ಕಾರ್ಮಿಕರ ಮೊದಲ ಕ್ರಾಂತಿಗೆ 150ರ ಸಂಭ್ರಮ

ಪ್ಯಾರಿಸ್ ಕಮ್ಯೂನಿನ 150ನೆಯ ವಾರ್ಷಿಕೋತ್ಸವವನ್ನು ಜಗತ್ತಿನಾದ್ಯಂತ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಸಂದರ್ಭದಲ್ಲಿ ಜಗತ್ತಿನ 15 ದೇಶಗಳ ಮತ್ತು ಹಲವು ಪ್ರದೇಶಗಳ ಭಾಷೆಗಳ 27 ಪ್ರಗತಿಪರ ಪ್ರಕಾಶನಗಳು ಜಂಟಿಯಾಗಿ ‘ಪ್ಯಾರಿಸ್ ಕಮ್ಯೂನ್ 150’ ಎಂಬ ಒಂದೇ ಇ-ಪುಸ್ತಕವನ್ನು 18 ಭಾಷೆಗಳಲ್ಲಿ ಒಂದೇ ಡಿಸೈನಿನ ಕವರ್ ಪುಟಗಳೊಂದಿಗೆ ಒಂದೇ ದಿನ ಮೇ 28, 2021ರಂದು ಪ್ರಕಟಿಸುತ್ತಿವೆ.  ಅಮೆರಿಕದ ಟ್ರೈಕಾಂಟಿನೆಂಟಲ್ ಇನ್ಸ್ಟಿಟ್ಯೂಟ್ ಮತ್ತು ಭಾರತದ ಲೆಫ್ಟ್ ವರ್ಡ್ ನಾಯಕತ್ವದಲ್ಲಿ ವಾಮ ಪ್ರಕಾಶನ, ಚಿಂತಾ, ಪ್ರಜಾಶಕ್ತಿ, ನವತೆಲಂಗಾಣ, ಭಾರತಿ ಪುಸ್ತಕಾಲಯ, ಕ್ರಿಯಾ ಮಾಧ್ಯಮ ಸೇರಿದಂತೆ ಈ 27 ಪ್ರಕಾಶನಗಳು (ಇವುಗಳ ಹೆಸರು ಮತ್ತು ಲೊಗೊಗಳು ಈ ಪುಸ್ತಕದ ಒಳ ರಕ್ಷಾ ಪುಟಗಳಲ್ಲಿವೆ) ಒಂದು ವೇದಿಕೆಯನ್ನು ರಚಿಸಿಕೊಂಡು ಪ್ರತಿ ವರ್ಷ ಅಂತರರಾಷ್ಟ್ರೀಯ ಸೌಹಾರ್ದತೆಯನ್ನು ಬಿಂಬಿಸುವ ಇಂತಹ ಒಂದು ವಿಶಿಷ್ಟ ಕಾರ್ಯಾಚರಣೆಯನ್ನು ಸಂಘಟಿಸಲಾರಂಭಿಸಿವೆ. ಕಳೆದ ಕೆಲವು ವರ್ಷಗಳಲ್ಲಿ ಲೆನಿನ್ 150ನೆಯ ಹುಟ್ಟುದಿನ ಮತ್ತು ಚೆ ಹತ್ಯಾ ದಿನದಂದು ಇಂತಹ ಜಂಟಿ ಪ್ರಕಟಣೆಗಳನ್ನು ಮಾಡಲಾಗಿತ್ತು.

ವಸಂತರಾಜ ಎನ್.ಕೆ.

