ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಮಿಂಚುತ್ತಿದ್ದಾಳೆ ಐಶೆ ಘೋಷ್‌

ಬರ್ಧ್ವಾನ್‌: ಜಮುರಿಯಾ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪ್ರಚಾರವು ಕಲ್ಲಿದ್ದಲು ಗಣಿಗಾರಿಕೆಯ ಪ್ರದೇಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುತ್ತಿದೆ.

ಪಶ್ಚಿಮ ಬರ್ಧ್ವಾನ್‌ ಪ್ರದೇಶದ ಜಮುರಿಯಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಐಶೆ ಘೋಷ್‌ ಸ್ಪರ್ಧೆಯು ಗಣಿ ಉದ್ಯಮಿಗಳ ವಿರುದ್ಧವಾಗಿದೆ. ಜಮುರಿಯಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಾಗಿದೆ. ಇಲ್ಲಿ ಟಿಎಂಸಿ ಯಿಂದ ಹರೇರಮ್‌ ಸಿಂಗ್‌ ಹಾಗೂ ಬಿಜೆಪಿಯಿಂದ  ತಪಸ್‌ ರಾಯ್‌ ಸ್ಪರ್ಧೆಯಲ್ಲಿದ್ದಾರೆ.

ಇದನ್ನು ಓದಿ: ರಾಜ್ಯದ ಜನತೆಗೆ ಪಡಿತರ ಕಡಿತಕ್ಕೆ ಸಿಪಿಐ(ಎಂ) ತೀವ್ರ ವಿರೋಧ

ಏಪ್ರಿಲ್‌ 26ರ ಸೋಮವಾರದಂದು ಮತದಾನ ನಡೆಯಲಿದೆ. ಬರ್ಧ್ವಾನ್‌ ಜಿಲ್ಲೆಯ ಹೃದಯಭಾಗದಲ್ಲಿರುವ ಜಮುರಿಯಾ ವಿಧಾನಸಭಾ ಕ್ಷೇತ್ರವು ಸಿಪಿಐ(ಎಂ) ಪಕ್ಷದ ಭದ್ರಕೋಟೆಯಾಗಿತ್ತು.

ಈ ಬಾರಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದಿಂದ ಸ್ವರ್ಧಿಸಿರುವ ಐಶೆ ಘೋಷ್‌ ಕಾನೂನು ವ್ಯಾಸಂಗ ಮಾಡುತ್ತಿರುವ ಜೆಎನ್‌ಯು ವಿದ್ಯಾರ್ಥಿನಿ. ಇವರ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಜನರಲ್ಲಿ ಮತ್ತಷ್ಟು ಹುರುಪು ನೀಡಿತು.

ಯುವ ವಿದ್ಯಾರ್ಥಿ ನಾಯಕಿ ಈಗಾಗಲೇ ಜೆಎನ್‌ಯು ಇಡೀ ದೇಶಕ್ಕೆ ಪರಿಚಿತರು ಹಾಗೂ ಈಗಾಗಲೇ  ನಡೆದ ಸಿಎಎ ಮತ್ತು ಹೊಸ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯಲ್ಲಿ ಪ್ರಮುಖವಾಗಿ ಭಾಗವಹಿಸಿದ ಹೋರಾಟಗಾರ್ತಿ.

ಕಲ್ಲಿದ್ದಲು ಗಣಿ ಕಾರ್ಮಿಕ ಮತ್ತು ಪಕ್ಷದ ಕಾರ್ಮಿಕ ವಿಭಾಗದ ಐಎನ್‌ಟಿಟಿಯುಸಿಯಲ್ಲಿರುವ ಗಣಿ ಕಾರ್ಮಿಕರ ಸಂಘದ ಮುಖಂಡ ಹರೇರಾಮ್ ಸಿಂಗ್ ಅವರನ್ನು ತೃಣಮೂಲ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾರೆ. ಬದಲಾದ ಸನ್ನಿವೇಶದಲ್ಲಿ ಈ ಬಾರಿಯೂ ಕಲ್ಲಿದ್ದಲು ಗಣಿಪ್ರದೇಶವನ್ನು ವಶಕ್ಕೆ ಪಡೆಯಲು ಟಿಎಂಸಿ ಹವಣಿಸುತ್ತಿದೆ. ಬಿಜೆಪಿ ಅಭ್ಯರ್ಥಿ ತಪಸ್ ರಾಯ್ ಸ್ಥಾನವನ್ನು ಗೆಲ್ಲಲು ಹರಸಾಹಸ ಪಡುತ್ತಿದ್ದಾರೆ.

ಇದನ್ನು ಓದಿ: ಮಾಜಿ ಸಚಿವ ಅನಿಲ್ ದೇಶಮುಖ್ ಮನೆ ಮೇಲೆ ಸಿಬಿಐ ದಾಳಿ

ಗಣಿಗಾರಿಕೆ ಪ್ರದೇಶವಾದ ಇಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ, ಮಾಲಿನ್ಯ ಮತ್ತು ಕೆಟ್ಟ ರಸ್ತೆಗಳಿಂದಾಗಿ ಜನರಲ್ಲಿ ದಿನನಿತ್ಯದ ಜೀವನದಲ್ಲಿ ಎದುರಾಗುವ ಅತ್ಯಂತ ಪ್ರಮುಖ ಸಮಸ್ಯೆಗಳಾಗಿವೆ. ಕ್ಷೇತ್ರದಲ್ಲಿ ಕೆಲವೇ ಕೆಲವು ಶಾಲೆಗಳಿದ್ದರೂ, ಕೇವಲ ಒಂದು ಕಾಲೇಜು ಮಾತ್ರ ಇದೆ.

ದಾಮೋದರ್ಪುರದ ನಿವಾಸಿ ಮುಕ್ತಾ ದಾಸ್ ಅವರು “ನಾವು ವೈದ್ಯಕೀಯ ಅವಶ್ಯಕತೆಗಳಿಗಾಗಿ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅವಲಂಬಿಸಬೇಕಾಗಿದೆ ಅಥವಾ ಚಿಕಿತ್ಸೆಗಾಗಿ ದುರ್ಗಾಪುರ ಅಥವಾ ಅಸನ್ಸೋಲ್‌ ಗೆ ಪ್ರಯಾಣಿಸಬೇಕು” ಎಂದು ಹೇಳಿದರು.

ಜಮುರಿಯಾ ಕ್ಷೇತ್ರದಲ್ಲಿ 2.22 ಲಕ್ಷ ಮತದಾರರಲ್ಲಿ 27 ಶೇಕಡಾ ಅಲ್ಪಸಂಖ್ಯಾತ ಸಮುದಾಯದವರಾಗಿದ್ದರೆ, ಶೇಕಡಾ 25 ರಷ್ಟು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದವರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ: ಕೃಷಿಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ 150 ನೇ ದಿನ

ಕಳೆದ 10 ವರ್ಷಗಳಲ್ಲಿ ಕೆಲವೇ ಕೆಲವು ಕಬ್ಬಿಣದ ಕಾರ್ಖಾನೆಗಳ ಹೊರತಾಗಿ ಜಮುರಿಯಾದಲ್ಲಿ ಯಾವುದೇ ಪ್ರಮುಖ ಉದ್ಯಮಗಳು ಸ್ಥಾಪನೆಯಾಗಿಲ್ಲ ಎಂದು ಸಿಪಿಐ (ಎಂ) ಪ್ರದೇಶ ಕಾರ್ಯದರ್ಶಿ ಮನೋಜ್ ದತ್ತಾ ಹೇಳಿದ್ದಾರೆ.

“ಎಡ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸ್ಥಾಪನೆಯಾದ ಒಂದು ಉಕ್ಕಿನ ಕಾರ್ಖಾನೆ ಸೇರಿದಂತೆ ಕನಿಷ್ಠ ಎರಡು ಕೈಗಾರಿಕೆಗಳು ಇರುವುದು ಬಿಟ್ಟರೆ, ನಿರುದ್ಯೋಗ ನಿವಾರಣೆಗಾಗಿ ಸ್ಥಳೀಯ ಜನರಿಗೆ ಅಗತ್ಯವಾದ ಉದ್ಯೋಗಾವಕಾಶಗಳು ವಂಚಿತವಾಗುತ್ತವೆ” ಎಂದು ದತ್ತಾ ತಿಳಿಸಿದರು.

ಸಿಪಿಐ (ಎಂ) ಈ ಕ್ಷೇತ್ರವನ್ನು ಹಿಡಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ಘೋಷ್ ಜೆಎನ್‌ಯುನಲ್ಲಿ ಶುಲ್ಕ ವಿರೋಧಿ ಪ್ರತಿಭಟನೆಯನ್ನು ಮುನ್ನಡೆಸಿದಂತೆಯೇ, ಜಮುರಿಯಾದ ಒಟ್ಟಾರೆ ಅಭಿವೃದ್ಧಿಗೆ ಅವರು ವಿಧಾನಸಭೆಯಲ್ಲಿಯೂ ಧ್ವನಿ ಎತ್ತಲಿದ್ದಾರೆ ಎಂದು ಹೇಳಿದರು.

ಈ ಚುನಾವಣೆಯಲ್ಲಿ ಪ್ರಮುಖ ವಿಷಯಗಳಾಗಿ ಜಮುರಿಯಾದಲ್ಲಿ ಕಲ್ಲಿದ್ದಲು ಮತ್ತು ಮರಳು ಕಳ್ಳಸಾಗಣೆಯ ವಿಷಯಗಳು ಚರ್ಚೆಯಲ್ಲಿದ್ದವು.

Donate Janashakthi Media

Leave a Reply

Your email address will not be published. Required fields are marked *