ಹೀಗಾಗಿ ಆತನಿಗೆ ಫೈನ್ ಹಾಕಲಾಗಿತ್ತು. ಈ ವೇಳೆ ಫೈನ್ ಕಟ್ಟಲು ಹಣ ಇಲ್ಲದ ಕಾರಣ ಆತ ತನ್ನ ಅಣ್ಣನಿಗೆ ಕರೆ ಮಾಡಿ ಹಣ ಗೂಗಲ್ ಪೇ ಮಾಡಲು ಹೇಳಿದ್ದ. ಫೈನ್ ಕಟ್ಟಿದ ಬಳಿಕ ಅಣ್ಣನ ಬಳಿ ತನಗಾದ ಅವಮಾನವನ್ನು ಹೇಳಿಕೊಂಡಿದ್ದ. ಇಷ್ಟಕ್ಕೇ ರೊಚ್ಚಿಗೆದ್ದ ಅಣ್ಣ ಕುಡಿದ ಮತ್ತಿನಲ್ಲಿ ರೈಲ್ವೇ ಕಂಟ್ರೋಲ್ ರೂಂಗೆ ಕರೆ ಮಾಡಿ ದೆಹಲಿ-ಬೆಂಗಳೂರು ಕೆ.ಕೆ.ಎಕ್ಸಪ್ರೆಸ್ ರೈಲು ಸ್ಫೋಟಗೊಳ್ಳಲಿದೆ. ಬಾಂಬ್ ಇಟ್ಟಿದ್ದೇನೆ ಎಂದು ಬೆದರಿಕೆ ಹಾಕಿದ್ದ.

ಈ ಸುದ್ದಿ ಕೆಲ ಪ್ರಯಾಣಿಕರ ಕಿವಿಗೆ ಬಿದ್ದು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ಇದು ಹುಸಿ ಕರೆ, ಹೆದರಿಸಲು ಈ ರೀತಿ ಸುಳ್ಳು ಹೇಳಿದ್ದಾರೆ ಎಂದು ಗೊತ್ತಾದ ತಕ್ಷಣ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *