ಕಲೆಯನ್ನು ಉಳಿಸುವ ಬೆಳೆಸುವ ಕೆಲಸವನ್ನು ಸಮಾಜದ ಆರೋಗ್ಯದ ಕಾಳಜಿ ಇರುವವರೇ ಮಾಡಬೇಕು : ಟಿ.ಎಸ್.ವೇಣುಗೋಪಾಲ್

ಪ್ರದರ್ಶನ ಕಲೆಗಳ (Performing Arts) ಪ್ರದರ್ಶನ ಪೂರ್ಣವಾಗಿ ನಿಂತು ಹೋಗಿರುವುದು ಕೊರೊನಾ ಕಾಲದ ದಾರುಣ ಪರಿಣಾಮಗಳಲ್ಲಿ ಒಂದು. ಆದ್ದರಿಂದಪ್ರದರ್ಶನ ಕಲೆಗಳು : ಕೊರೊನಾ ಕಾಲದಲ್ಲಿ ಮತ್ತು ನಂತರ ವಿಷಯದ ಕುರಿತು ಸುತ್ತ ನಾಡಿನ ಕಲಾವಿದರು, ತಾಂತ್ರಿಕ/ತೆರೆಮರೆಯ ಸಹಾಯಕರು, ಸಂಘಟಕರು, ಕಲಾವಿಮರ್ಶಕರು ಮತ್ತಿತರ ಆಸಕ್ತರುಗ¼ನ್ನು ಜನಶಕ್ತಿ ಮೀಡಿಯಾ 5 ಪ್ರಶ್ನೆಗಳನ್ನು ಕೇಳಿತ್ತು. ಇಲ್ಲಿ ಸಂಗೀತ ಕ್ಷೇತ್ರದಲ್ಲಿ ಆಸಕ್ತರಾದ ಮತ್ತು ಅದರ ಸಂಘಟಕರು, ಕಲಾವಿಮರ್ಶಕರು ಇತ್ಯಾದಿ ಹಲವು ಆಯಾಮಗಳಲ್ಲಿ ಕೆಲಸ ಮಾಡಿರುವ ಮತ್ತು ಹಿರಿಯ ಚಿಂತಕ ಲೇಖಕ/ಅನುವಾದಕರೂ ಆಗಿರುವ ಟಿ.ಎಸ್.ವೇಣುಗೋಪಾಲ್ ಅವರು ಪ್ರಧಾನವಾಗಿ ಸಂಗೀತ ಕ್ಷೇತ್ರಕ್ಕೆ ಅನ್ವಯವಾಗುವಂತೆ ಪ್ರಶ್ನೆಗಳಿಗೆ ಕೊಟ್ಟ ಉತ್ತರ ಇಲ್ಲಿದೆ.

ಟಿ.ಎಸ್.ವೇಣುಗೋಪಾಲ್

  1. ಕೊರೊನಾ ಕಾಲದಲ್ಲಿ ಪ್ರದರ್ಶನ ಕಲೆಗಳ (ನಾಟಕ, ಸಿನಿಮಾ, ಸಂಗೀತ, ನೃತ್ಯ, ಜಾನಪದ) ಪ್ರದರ್ಶನ ಪೂರ್ಣವಾಗಿ ನಿಂತು ಹೋಗಿವೆ. ಕಲಾವಿದರ ಮೇಲೆ, ತಾಂತ್ರಿಕ/ತೆರೆಮರೆಯ ಸಿಬ್ಬಂದಿ ಮೇಲೆ, ಸಮಾಜದ ಮೇಲೆ, ಕಲಾ ಪ್ರಕಾರದ ಮೇಲೆ ಇದರ ಪರಿಣಾಮಗಳೇನು? ಇವುಗಳು ಕೊರೊನೋತ್ತರ ಕಾಲದಲ್ಲೂ ಮುಂದುವರೆಯಬಹುದೇ?

ಕೊರೊನಾ ಕಾಲದಲ್ಲಿ ಪ್ರದರ್ಶನ ಕಲೆಗಳ ಪ್ರದರ್ಶನ ನಿಂತಿದೆ. ಕಲಾವಿದರು, ವಾದ್ಯ ತಯಾರಕರು, ಅದಕ್ಕೆ ಪೂರಕ ಉದ್ಯೋಗದಲ್ಲಿ ನಿರತರಾಗಿದ್ದವರು ಉದಾಹರಣೆಗೆ ಧ್ವನಿ ವರ್ಧಕಗಳ ವ್ಯವಸ್ಥೆ ಮಾಡುತ್ತಿದ್ದವರು ಹೀಗೆ ಎಲ್ಲರ ಬದುಕು ಮೂರಾಬಟ್ಟೆಯಾಗಿದೆ. ಜೊತೆಗೆ ಉಳಿದ ಸಭೆ ಸಮಾರಂಭಗಳು ನಿಂತಿರುವುದು ಕೂಡ ಸಮಸ್ಯೆಯನ್ನು ತೀವ್ರಗೊಳಿಸಿದೆ. ಉದಾಹರಣೆಗೆ ಮದುವೆ ಇತ್ಯಾದಿ ಸಮಾರಂಭಗಳು ನಿಂತಿರುವುದರಿAದ ಓಲಗ, ತವಿಲು ಕಲಾವಿದರಿಗೆ ಸಮಸ್ಯೆಯಾಗಿದೆ. ಇವರಲ್ಲಿ ಕೆಲವರು ನಂಬಿಕೊAಡಿದ್ದ ಉದ್ಯೋಗಗಳು ಹೇರ್ ಕಟಿಂಗ್ ಅಂತಹ ಕೆಲಸಗಳು ನಡೆಯುತ್ತಿಲ್ಲ.  ಕೊರೊನಾ ಪಿಡುಗು ಇಡೀ ಸಮಾಜವನ್ನು ಬಾಧಿಸಿರುವುದರಿಂದ ಎಲ್ಲಾ ಕಡೆಗಳಿಂದ ಕಲಾವಿದರ ಮೇಲೆ ಪರಿಣಾಮ ಬೀರಿದೆ. ಬಹುಷಃ ಈವರೆಗಿನ ಬಿಕ್ಕಟ್ಟಿಗೆ ಹೋಲಿಸಿದರೆ ವ್ಯಾಪ್ತಿಯಲ್ಲಿ ಪರಿಣಾಮದಲ್ಲಿ ಇದು ಹೆಚ್ಚು ತೀವ್ರವಾದ ಪಿಡುಗು. ಇದು ಬೇರೆ ಕಲಾ ಪ್ರಕಾರಗಳ ವಿಷಯದಲ್ಲೂ ನಿಜ.

  1. ಇದರಿಂದಾಗಿ ತಾತ್ಕಾಲಿಕವಾಗಿಯಂತೂ ಹೆಚ್ಚಿನ ಪ್ರದರ್ಶನ ಕಲೆಗಳು ಆನ್ಲೈನ್ ವೇದಿಕೆಗಳ ಮೊರೆ ಹೋಗಿವೆ. ಇದರ ಸಾಧಕಬಾಧಕಗಳೇನು? ವರೆಗೆ ಕಲಾವಿದರು, ಸಮಾಜ, ಕಲಾಪ್ರಕಾರ ಮತ್ತು ಸಾಮೂಹಿಕ ಸಂಸ್ಕೃತಿ ಮೇಲೆ ಇದರ ಪರಿಣಾಮಗಳೇನು? ಇದಕ್ಕೆ ಪರ್ಯಾಯವಿದೆಯೇ?

