ಕಾಳಿಸ್ವಾಮಿ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಲು ಆಗ್ರಹ

ತುಮಕೂರು : ಇನ್ನೂ ೦೯ ಮುಸ್ಲಿಂರ ತಲೆಗಳು ಬೇಕು ಎಂದು ಹೇಳುವುದಲ್ಲದೇ, ಘನತೆವೆತ್ತ ಮುಖ್ಯಮಂತ್ರಿಗಳನ್ನು ಎತ್ತಲಿ ಅವರಿಗೆ ತಾಕತ್ತಿದ್ರೆ, ಗೃಹ ಸಚಿವರನ್ನು ಸೇರಿದಂತೆ ಹಲವಾರು ಮುಖಂಡರ ಜೀವ ಹತ್ಯೆ ಮಾಡುವಂತೆ ಸಂವಿಧಾನ ವಿರೋಧಿ ಪ್ರಚೋಧನಕಾರಿ ಹೇಳಿಕೆ ನೀಡಿದ್ದ ಕಾಳಿಸ್ವಾಮಿ ವಿರುದ್ಧ ಸುಮೊಟೋ ಪ್ರಕರಣವನ್ನು ದಾಖಲಿಸಿ, ಕ್ರಮಗೊಳ್ಳಲು ಪ್ರಗತಿಪರ ಸಂಘಟನೆಗಳು ಆಗ್ರಹಿಸಿವೆ.

“ಕಾಳಿಸ್ವಾಮಿ ಅಲಿಯಾಸ್ ರಿಷಿಕುಮಾರ” ಎಂಬುವವರು ದಿನಾಂಕ, 29/೦7/2022 ರಂದು ಬಜರಂಗದಳ ಮತ್ತು ಹಿಂದೂಪರಿಷತ್ ನವರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಮಂಗಳೂರಿನ ಸುರತ್ಕಲ್‌ನಲ್ಲಿ ಫಾಜೀಲ್ ಎಂಬ ಯುವಕನನ್ನು ಹೊಡೆದಿದ್ದಾರೆ, ನಮ್ಮವರೇ (ಹಿಂದೂ ಸಂಘಟನೆಯವರು) ಹೊಡೆದಿದ್ದರೆ ನಾನು ಅವರನ್ನು ಅಭಿನಂದಿಸುತ್ತೇನೆ, ಇನ್ನೂ ೦೯ ಮುಸ್ಲಿಂರ ತಲೆಗಳು ಬೇಕು ಎಂದು ಹೇಳುವುದಲ್ಲದೇ, ಘನತೆವೆತ್ತ ಮುಖ್ಯಮಂತ್ರಿಗಳನ್ನು ಎತ್ತಲಿ ಅವರಿಗೆ ತಾಕತ್ತಿದ್ರೆ, ಗೃಹ ಸಚಿವರನ್ನು ಸೇರಿದಂತೆ ಹಲವಾರು ಮುಖಂಡರ ಜೀವ ಹತ್ಯೆ ಮಾಡುವಂತೆ ಸಂವಿಧಾನ ವಿರೋಧಿ ಪ್ರಚೋಧನಕಾರಿ ಹೇಳಿಕೆಗಳನ್ನು ನೀಡಿದ್ದರು. ಇದನ್ನು ಖಂಡಿಸಿ ಮಾನ್ಯ ತುಮಕೂರು (ಎಎಸ್‌ಪಿ)ಪೋಲಿಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ಕ್ರಮಕ್ಕೆ ಪ್ರಗತಿಪರ ಸಂಘಟನೆಗಳು ಆಗ್ರಹಿಸಿವೆ.

ದೂರು ಸ್ವೀಕರಿಸಿ ತುರ್ತು ಎಫ್.ಐ.ಆರ್‌ಗೆ ಸೂಚಿಸಿದ ಎಎಸ್‌ಪಿ ಉದೇಶ್‌ಕುಮಾರ್ :  ದೂರು ಸ್ವೀಕರಿಸಿ ಮಾತನಾಡಿದ ಉದೇಶ್ ಇದು ಅಚಾನಕ್ಕಾಗಿ ನಡೆದಿರುವ ಘಟನೆ ಕೋಮು ಆಶಾಂತಿ ಸೃಷ್ಠಿಸುವ ಯಾರೋಬ್ಬರನ್ನು ಸುಮ್ಮನೇ ಬಿಡುವುದಿಲ್ಲ ಅವರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ. ಕಾರ್ಯಕ್ರಮದ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಪೋಲಿಸ್ ಇಲಾಖೆ ಗಮನಕ್ಕೂ ತರದೇ ಈತರದ ಪ್ರಕ್ಷುಬ್ದ ವಾತವರಣಕ್ಕೆ ಕಾರಣೀಕರ್ತರಾದವರ ಮೇಲು ಕ್ರಮಕ್ಕೆ ಮುಂದಾಗುತ್ತೇವೆ ಎಂದರು.

ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಎ,ನರಸಿಂಹಮೂರ್ತಿ, ಸೈಯದ್‌ಮುಜೀಬ್, ಸುಬ್ರಮಣ್ಯ, ತಾಜುದ್ದೀನ್‌ಷರೀಫ್, ದಲಿತ ಸಂಘಟನೆಗಳ ಮುಖಂಡರುಗಳಾದ ಪಿ,ಎನ್,ರಾಮಯ್ಯ, ಕೇಬಲ್ ರಘು, ಕೊಟ್ಟಶಂಕರ್, ಮರಳೂರು ಕೃಷ್ಣಮೂರ್ತಿ, ಜೆಸಿಬಿ ವೆಂಕಟೇಶ್, ರಾಮಯ್ಯ,ಟಿಸಿ, ಗಿರೀಶ್, ಮತ್ತು ಅಲ್ಪಸಂಖ್ಯಾತ ಮುಖಂಡರಾದ ಸೈಯದ್‌ಬುರ್ಹಾನುದ್ದೀನ್, ಕೊಳಗೇರಿ ಹಿತರಕ್ಷಣಾ ಸಮಿತಿಯ ಅರುಣ್, ತಿರುಮಲಯ್ಯ, ಸಂವಿಧಾನ ಸ್ನೇಹಿ ಬಳಗದ ತೇಜಸ್‌ಕುಮಾರ್, ಪಿಯುಸಿಎಲ್ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿಇನ್ನೂ 9 ಜನ ಮುಸ್ಲಿಮರ ತಲೆ ಕಡಿಯಬೇಕು – ಕಾಳಿಸ್ವಾಮಿ ವಿವಾದಾತ್ಮಕ ಹೇಳಿಕೆ

Donate Janashakthi Media

Leave a Reply

Your email address will not be published. Required fields are marked *