ಕನ್ನಡ ವಿಶ್ವವಿದ್ಯಾಲಯ ಉಳಿಸೋಣ: ವಿದ್ಯಾರ್ಥಿಗಳ ಕರೆಗೆ ಹಲವರು ಸಾಥ್‌

ಬೆಂಗಳೂರು: ಕನ್ನಡ ವಿಶ್ವವಿದ್ಯಾಲಯದ ಉಳಿವಿಗಾಗಿ ಹಾಗೂ ವಿವಿಯ ಮೂಲ ಆಶೋತ್ತರಗಳನ್ನು ರಕ್ಷಿಸಲು ನಾಡಿನ ಹೆಸರಾಂತ ಕವಿಗಳು, ಲೇಖಕರು, ಚಿಂತಕರು, ವಿವಿದ ಸಂಘಟನೆಯ ನಾಯಕರು ಭಾಗಿಯಾಗಿ ಶಕ್ತಿಯನ್ನು ತುಂಬಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತರು.

ಬೆಂಗಳೂರಿನ ಜೈಭೀಮ್ ಭವನದಲ್ಲಿ ಕನ್ನಡ ವಿವಿ ಕನ್ನಡ ನಾಡಿನ ದ್ವನಿಯಾಗಬೇಕಿದ್ದ ಸಂದರ್ಭದಲ್ಲಿ ಹೊಸ ಹೊಸ ಆಡಳಿತಾತ್ಮಕ ದೋಷಗಳಿಗೆ ಬಲಿಯಾಗುತ್ತಿದೆ. ಹಸಿದವರ, ದಲಿತರ, ಶೋಷಿತರ ಹಾಗೂ ದ್ವನಿ ಇಲ್ಲದವರ ಧ್ವನಿಯಂತಿರುವ ಕನ್ನಡ ವಿಶ್ವವಿದ್ಯಾಲಯ ಹಳಿತಪ್ಪಿ ಅದರ ವಿರುದ್ಧದ ದಿಕ್ಕಿನಲ್ಲಿ ಸಾಗಿ ಭ್ರಷ್ಟಾಚಾರ, ಕಮಿಷನ್, ಪೊಲೀಸ್ ಕೇಸು, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಧಕ್ಕೆ, ವೈಯಕ್ತಿಕ ನಿಂದನೆ ಹೀಗೆ ಅನೇಕ ರೀತಿಯ ಸಮಸ್ಯೆಗಳ ತಾಣವಾಗಿದೆ.

ನೆಮ್ಮದಿಯಿಂದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮಾಡಬೇಕಾದವರು ಇಂದು ಭಯಪಡುವ, ಕದ್ದು ಆಲಿಸುವ ಅನುಮಾನಗಳಿಗೆ ಹಾಗೂ ಪ್ರತಿ ನಿತ್ಯ ಧಾರವಾಹಿಯಂತೆ ಪತ್ರಿಕೆಯಲ್ಲಿ ಪ್ರಸಾವಾಗುತ್ತಿರುವುದು ನಿಜಕ್ಕೂ ಎಲ್ಲರು ಇದ್ದು ಯಾರೂ ಇಲ್ಲದಂತೆ ಭಾಸವಾಗುತ್ತಿದೆ.

ಇದೆಲ್ಲದರ ಭಾಗವೆಂಬಂತೆ ಒಟ್ಟು ಕನ್ನಡ ವಿಶ್ವವಿದ್ಯಾಲಯದ ಉಳಿವಿಗಾಗಿ ಸತ್ಯಶೋಧನಾ ಸಮಿತಿ ರಚಿಸಿ ತನಿಖೆಗೆ ಆಗ್ರಹಿಸಲು ಇಂದು ನಾಡಿನ ಕವಿಗಳು ಸಾಹಿತಿಗಳು ಚಿಂತಕರು ಲೇಖಕರು ಹಲವು ಸಂಘಟನೆಯ ನಾಯಕರು ದುಂಡುಮೇಜಿನ ಸಭೆಯನ್ನು ಸೇರಿಲಾಗಿತ್ತು.

ಬಂಜಗೆರೆ ಜಯಪ್ರಕಾಶ್ ಎಸ ಜಿ ಸಿದ್ದರಾಮಯ್ಯ  ಪ್ರೊ. ಎಂ. ಚಂದ್ರ ಪೂಜಾರಿ, ಡಾ.ಕೆ ಪ್ರಕಾಶ್,  ವಸುಂಧರಾ ಭೂಪತಿ,  ಬಿ ಟಿ ಲಲಿತಾ ನಾಯಕ್, ಕೆ ಶರೀಫ , ಎಸ್ ವೈ ಗುರುಶಾಂತ್ , ಗೋಪಾಲಕೃಷ್ಣ ಅರಳಹಳ್ಳಿ, ರಾಜಣ್ಣ, ಅಮರೇಶ ಕಡಗದ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಹಲವು ಸಂಘಟನೆಗಳು ಹಾಗೂ ಪ್ರಮುಖ ವ್ಯಕ್ತಿಗಳಿಗೆ ಭಾಗವಹಿಸಲು ಸಾಧ್ಯವಾಗದೆ ಪರೋಕ್ಷವಾಗಿ ಬೆಂಬಲಿಸಿ ಮುಂದಿನ ದಿನಗಳಲ್ಲಿ ನಮ್ಮೊಂದಿಗೆ ಇರುವುದಾಗಿ ತಿಳಿಸಿದರು.

Donate Janashakthi Media

One thought on “ಕನ್ನಡ ವಿಶ್ವವಿದ್ಯಾಲಯ ಉಳಿಸೋಣ: ವಿದ್ಯಾರ್ಥಿಗಳ ಕರೆಗೆ ಹಲವರು ಸಾಥ್‌

  1. ಕನ್ನಡ ವಿಶ್ವವಿದ್ಯಾಲಯಕ್ಕೆ ಉಳಿವಿಗಾಗಿ ಯುದ್ದವೇ ಆಗುವ ಸಂದರ್ಭ ಬರಬಹುದು. ಕೆಲವು ವಂಚ ಕೋರರಿಂದ ಕೂಡಿದ ನನ್ನ ಉತ್ತಮ ವಿಶ್ವವಿದ್ಯಾಲಯ.

Leave a Reply

Your email address will not be published. Required fields are marked *