ಸಾಮಾನ್ಯವಾಗಿ ಪಿಡುಗುಗಳ ಜೊತೆಗೆ ಸಂಸ್ಕೃತಿಯ ವಿಕಾಸವೂ ನಡೆಯುತ್ತದೆ. ಇದನ್ನು ಪ್ಲೇಗಿನ ಸಮಯದಲ್ಲಿ ಯುರೋಪಿನಲ್ಲಿ ಹಾಗು ಇತರ ಕಡೆಗಳಲ್ಲಿ ನೋಡಿದ್ದೇವೆ. ಎರಡನೆಯ ಮಹಾಯುದ್ಧದ ನಂತರವೂ ಇದು ಆಗಿದೆ. ಜಾಗತಿಕವಾಗಿ ಆಗಿರುವ ಲಾಕ್ ಡೌನಿನಿಂದಾಗಿ ತಮ್ಮನ್ನು ಅಭಿವ್ಯಕ್ತಿಸಿಕೊಳ್ಳಲು ಹೊಸ ಸೃಜನಶೀಲ ಹಾದಿಯನ್ನು ಹುಡುಕಿಕೊಳ್ಳಲೇ ಬೇಕಾದ ಒತ್ತಡ ಹಾಗೂ ತುರ್ತು ಎರಡೂ ಉಂಟಾಗಿದೆ. ಸಂಗೀತವನ್ನು ಭರವಸೆಯ ಸಂಕೇತವಾಗಿ ಜನರ ಗ್ರಹಿಸುವ ಘಟನೆಗಳು ವಿಶ್ವದ ಎಲ್ಲೆಡೆ ಕಂಡು ಬರುತ್ತಿದೆ. ಇಟಲಿಯ ಬಾಲ್ಕನಿಯ ಕಚೇರಿಗಳ ವಿಡಿಯೋ ಇಂದು ಎಲ್ಲೆಡೆ ವೈರಲ್ ಆಗಿ ಹರಿದಾಡುತ್ತಿದೆ. ಈಗ ಸಾಮಾಜಿಕ ಮಾಧ್ಯಮಗಳ ವಿಶೇಷವಾಗಿ ಫೇಸ್ ಬುಕ್, ಯು ಟ್ಯೂಬ್ ಇತ್ಯಾದಿ ಸಾಮಾಜಿಕ ಮಾಧ್ಯಮಗಳ ಮೂಲಕ ಕಲೆಯನ್ನು ಪ್ರದರ್ಶಿಸುವ ಪ್ರಯತ್ನ ತೀವ್ರವಾಗಿದೆ. ಇದು ಕೊರೋನಾಗಿಂತ ಮೊದಲೇ ಪ್ರಾರಂಭವಾಗಿತ್ತು. ಈಗ ಅದು ಹೆಚ್ಚಾಗಿದೆ. ಮೊದಲಲ್ಲಿ ಪ್ರಮುಖ ಕಲಾವಿದರಷ್ಟೇ ಪ್ರದರ್ಶನ ನೀಡುತ್ತಿದ್ದರು. ಈಗ ಒಟ್ಟಾರೆಯಾಗಿ ಪಕ್ಕವಾದ್ಯದವರೊಂದಿಗೆ ಪ್ರದರ್ಶನ ನೀಡಲಾಗುತ್ತಿದೆ. ಈಗ ಹೊಸ ಸ್ಟುಡಿಯೋ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಜೊತೆಗೆ ತಂತ್ರಜ್ಞಾನವೂ ಇದಕ್ಕೆ ತುಂಬಾ ಬೇಗ ಸ್ಪಂದಿಸುತ್ತಿದೆ. ನೇರವಾಗಿ stream ಮಾಡುವ ಕ್ಯಾಮೆರಾ ಮುಂತಾದ ತಂತ್ರಜ್ಞಾನ ಬರುತ್ತಿದೆ. ಅದಕ್ಕೆ ಪೂರಕವಾದ ಸಾಫ್ಟ್ವೇರುಗಳೂ ತಯಾರಾಗುತ್ತಿವೆ. ಜೊತೆಗೆ ಹೊರಗೆ ಹೋಗಲಾಗದ ಪರಿಸ್ಥಿತಿಯಲ್ಲಿ ಇದಕ್ಕೆ ಬೇಡಿಕೆಯೂ ಸೃಷ್ಟಿಯಾಗುತ್ತಿದೆ. ಆದರೆ ಇದರಿಂದ ಕಲೆಯ ಮೇಲೂ ಪರಿಣಾಮ ಆಗಬಹುದೆ? ಖಂಡಿತಾ ಆಗಬಹುದು. ಲೈಕುಗಳನ್ನು, ವ್ಯೂಸ್‌ಗಳನ್ನು ಲೆಕ್ಕ ಹಾಕಿಕೊಂಡು ಕಲಾವಿದರ ಸ್ಥಾನ ನಿರ್ಧಾರಗೊಳ್ಳುವ ಸ್ಥಿತಿ ಬರುವ ಅಪಾಯವೂ ಇದೆ. ಆದರೆ ಮೊದಲಿಗೆ ಕೇವಲ ಸಭೆಯಲ್ಲಿದ್ದ ನೂರೋ ಇನ್ನೂರೋ ಜನರ ಬದಲು ಇಂದು ಸಾವಿರಾರು ಜನ ಬೇರೆ ಬೇರೆ ಸ್ಥಳಗಳಲ್ಲಿ ನೋಡುವ ಅವಕಾಶ ತೆರೆದುಕೊಂಡಿದೆ. ಹೊಸ ಶ್ರೋತೃಗಳು ಇಂದು ಸೃಷ್ಟಿಯಾಗಿದ್ದಾರೆ.  ಇದು ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿಲ್ಲ. ಆನ್ ಲೈನ್ ಸಂಗೀತ ಕಲಿಕೆಯೂ ಹೆಚ್ಚಿದೆ. ಕೊರೋನ ಅಂತಹ ಮಾರುಕಟ್ಟೆಯನ್ನು ಹೆಚ್ಚಿಸಿದೆ. ಇದು ಹಾಗೆ ಉಳಿಯುವುದೊ ನೋಡಬೇಕು. ಅದು ಹಲವು ಅಂಶಗಳನ್ನು ಆಧರಿಸಿದೆ.

