ಸೌಹಾರ್ದತೆಗಾಗಿ ಮಾನವ ಸರಪಳಿ ರಚಿಸಿದ ಕನ್ನಡ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು

ಹೊಸಪೇಟೆ : ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸುವ ಮೂಲಕ ಸೌಹಾರ್ದ ಸಂದೇಶ ಸಾರಿದ್ದಾರೆ. 

ವಿಶ್ವವಿದ್ಯಾಲಯದ ‘ಬಿ’ಗೇಟ್‌ಬಳಿ ನಡೆದ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ಚಲುವರಾಜ ಮಾತನಾಡಿ, ಈ ದೇಶದಲ್ಲಿ ಮತ್ತು ರಾಜ್ಯದಲ್ಲಿ ಸೌಹಾರ್ದತೆಯ ಸಂಕೇತವೇ ಮಹಾತ್ಮ ಗಾಂಧಿ ರವರು ಅವರು ದೇಶವನ್ನು ಉದ್ದೇಶಿಸಿ ಹೇಳಿದ್ದು ಗ್ರಾಮ ಸ್ವರಾಜ್ ಉಳಿಯಬೇಕು. ಗ್ರಾಮ ಸ್ವರಾಜ್ ಉಳಿದರೆ ಮಾತ್ರ ಈ ದೇಶ ಉಳಿಯುತ್ತದೆ. ಇಲ್ಲದಿದ್ದರೆ ಈ ದೇಶದ ಮೂಲ ಸ್ವರೂಪವೇ ಬದಲಾಗುತ್ತದೆ. ಆದ್ದರಿಂದ ಯುವಕರು ಗಾಂಧಿ ಅವರನ್ನು ಓದಬೇಕು. ಈದೇಶದ ಧರ್ಮಗಳು ಐಕ್ಯತೆಯನ್ನು, ಸೌಹಾರ್ದತೆ ಸಾರಬೇಕಿದೆ‌. ನಮ್ಮ ದೇಶದ ಸಂವಿಧಾನದ ಪೀಠಿಕೆಯಲ್ಲಿ ಭ್ರಾತೃತ್ವ, ಸಮಾನತೆ ಸಹೋರತೆ ಬೆಳೆಸಲು ಯುವಕರು ಸಿದ್ದರಾಗಬೇಕು. ಅಲ್ಲದೆ ಸಂಶೋಧಕರು ಗಾಂಧಿ ಸ್ವರಾಜ್‌ದ ಮೂಲ ಆಶಯದ ಬಗ್ಗೆ ಹೆಚ್ಚು ಅಧ್ಯಯನ ಶೀಲವಮರಾಗಬೇಕು. ಎಳೆ ಎಳೆಯಾಗಿ ಸಮಾಜಕ್ಕೆ ಬಿತ್ತಬೇಕು. ಸಮಾಜವನ್ನು ಕಾಲ ಕಾಲಕ್ಕೆ ಜೀವಂತವಾಗಿ ಇಡುವ ಮತ್ತು ತಪ್ಪುಗಳನ್ನು ತಿದ್ದಿ ಎಚ್ಚರಿಸುವವರು ನೀವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಂಶೋಧನಾರ್ಥಿ ಮಂಜುನಾಥ ಮಾತನಾಡಿ ಮಹಾತ್ಮ ಗಾಂಧಿ ನಮ್ಮಲ್ಲಿ ಎಂದಿಗೂ ಜೀವಂತ ಅವರು ಕಟ್ಟಿಕೊಟ್ಟ ಎಲ್ಲಾ ಧರ್ಮಗಳ ಸೌಹಾರ್ದ ಸಮಾಜವನ್ನು ನಾವು ಮುನ್ನಡೆಸಬೇಕು. ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಮೊದಲು ಕೊಲೆಗೀಡಾದವರು ಮಹಾತ್ಮ ಗಾಂಧಿ ಅವರೇ ಆದರೆ ಅದರ ಹಿಂದಿನ ಉನ್ನಾರವನ್ನು ಮುಚ್ಚಿಹಾಕಲು ದೇಶದಲ್ಲಿ ಪ್ರಯತ್ನ ಗಳು ನಡೆಯುತ್ತಿವೆ. ಚರಿತ್ರೆಕಾರರು ಎಲ್ಲವನ್ನೂ ಸತ್ಯದಿಂದ ಬರೆದಿಲ್ಲ. ಆದರೆ ಗಾಂಧಿಯನ್ನು ಕೊಂದುದ್ದು ಸತ್ಯ ಅದು ಎಂದೂ ಮಿತ್ಯವಾಗಲು ಸಾಧ್ಯವಿಲ್ಲ ಎಂದರು.

ಪ್ರದೀಪ.ಡಿ.ಡಿ, ದಾದುಹಾಯತ್, ಯರಿಸ್ವಾಮಿ ಮಾತನಾಡಿ ಯುವಜನರನ್ನು ಭಾವನಾತ್ಮಕ ಮತ್ತು ಆಧ್ಯಾತ್ಮಿಕವಾಗಿ‌ ದಿಕ್ಕು ತಪ್ಪಿಸಲಾಗುತ್ತದೆ ಎಂದರು ಮಹೇಶ್, ಮಣಿಕಂಠ ಅವರು ವೈಯಕ್ತಿಕ ಭಕ್ತಿಯನ್ನು ರಾಜಕೀಯ ಮಾಡಿ ಇನ್ನೊಬ್ಬ ರ ಭಾವನೆಗೆ ಧಕ್ಕೆ ತರಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಸಂಶೋಧನ ವಿದ್ಯಾರ್ಥಿಗಳಾದ ಸೋಮಪ್ಪ.ಸಿ, ಲಕ್ಷ್ಮನ್, ನಾಗರಾಜ, ರಾಜು, ಹನುಮಂತ, ಸಂತೋಷ, ಬಸವರಾಜ, ಅಶೋಕ, ದಿನೇಶ್ ಪಾವಗಡ, ಇನ್ನೂ ಅನೇಕರು ಭಾಗಿಯಾಗಿದ್ದರು.

 

Donate Janashakthi Media

Leave a Reply

Your email address will not be published. Required fields are marked *