ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು ಕಳೆದ ಒಂದು ವರ್ಷದಿಂದ ಕಂಡು ಕೇಳರಿಯದಷ್ಟು ಹೊಸ ಪ್ರಕರಣ ಇಂದು ದಾಖಲಾಗಿವೆ.
ರಾಜ್ಯದಲ್ಲಿ ಒಂದೇ ದಿನ 14 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ತಗುಲಿರುವುದು ಇದೇ ಮೊದಲು. ರಾಜ್ಯದ ಮಟ್ಟಿಗೆ ಇದು ದಾಖಲೆ. ಇಂದು ರಾಜ್ಯದಲ್ಲಿ 14738 ಜನರಿಗೆ ಸೊಂಕು ದೃಢ ಪಟ್ಟಿದೆ. ಇಂದು 3591 ಸೋಂಕಿತರು ಗುಣಮುಖರಾಗಿದ್ದಾರೆ, ಹಾಗೆಯೇ 66 ಸೋಂಕಿತರು ಮೃತಪಟ್ಟಿದ್ದಾರೆ.
ಹಿಂದೆಂದೂ ಇಷ್ಟು ದೊಡ್ಡ ಪ್ರಮಾಣದಲ್ಲಿ ರಾಜ್ಯದಲ್ಲಿ ಕರೋನ ಪ್ರಕರಣ ವರದಿಯಾಗಿರಲಿಲ್ಲ. ರಾಜಧಾನಿ ಬೆಂಗಳೂರು ನಗರದಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು ಹೊಸ ಸೋಂಕು ಪ್ರಕರಣಗಳ ಸಂಖ್ಯೆ 10 ಸಾವಿರ ಗಡಿ ದಾಟಿದೆ. ಇಂದು ಸಾವಿಗೀಡಾಗಿರುವ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು ಕಳೆದ 24 ಗಂಟೆಗಳಲ್ಲಿ 66 ಮಂದಿ ಸೋಂಕಿತರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರ ಒಂದರಲ್ಲೇ 30 ಮಂದಿ ಕೊರೋನಾಗೆ ಮೃತಪಟ್ಟಿದ್ದಾರೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರದಲ್ಲಿ 6 ಮಂದಿ , ಮೈಸೂರಿನಲ್ಲಿ ಐವರು ಹಾಸನದಲ್ಲಿ ನಾಲ್ವರು ,ಧಾರವಾಡದಲ್ಲಿ ಮೂವರು, ಬೀದರ್ ,ತುಮಕೂರು, ಉತ್ತರ ಕನ್ನಡ ,ತಲಾ ಇಬ್ಬರು, ಬೆಳಗಾವಿ, ಕಲ್ಬುರ್ಗಿ, ಕೋಲಾರ, ರಾಮನಗರ, ಶಿವಮೊಗ್ಗ, ವಿಜಯಪುರನಲ್ಲಿ ತಲಾ ಒಬ್ಬರು ಕೊರನಾದಿಂದ ಮೃತಪಟ್ಟಿದ್ದಾರೆ.
ಉಳಿದ ಜಿಲ್ಲೆಗಳಲ್ಲಿ ಕೊರೊನಾದಿಂದ ಮರಣ ಸಂಭವಿಸಿಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದ್ದು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹತ್ತಿರ ಒಂದು ಲಕ್ಷದಷ್ಟಿದೆ.
ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1109650ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 999958 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 96561 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 13112 ಜನ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 555 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ರಾಜಧಾನಿಯಲ್ಲಿ 10,497 ಕೊರೋನ ಪ್ರಕರಣ ದೃಢ : ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 10497 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 512521ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ಕಳೆದ 24 ಗಂಟೆಗಳಲ್ಲಿ ಸೊಂಕಿಗೆ 30 ಸೋಂಕಿತರು ಬಲಿಯಾಗಿದ್ದು , ಬೆಂಗಳೂರಿನಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 14,963ಕ್ಕೆ ಏರಿಕೆಯಾಗಿದೆ.
ಇಂದು1807ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಇದುವರೆಗೂ 43,5730 ಸೋಂಕಿತರು ಗುಣಮುಖರಾಗಿದ್ದಾರೆ ಬೆಂಗಳೂರಿನಲ್ಲಿ ಒಟ್ಟು71,827 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ಸೊಂಕಿತರ ವಿವರ
ಬಾಗಲಕೋಟೆ 29,ಬಳ್ಳಾರಿ 200, ಬೆಳಗಾವಿ 135,ಬೆಂಗಳೂರು ಗ್ರಾಮಾಂತರ 171,ಬೀದರ್ 363, ಚಾಮರಾಜನಗರ 39, ಚಿಕ್ಕಬಳ್ಳಾಪುರ 127,ಚಿಕ್ಕಮಗಳೂರು 62,ಚಿತ್ರದುರ್ಗ 33,ದಕ್ಷಿಣ ಕನ್ನಡ 166,,ದಾವಣಗೆರೆ 60,ಧಾರವಾಡ 179, ಗದಗ 34,, ಹಾಸನ 186,ಹಾವೇರಿ 27, ಕಲಬುರಗಿ 624,ಕೊಡಗು 66,ಕೋಲಾರ 89,,,ಕೊಪ್ಪಳ 118,ಮಂಡ್ಯ 211,, ಮೈಸೂರ 327, ರಾಯಚೂರು 48,ರಾಮನಗರ 62,ಶಿವಮೊಗ್ಗ 74,,ತುಮಕೂರು 387,ಉಡುಪಿ 111,,ಉತ್ತರ ಕನ್ನಡ 89, ವಿಜಯಪುರ 136, ಯಾದಗಿರಿ 88.