ಮೇ 28, 2021, ಪ್ಯಾರಿಸ್ ಕಮ್ಯೂನಿನ 150ನೆಯ ವಾರ್ಷಿಕೋತ್ಸವವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಪ್ಯಾರಿಸ್ಸಿನ ಕಾರ್ಮಿಕರು 1871ರ ಮಾರ್ಚ್ 18 ರಂದು ಆಳುತ್ತಿದ್ದ ಬಂಡವಾಳಶಾಹಿಗಳನ್ನು ಓಡಿಸಿ ಸ್ಥಾಪಿಸಿದ ಕಾರ್ಮಿಕರ ಆಡಳಿತವನ್ನು “ಪ್ಯಾರಿಸ್ ಕಮ್ಯೂನ್” ಎಂದು ಕರೆದರು. “ಪ್ಯಾರಿಸ್ ಕಮ್ಯೂನ್” ಜಗತ್ತಿನಲ್ಲೇ ಮೊದಲ ಕಾರ್ಮಿಕರ ಪ್ರಭುತ್ವ ಮತ್ತು ಕ್ರಾಂತಿ ಎಂದೇ ಪ್ರಸಿದ್ಧವಾಗಿದ್ದರೂ, ಅದು ಇನ್ನೂ ಹಲವು ರೀತಿಯಲ್ಲಿ ಚಿರಂತನ ಮಹತ್ವವನ್ನು ಪಡೆದಿದೆ. “ಪ್ಯಾರಿಸ್ ಕಮ್ಯೂನ್” ಎಂಬ ಕಾರ್ಮಿಕರ ಕ್ರಾಂತಿಕಾರಿ ಪ್ರಭುತ್ವವು (ಮೇ 28, 1871ರಂದು ಪತನವಾಗುವ ಮೊದಲು) ಕೇವಲ 72 ದಿನಗಳ ಕಾಲ ಮಾತ್ರ ಬಾಳಿತಾದರೂ, ಅದು ತನ್ನ ಸಾಧನೆ-ವೈಫಲ್ಯಗಳು ಬಲ-ದೌರ್ಬಲ್ಯಗಳು ಎರಡರಿಂದಾಗಿಯೂ ಆ ನಂತರದ ಕಾರ್ಮಿಕ ಪ್ರಭುತ್ವ ಮತ್ತು ಕ್ರಾಂತಿಗಳಿಗೆ ಸ್ಫೂರ್ತಿಯ ಚಿಲುಮೆಯೂ ದಾರಿದೀವಿಗೆಯೂ ಆಯಿತು.

ಮಾರ್ಕ್ಸ್-ಏಂಗೆಲ್ಸ್ ಕಮ್ಯೂನಿನ ಹೊರಾಟಕ್ಕೆ ಸಕ್ರಿಯವಾದ ಭೌತಿಕ ಮತ್ತು ಸೈಧ್ಧಾಂತಿಕ ಬೆಂಬಲ ಕೊಟ್ಟಿದ್ದಲ್ಲದೆ, ಅದರ ಅನುಭವವನ್ನು ಕ್ರೋಢೀಕರಿಸಿ, ಮುಂದಿನ ಕ್ರಾಂತಿಗಳಿಗೆ ದಾರಿದೀವಿಗೆ ಆಗುವಂತೆ ಸಿದ್ಧಾಂತೀಕರಿಸಿ

“ಫ್ರಾನ್ಸಿನ ಅಂತರ್ಯುದ್ಧ” ಎಂಬ ಕೃತಿಯನ್ನು ಪ್ರಕಟಿಸಿದರು. ಪ್ಯಾರಿಸ್ ಕಮ್ಯೂನನ್ನು ಸ್ಥಾಪಿಸಿದ ಪ್ಯಾರಿಸಿನ ಕಾರ್ಮಿಕರು “ಸ್ವರ್ಗದ ಬಾಗಿಲು ತೆಗೆದರು” ಎಂದು ಅವರ ಕೆಚ್ಚನ್ನು ಮಾರ್ಕ್ಸ್ ಮೆಚ್ಚಿಕೊಂಡಿದ್ದಾರೆ. ಈ ಕೃತಿಯ ಅಧ್ಯಯನ ಮಾಡಿದವರೆಲ್ಲರೂ, ಪ್ರಮುಖವಾಗಿ ಲೆನಿನ್ ಮತ್ತು ಮಾವೋ, ಪ್ಯಾರಿಸ್ ಕಮ್ಯೂನ್ನ ಎಲ್ಲಾ ಸಕಾರಾತ್ಮಕ ಹಾಗೂ ನಕಾರಾತ್ಮಕ ಪಾಠಗಳನ್ನು ಸಫಲ ಕ್ರಾಂತಿಗಳಲ್ಲಿ ತಮ್ಮ ದೇಶ-ಕಾಲಕ್ಕೆ ಅನುಸಾರವಾಗಿ ಅನ್ವಯಿಸಿದರು. ಜಗತ್ತಿನಾದ್ಯಂತ ಕಾರ್ಮಿಕರ ಪ್ರಭುತ್ವ ಮತ್ತು ಸಮತಾವಾದಿ ಸಮಾಜ ಕಟ್ಟುವ ಕನಸು ಹೊತ್ತ ಎಲ್ಲರಿಗೂ ಇಂದಿಗೂ ಅದು ಮೈನವಿರೇಳಿಸುವ ನೆನಪು.