  1. ಬದಲಾವಣೆ ತಾತ್ಕಾಲಿಕವೇ? ಅಥವಾ ಶಾಶ್ವತವಾಗಲಿವೆಯೇ? ಶಾಶ್ವತವಾಗುವುದಾದರೆ ಕಲಾವಿದರು, ಸಮಾಜ, ಕಲಾಪ್ರಕಾರ ಮತ್ತು ಸಾಮೂಹಿಕ ಸಂಸ್ಲೃತಿಗಳ ಮೇಲೆ ಇದರ ದೂರಗಾಮಿ ಪರಿಣಾಮಗಳೇನು?

ಒಂದು ಹೊಸ ಮಾರ್ಗ ತೆರೆದುಕೊಂಡ0ತೆ ಆ ಮಾರ್ಗದಲ್ಲಿ ಪ್ರಯೋಗಗಳು ಹೆಚ್ಚುತ್ತಾ, ಹೊಸ ಅವಕಾಶಗಳು ತೆರೆದುಕೊಳ್ಳುತ್ತಾ ಹೋದಂತೆ ಅದರ ಪರಿಣಾಮವೂ ಕಲಾಪ್ರಕಾರಗಳ ಮೇಲೆ ಆಗುವುದು ಸ್ವಾಭಾವಿಕ. ಅದರಲ್ಲಿ ಎಷ್ಟೋ ಹಾಗೆ ಉಳಿದುಕೊಳ್ಳುವುದು ಕೂಡ ಅನಿವಾರ್ಯ. ಕೊರೊನಾ ಇಂದ ತೀವ್ರಗೊಂಡ ಬದಲಾವಣೆಗಳು ಖಂಡಿತಾ ಉಳಿದುಕೊಳ್ಳುತ್ತವೆ. ಜೊತೆಗೆ ಪಾರಂಪರಿಕ ಮಾರ್ಗದ ಜೊತೆಗೂ ತೆಕ್ಕೆಹಾಕಿಕೊಂಡು ಮುಂದುವರಿಯುವ ಸಾಧ್ಯತೆಯೂ ಇದೆ. ಅಂದರೆ ಬಹುತೇಕ ನೇರ ಪ್ರದರ್ಶನದ ಜೊತೆ ಜೊತೆಗೆೆ ಆನ್‌ಲೈನಿನಲ್ಲೂ ಬಿತ್ತರಗೊಳ್ಳುವ ಸಾಧ್ಯತೆಗಳು ಹೆಚ್ಚು. ಅದು ಒಳ್ಳೆಯದೇ. ಆ ಮಟ್ಟಿಗೆ ಇದರ ರೀಚ್ ಹೆಚ್ಚಾಗುತ್ತದೆ. ಅದು ಕಲೆಯ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು. ಇದು ಅಭಿರುಚಿಯನ್ನು ಬದಲಿಸಬಹುದು. ಅದರೆ ಹೀಗೆ ನಡೆಯುತ್ತಿರುವ ಬಹುಪಾಲು ಪ್ರದರ್ಶನಗಳಲ್ಲಿ ಕಲಾವಿದರಿಗೆ ಸೂಕ್ತ ಸಂಭಾವನೆ ದೊರಯುತ್ತಿಲ್ಲ. ಪ್ರದರ್ಶನ ನೀಡಬೇಕೆಂಬ ಬಯಕೆ ಅವರನ್ನು ಇದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿರುವುದೂ ನಿಜ. ಆದರೆ ಇದರಿಂದ ಅವರ ಶ್ರೋತೃ ಬಳಗ ಹೆಚ್ಚಿರುವುದೂ ನಿಜ. ಇಂತಹ ಬಹುಪಾಲು ಕಾರ್ಯಕ್ರಮಗಳಿಗೆ ಪ್ರಾಯೋಜಕರು ಸಿಗುವುದು ಇಂದಿನ ಆರ್ಥಿಕ ಸಂಕಷ್ಟದ ದಿನಗಳಲ್ಲಿ ಕಷ್ಟ. ಇದನ್ನು ಮಾರುಕಟ್ಟೆ ಮಾಡುವ ವ್ಯವಸ್ಥೆ ಕ್ಲಾಸಿಕಲ್ ಸಂಗೀತದ ದೃಷ್ಟಿಯಿಂದ ಇನ್ನೂ ಗಟ್ಟಿಯಾಗಿ ರೂಪುಗೊಂಡಿಲ್ಲ. ಸಧ್ಯಕ್ಕಂತೂ ಕಲಾವಿದರಿಗೆ ಇದು ಆರ್ಥಿಕ ಭದ್ರತೆಯನ್ನು ಕೊಟ್ಟಿಲ್ಲ. ಸಾಮಾನ್ಯವಾಗಿ ಆರ್ಥಿಕತೆ ಬಲವಾಗಿದ್ದಾಗ ಕಲೆಗೆ ಪ್ರೋತ್ಸಾಹ ಸಿಗುತ್ತದೆ. ಅಥವಾ ಕಲೆ ಎನ್ನುವುದು ಒಂದು ಲಾಭದಾಯಕ ಉದ್ದಿಮೆಯಾಗಿ ಬೆಳೆಯಬೇಕು. ಅದು ಬೆಳೆದಾಗಲೂ ಅದರ ಪ್ರಯೋಜನ ಎಲ್ಲರಿಗೂ ಸಿಗುವುದಿಲ್ಲ. ಒಂದು ಕಂದಕ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚು. ಸ್ಥಳೀಯ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿದ್ದ ಜಾನಪದ ಕಲಾವಿದರು ಇದರಲ್ಲಿ ಬದುಕುಳಿಯುವುದು ಕಷ್ಟವಾಗಬಹುದು. ತಂತ್ರಜ್ಞಾನ ತನ್ನದೇ ಆದ ರೀತಿಯಲ್ಲಿ ಒಂದು ವಿಭಜನೆಯನ್ನು ಹುಟ್ಟಿಹಾಕುತ್ತದೆ. ಎಲ್ಲಾ ಕಡೆಗಳಲ್ಲಿಯೂ ಆಗುವಂತೆ ಇದರ ಲಾಭವೂ ಮೊದಲಿಗೆ ತಲುಪುವುದು ಅದನ್ನು ಬಳಸಿಕೊಳ್ಳುವ ಸಾಮರ್ಥ್ಯ ಇರುವವರಿಗೆ. ತಂತ್ರಜ್ಞಾನದಲ್ಲೂ ಶಿಫ್ಟ್ ಆಗಬಹುದು. ಉದಾಹರಣೆಗೆ ಕೇವಲ ಧ್ವನಿವ್ಯವಸ್ಥೆ ಮಾಡುತ್ತಿದ್ದವರು ಸಾಲುವುದಿಲ್ಲ. ವಿಡಿಯೋ ತಂತ್ರಜ್ಞಾನ ಮತ್ತು ಅದನ್ನು stream ಮಾಡುವ ಕೌಶಲವೂ ಬೇಕಾಗುತ್ತದೆ.

