ಕಾರ್ಮಿಕ ಮುಖಂಡ ವೀರಮಣಿ ಇನ್ನಿಲ್ಲ

ಬೆಂಗಳೂರು: ಸಿಪಿಐ(ಎಂ) ಪಕ್ಷದ ರಾಜಾಜಿನಗರ ವಲಯ ಸಮಿತಿ ಕಾರ್ಯದರ್ಶಿಯಾದ ಕೆ.ವೀರಮಣಿ ಅವರು ನಿಧನರಾಗಿದ್ದಾರೆ.

ಬೆಂಗಳೂರಿನ ಹಳೇ ತಲೆಮಾರಿನ ಜವಳಿ ಕಾರ್ಖಾನೆ ಬಿನ್ನಿ ಮಿಲ್‌ನಲ್ಲಿ ಕಾರ್ಮಿಕ ಮುಖಂಡರು ಮತ್ತು ಸಿಪಿಐ(ಎಂ) ಪಕ್ಷದ ಬೆಂಗಳೂರು ಜಿಲ್ಲಾ ಸಮಿತಿ ಸದಸ್ಯರು ಹಾಗೂ ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷರೂ ಆಗಿದ್ದ ಸಂಗಾತಿ ಕೆ.ವೀರಮಣಿ ಅಗಲಿಗೆಯಿಂದಾಗಿ ಕಾರ್ಮಿಕರಲ್ಲಿ ಸಾಕಷ್ಟು ನೋವನ್ನು ತಂದಿದೆ.

ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ಆರೋಗ್ಯ ಸಂಬಂಧಿಸಿದಂತೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಹೃದಯ ಸಂಬಂಧಿತ ಕಾಯಿಲೆ ತೀವ್ರವಾಗಿ ಬಾಧಿಸಿದ್ದವು.

ವೀರಮಣಿಯವರು ಅತ್ಯಂತ ಸರಳ, ಪ್ರಾಮಾಣಿಕ ಮತ್ತು ದೃಢತೆಯ ಸಂಗಾತಿಯಾಗಿದ್ದರು. ಬಿನ್ನಿ ಮಿಲ್ ಮುಚ್ಚಿದ ನಂತರ ಕಾರ್ಮಿಕರಿಗೆ ನ್ಯಾಯ ಕೊಡಿಸಲು ಕಾನೂನು ಹೋರಾಟವನ್ನು ಕೊನೆಯವರೆಗೂ ನಡೆಸಿದರು. ಮಾಲೀಕ ವರ್ಗದ ದಬ್ಬಾಳಿಕೆ, ಕಾರ್ಮಿಕ ವರ್ಗದ ಮೇಲಿನ ರೌಡಿಗಳ ಹಾವಳಿ ಮುಂತಾದವನ್ನು ಮುಲಾಜಿಲ್ಲದೆ ಎದುರಿಸಿದ ಸಂಗಾತಿ.

ತಮ್ಮ ಜೊತೆಗಿದ್ದ ಎಷ್ಟೋ ಜನ ಕಾರ್ಮಿಕರು ದ್ರೋಹ ಬಗೆದು ಹೋದರೂ, ತಾವು ಮಾತ್ರ ಅಚಲವಾಗಿ ಕಾರ್ಮಿಕ ವರ್ಗದ ಏಳ್ಗೆಗಾಗಿ ಬದ್ಧರಾಗಿ, ಸಿಪಿಐ(ಎಂ) ಪಕ್ಷದ ಜೊತೆಯಲ್ಲಿ ಕೊನೆಯವರೆಗೂ ನಿಂತರು.

ಬೀಡಿ, ಅಗರಬತ್ತಿ, ಪವರ್ ಲೂಂ, ಕಟ್ಟಡ ಕಾರ್ಮಿಕರು ಹೀಗೆ ವಿವಿಧ ವಲಯದ ಅಸಂಘಟಿತ ಕಾರ್ಮಿಕರನ್ನು ಸಂಘಟಿಸಲು ಶ್ರಮಿಸಿದರು. ಒಬ್ಬ ಪುತ್ರ ಮತ್ತು ಪತ್ನಿಯನ್ನು ಅಗಲಿದ್ದಾರೆ.

ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ಅಧ್ಯಕ್ಷರಾದ ಕೆ.ವೀರಮಣಿ ಶ್ರಮವಹಿಸಿ ದುಡಿದಿದ್ದಾರೆ.

ಕಮ್ಯುನಿಸ್ಟ್ ತತ್ವಗಳಿಗೆ ಬದ್ದರಾಗಿದ್ದ ಒಬ್ಬ ಆದರ್ಶದ ಸಂಗಾತಿ ನಿಧನರಾಗಿರುವುದು ಎಲ್ಲರಲ್ಲೂ ದುಖಃವನ್ನು ತಂದಿದೆ.

Donate Janashakthi Media

Leave a Reply

Your email address will not be published. Required fields are marked *