ಪ್ಯಾರಿಸ್ ಕಮ್ಯೂನಿನ 150ನೆಯ ವಾರ್ಷಿಕೋತ್ಸವವನ್ನು ಜಗತ್ತಿನಾದ್ಯಂತ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಜಗತ್ತಿನ 15 ದೇಶಗಳ ಮತ್ತು ಹಲವು ಪ್ರದೇಶಗಳ ಭಾಷೆಗಳ 27 ಪ್ರಗತಿಪರ ಪ್ರಕಾಶನಗಳು ಜಂಟಿಯಾಗಿ ‘ಪ್ಯಾರಿಸ್ ಕಮ್ಯೂನ್ 150’ ಎಂಬ ಒಂದೇ ಇ-ಪುಸ್ತಕವನ್ನು 18 ಭಾಷೆಗಳಲ್ಲಿ ಒಂದೇ ಡಿಸೈನಿನ ಕವರ್ ಪುಟಗಳೊಂದಿಗೆ ಒಂದೇ ದಿನ ಮೇ 28, 2021ರಂದು ಪ್ರಕಟಿಸುತ್ತಿವೆ. ಬಾಂಗ್ಲಾ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ತಮಿಳು, ತೆಲುಗು ಇತ್ಯಾದಿ ಭಾರತೀಯ ಉಪಖಂಡದ ಭಾಷೆಗಳು, ಇಂಡೋನೇಶ್ಯನ್, ಟರ್ಕಿ, ಲ್ಯಾಟಿನ್ ಅಮೆರಿಕಾ ಮತ್ತು ಯುರೋಪಿನ ಪ್ರಮುಖ ಭಾಷೆಗಳಾದ ಸ್ಪಾನಿಷ್, ಪೋರ್ಚುಗೀಸ್, ಸ್ಲೊವೆನಿಯನ್ ಮತ್ತು ಇಂಗ್ಲಿಷ್ ಸೇರಿದಂತೆ 18 ಭಾಷೆಗಳಲ್ಲಿ ಈ ಪುಸ್ತಕ ಪ್ರಕಟವಾಗುತ್ತಿದೆ.

ಅಮೆರಿಕದ ಟ್ರೈಕಾಂಟಿನೆಂಟಲ್ ಇನ್ಸ್ಟಿಟ್ಯೂಟ್ ಮತ್ತು ಭಾರತದ ಲೆಫ್ಟ್ ವರ್ಡ್ ನಾಯಕತ್ವದಲ್ಲಿ ವಾಮ ಪ್ರಕಾಶನ, ಚಿಂತಾ, ಪ್ರಜಾಶಕ್ತಿ, ನವತೆಲಂಗಾಣ, ಭಾರತಿ ಪುಸ್ತಕಾಲಯ, ಕ್ರಿಯಾ ಮಾಧ್ಯಮ ಸೇರಿದಂತೆ ಈ 27 ಪ್ರಕಾಶನಗಳು (ಇವುಗಳ ಹೆಸರು ಮತ್ತು ಲೊಗೊಗಳು ಈ ಪುಸ್ತಕದ ಒಳ ರಕ್ಷಾ ಪುಟಗಳಲ್ಲಿವೆ) ಒಂದು ವೇದಿಕೆಯನ್ನು ರಚಿಸಿಕೊಂಡು ಪ್ರತಿ ವರ್ಷ ಅಂತರರಾಷ್ಟ್ರೀಯ ಸೌಹಾರ್ದತೆಯನ್ನು ಬಿಂಬಿಸುವ ಇಂತಹ ಒಂದು ವಿಶಿಷ್ಟ ಕಾರ್ಯಾಚರಣೆಯನ್ನು ಸಂಘಟಿಸಲಾರಂಭಿಸಿವೆ. ಕಳೆದ ಕೆಲವು ವರ್ಷಗಳಲ್ಲಿ ಲೆನಿನ್ 150ನೆಯ ಹುಟ್ಟುದಿನ ಮತ್ತು ಚೆ ಹತ್ಯಾ ದಿನದಂದು ಇಂತಹ ಜಂಟಿ ಪ್ರಕಟಣೆಗಳನ್ನು ಮಾಡಲಾಗಿತ್ತು.