  1. ಆನ್ಲೈನ್ ವೇದಿಕೆಗಳ ಒಡೆತನದ ಮತ್ತು ಆಳುವವರ ಸ್ವರೂಪದ ಪ್ರಭಾವ ಅದರ ಮೇಲೆ ಏನಿರುತ್ತದೆ?

ತಂತ್ರಜ್ಞಾನವನ್ನು ಹೆಚ್ಚೆಚ್ಚು ಅವಲಂಬಿಸಿದ0ತೆಲ್ಲಾ ಕಲೆ ಎನ್ನುವುದು ಒಂದು ವರ್ಗವನ್ನು, ಕೆಲವು ಕಲಾ ಪ್ರಕಾರಗಳನ್ನು ಸ್ವಾಭಾವಿಕವಾಗಿಯೇ ಹೊರಗಿಡುತ್ತದೆ. ಚಾರಿತ್ರಿಕವಾಗಿ ಹೀಗೆ ನಡೆದುಕೊಂಡು ಬಂದಿದೆ. ಹೀಗೆ ಅಂಚಿಗೆ ಸರಿದುಹೋಗುತ್ತಿರುವ ಕಲಾ ಪ್ರಕಾರವನ್ನು, ಗುಂಪನ್ನು ಮುಖ್ಯವಾಹಿನಿಯಲ್ಲಿ ತರುವ ಜವಾಬ್ದಾರಿ ಇದೆ. ಲಾಭವೇ ಕೇಂದ್ರವಾಗಿರುವ ವ್ಯವಸ್ಥೆಯಲ್ಲಿ ಇದನ್ನು ಸರ್ಕಾರದಿಂದ ನಿರೀಕ್ಷಿಸುವುದು ಸಾಧ್ಯವಿಲ್ಲ. ಬಂಡವಾಳ ವ್ಯವಸ್ಥೆ ಬೆಳೆದಷ್ಟೂ ಕಲೆಯ ಪೋಷಣೆಯಿಂದ ಸರ್ಕಾರ ದೂರ ಸರಿಯುತ್ತದೆ. ಅದು ಪ್ರಯೋಜನಕ್ಕೆ ಬಾರದಂತಾಗುತ್ತದೆ. ಬಂಡವಾಳಿಗರು ಅದನ್ನು ಪೋಷಿಸುವುದು ಸಾಧ್ಯವಿಲ್ಲ. ಕಲೆಯ ಧ್ವನಿಯೂ ಅವರ ಪೋಷಣೆಯಲ್ಲಿ ಬದಲಾಗಿಬಿಡುತ್ತದೆ. ಜನರ ಧ್ವನಿಗೆ ಪೂರಕವಾಗಿ ಕಲೆಯ ಧ್ವನಿಯೂ ಅಭಿವ್ಯಕ್ತಿಗೊಳ್ಳುತ್ತದೆ. ಸಮಾಜದಲ್ಲಿನ ಒಟ್ಟಾರೆ ಪ್ರತಿಕ್ರಿಯೆ, ಕಲೆ, ಸಾಹಿತ್ಯ ಇವೆಲ್ಲಾ ಒಂದಕ್ಕೊ0ದು ತೆಕ್ಕೆ ಹಾಕಿಕೊಂಡಿರುತ್ತದೆ. ತಂತ್ರಜ್ಞಾನದ ಬೆಳವಣಿಗೆಯಲ್ಲಿ ಉಳಿದ ಧ್ವನಿಗೂ ಅವಕಾಶ ತೆರೆದುಕೊಂಡೇ ಇರುತ್ತದೆ. ಹಾಗಾಗಿ ಇದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವುದು ಮುಖ್ಯ.