ಈ ಪುಸ್ತಕದ ಕವರ್ ಡಿಸೈನ್ ಗಾಗಿ ಈ 27 ಪ್ರಕಾಶಕರ ವೇದಿಕೆ ಒಂದು ಅಂತರರಾಷ್ಟ್ರೀಯ ಕಲಾ ಸ್ಪರ್ಧೆ ಏರ್ಪಡಿಸಿತ್ತು. ಈ ಕರೆಗೆ ಓಗೊಟ್ಟು ನೂರಾರು ಕಲಾವಿದರು ತಮ್ಮ ಕೃತಿಗಳನ್ನು ಕಳಿಸಿದ್ದರು. ಇವುಗಳಲ್ಲಿ 41 ಕೃತಿಗಳನ್ನು ಆರಿಸಿ ಒಂದು ವೆಬ್ ಕಲಾಪ್ರದರ್ಶನವನ್ನು ಮೇ 21ರಿಂದ ಏರ್ಪಡಿಸಲಾಯಿತು. ಕರ್ನಾಟಕದಿಂದ ಕ್ರಿಯಾ ದ ಡಿಸೈನರ್ ಕಲಾವಿದ ಎಂ.ರಾಮು ಮತ್ತು ರೈತ ಸಂಘದ ನಾಯಕ, ಛಾಯಾಚಿತ್ರಗ್ರಾಹಕರು, ಬರಹಗಾರರೂ ಆದ ಹಾಸನದ ನವೀನ್ ಕುಮಾರ್ ಭಾಗವಹಿಸಿದ್ದರು. ಅವರ ತಲಾ ಒಂದು ಕೃತಿ ಆಯ್ಕೆಯಾಗಿ ವೆಬ್ ಕಲಾಪ್ರದರ್ಶನದಲ್ಲಿ ಪ್ರದರ್ಶಿತವಾಗಿದೆ. ಈ 41 ಕೃತಿಗಳಲ್ಲಿ ಕ್ಯೂಬಾದ ಕಲಾವಿದ ರೊಡ್ರಿಗಸ್ ಅಗಿಲಾರ್ ಅವರ ಕೃತಿಯನ್ನು ಮುಖಪುಟಕ್ಕೆ ಆಯ್ಕೆ ಮಾಡಲಾಯಿತು. ಹಿಂಪುಟಕ್ಕೆ ಭಾರತದ ಕಲಾವಿದ ಜುನೈನಾ ಮುಹಮ್ಮದ್ ಕೃತಿಯು ಆಯ್ಕೆಯಾಗಿದೆ. ಕಲಾಪ್ರದರ್ಶನದ 41 ಕೃತಿಗಳ ಕೊಲಾಜ್ ಮುಂದಿನ ಒಳರಕ್ಷಾಪುಟದಲ್ಲಿ ಕೊಡಲಾಗಿದೆ. ವಿವಿಧ ಭಾಷೆಗಳ ಮುಖಪುಟಗಳ ಕೊಲಾಜ್ ಮತ್ತು ರಾಮು ಮತ್ತು ನವೀನ್ ಅವರ ಡಿಸೈನುಗಳನ್ನು ಹಿಂದಿನ ಒಳರಕ್ಷಾಪುಟದಲ್ಲಿ ಕೊಡಲಾಗಿದೆ.

 

ಪ್ಯಾರಿಸ್ ಕಮ್ಯೂನಿನ ನೆನಪಿನ ಈ ಪುಸ್ತಕದಲ್ಲಿ ಅದರ ಪತನದ ಎರಡು ವಾರಗಳಲ್ಲಿ (ಜೂನ್ 12, 1871ರಂದು) ಅಂತರರಾಷ್ಟಿçÃಯ ಕಾರ್ಮಿಕ ಸಂಘಟನೆಯ ಜನರಲ್ ಕೌನ್ಸಿಲ್ ನಲ್ಲಿ ಮಾರ್ಕ್ಸ್ ಮಾಡಿದ ಪ್ರಸಿದ್ಧ ಭಾಷಣದ ಅನುವಾದವಿದೆ. ಇದರಲ್ಲಿ ಕಮ್ಯೂನ್ ಉದಯವಾದ ಹಿನ್ನೆಲೆ, ಅದರ ಸಾಧನೆಗಳು-ವೈಫಲ್ಯಗಳು, ಅದು ಪತನ ಹೊಂದಲು ಕಾರಣಗಳು, ಅದರ ಮಹತ್ವ, ಅದರಿಂದ ಮುಂದಿನ ಕಾರ್ಮಿಕ ಕ್ರಾಂತಿಗಳು ಕಲಿಯಬೇಕಾದ ಪಾಠಗಳು, ಬೂರ್ಜ್ವಾ ಹಾಗೂ ಕಾರ್ಮಿಕ ಪ್ರಭುತ್ವದ ಸ್ವರೂಪಗಳ ಸೈದ್ಧಾಂತಿಕ ಗ್ರಹಿಕೆ – ಇತ್ಯಾದಿಗಳಿರುವ ಸಮಗ್ರ ಉಜ್ವಲ ವಿಶ್ಲೇಷಣೆಯಿದೆ. ಇದು ಆನಂತರ ‘ಫ್ರಾನ್ಸಿನಲ್ಲಿ ಅಂತರ್ಯುದ್ಧ’ ಎಂಬ ಹೆಸರಿನಲ್ಲಿ ಪ್ರಕಟವಾದ ಪುಸ್ತಕದ ಒಂದು ಅಧ್ಯಾಯ.

ಈ ಪುಸ್ತಕದಲ್ಲಿ ಕಮ್ಯೂನ್ ಕುರಿತು ಲೆನಿನ್ ತಮ್ಮ ‘ಪ್ರಭುತ್ವ ಮತ್ತು ಕ್ರಾಂತಿ’ ಪುಸ್ತಕದಲ್ಲಿ ಬರೆದ ಭಾಗ (ಅಧ್ಯಾಯ-3)ವನ್ನೂ ಕೊಡಲಾಗಿದೆ. ಮಾರ್ಕ್ಸ್ ಅವರ ಕಮ್ಯೂನಿನ ಉಜ್ವಲ ವಿಶ್ಲೇಷಣೆಯ ಪ್ರಮುಖ ಅಂಶಗಳ ಸಾರಾಂಶವನ್ನು ಮತ್ತೆ ಒತ್ತಿ ಹೇಳಿ, ಅದನ್ನು ವಿಕೃತಗೊಳಿಸಲು ಪ್ರಯತ್ನಿಸಿದ ಪಾರ್ಲಿಮೆಂಟರಿವಾದಿ ಪರಿಷ್ಕರಣವಾದಿಗಳ ಕಟು ವಿಮರ್ಶೆ ಮಾಡಿದ, ಆ ನಂತರದ ಕಾರ್ಮಿಕ ಚಳುವಳಿಯ ಅನುಭವ ಮತ್ತು ಅದರ ಆಧಾರದ ಮೇಲೆ ಸಮಕಾಲೀನಗೊಳಿಸಿದ ಕಮ್ಯೂನಿನ ಪಾಠಗಳ ಪ್ರಸ್ತುತತೆ – ಇವೆಲ್ಲದರ ಸಮಗ್ರ ನೋಟ ಇದರಲ್ಲಿದೆ.