  1. ಬೆಳವಣಿಗೆಗಳು ಸಕಾರಾತ್ಮವೇ? ಅಲ್ಲದಿದ್ದರೆ ಕುರಿತು ಏನು ಮಾಡಬಹುದು?

ನಮ್ಮ ಆರ್ಥಿಕತೆಯ ನಡೆಯೇ ಖಾಸಗಿಕರಣದ ಕಡೆಗೆ ಇರುವುದರಿಂದ, ಸರ್ಕಾರದ ಪಾತ್ರ ತೀರಾ ಕನಿಷ್ಟವಾಗುವ ಕಡೆ ನಡೆಯುತ್ತಿರುವಾಗ ಸಂಸ್ಕೃತಿಯನ್ನೂ ಲಾಭದ ಕಣ್ಣಲ್ಲೇ ನೋಡುವ ಸ್ಥಿತಿ ಸಾಮಾನ್ಯವಾಗಿಬಿಡುತ್ತದೆ. ಕಲೆ ಇರಲಿ, ಆರೋಗ್ಯ, ಶಿಕ್ಷಣ ಇಂತಹ ಮೂಲಭೂತ ಅವಶ್ಯಕತೆಗಳು ಜನರಿಂದ ದೂರವಾಗುತ್ತದೆ. ಹಾಗಾಗಿ ಬಿಕ್ಕಟ್ಟು ಅಂತರವನ್ನು ಹೆಚ್ಚಿಸುತ್ತದೆ. ಕಲೆಯೂ ಅದನ್ನು ಅನುಭವಿಸಬೇಕು. ಆ ನಿಟ್ಟಿನಲ್ಲಿ ಕಲೆಯನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಮಾಡಬೇಕಾದ ಕೆಲಸವನ್ನು ಒಟ್ಟಾರೆ ಸಮಾಜದ ಆರೋಗ್ಯದ ಕಾಳಜಿ ಇರುವ ಜನರೇ ಕಾಯ್ದುಕೊಳ್ಳಬೇಕು. ಕೇವಲ ಕಲೆಯನ್ನು ಪ್ರತ್ಯೇಕವಾಗಿ ನೋಡುವುದಕ್ಕೂ ಸಾಧ್ಯವಿಲ್ಲ. ಇದು ಒಟ್ಟಾರೆ ಸಮಾಜದ ಆಗು ಹೋಗುಗಳ ಜೊತೆಗೆ ತೆಕ್ಕೆ ಹಾಕಿಕೊಂಡಿರುತ್ತದೆ. ಸರ್ಕಾರದ ಪಾತ್ರವನ್ನು ಹೆಚ್ಚಿಸುವ ಒತ್ತಾಯ ತೀರಾ ಅವಶ್ಯಕವಾಗಿ ಬೇಕಾಗುತ್ತದೆ.

 

 

Donate Janashakthi Media

Leave a Reply

Your email address will not be published. Required fields are marked *