‘ಸ್ವರ್ಗದ ಬಾಗಿಲು ತೆರೆದ’ ಪ್ಯಾರಿಸ್ ಕಮ್ಯೂನ್ ಕುರಿತು ಮಾರ್ಕ್ಸ್ ಮತ್ತು ಲೆನಿನ್ ವಿಶ್ಲೇಷಣೆಯನ್ನು ನೆನಪು ಮಾಡಿಕೊಳ್ಳುತ್ತಾ ಇಂದಿನ ಪ್ರಸ್ತುತತೆ ಕುರಿತು ವಿಜಯ ಪ್ರಶಾದ್ ಅವರ ದೀರ್ಘ ಪ್ರಸ್ತಾವನೆಯೂ ಇದೆ.
ಇವಲ್ಲದೆ ಪ್ಯಾರಿಸ್ ಕಮ್ಯೂನಿನ ಮತ್ತು ಅದರ ಕುರಿತು ಹೊಮ್ಮಿದ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಈ ಪುಸ್ತಕ ಒಳಗೊಂಡಿದೆ. ಕಮ್ಯೂನಿನ ಭಾಗವಾಗಿದ್ದು, ಅದರ ಸಾಂಸ್ಕೃತಿಕ ನೀತಿಯನ್ನು ಮತ್ತು ಜನತಾ ಕಲೆಯ ಪರಿಕಲ್ಪನೆಯನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದ, ಕಲಾವಿದರ ಫೆಡರೇಶನ್ನಿನ ಕೆಲಸ ಮತ್ತು ಕೊಡುಗೆಗಳ ಕುರಿತು ತಿಂಗ್ಸ್ ಚಾಕ್ ಬರೆದಿದ್ದಾರೆ. ಕಲಾವಿದರ ಫೆಡರೇಶನ್ನಿನ ಪ್ರಣಾಳಿಕೆಯೂ ಇದೆ.

 

ಪ್ರಸಿದ್ಧ ಕ್ರಾಂತಿಕಾರಿ ನಾಟಕಕಾರ, ಕವಿ ಬೆಟ್ರೊಲ್ಟ್ ಬ್ರೆಕ್ಟ್ ಬರೆದ ‘ಕಮ್ಯೂನ್ ಧೀರರ ಸಂಕಲ್ಪ’ದ ಕುರಿತ ಮಾರ್ಮಿಕ ಕವನದ ಕನ್ನಡ ಅನುವಾದ ಇಲ್ಲಿದೆ. ‘ಇಂಟರ್ ನ್ಯಾಸನಾಲ್’ ಎಂದು ಪ್ರಸಿದ್ಧವಾದ ಜಗತ್ತಿನ ದುಡಿಯುವ ಜನರ, ಚಳುವಳಿಗಳ, ಕಮ್ಯುನಿಸ್ಟರ ‘ನಾಡಗೀತೆ’ಯ ಬಹುಶಃ ಮೊದಲ ಕನ್ನಡ ಅನುವಾದವೂ ಇಲ್ಲಿದೆ. ‘ಇಂಟರ್ ನ್ಯಾಸನಾಲ್’ ಬರೆದ ಯುಜಿನ್ ಪೊಟಿಯೆರ್ ಒಬ್ಬ ಕಮ್ಯೂನ್ ಧೀರನಾಗಿದ್ದ. ಅವನ ಮತ್ತು ಅವನ ಪ್ರಸಿದ್ಧ ಹಾಡಿನ ಕುರಿತೂ ಇಲ್ಲಿದೆ. ಜತೆಗೆ ಪುಸ್ತಕದ ಉದ್ದಕ್ಕೂ ‘ಇಂಟರ್ ನ್ಯಾಸನಾಲ್’ ಸಂಗೀತ ಪಠ್ಯವನ್ನು ವಿವಿಧ ಭಾಷೆಗಳಲ್ಲಿ ಈ ಹಾಡಿನ ಒಂದು ಸಾಲಿನ ಜೊತೆ ಕೊಡಲಾಗಿದೆ. ಬ್ರೆಕ್ಟ್ ಕವನವನ್ನು ಬಿ.ಪೀರ್ ಬಾಷ ಮತ್ತು ‘ಇಂಟರ್ ನ್ಯಾಸನಾಲ್” ಕೆ.ನೀಲಾ ಅನುವಾದಿಸಿದ್ದಾರೆ.

ರಾಮು ಮತ್ತು ನವೀನ್ ಡಿಸೈನ್
Donate Janashakthi Media

Leave a Reply

Your email address will not be published. Required fields are marked *