ಪಠ್ಯ ಪುಸ್ತಕ ಕೇಸರೀಕರಣ ವಿರೋಧಿಸಿ ಅಹೋರಾತ್ರಿ ಧರಣಿ

ಕಲಬುರ್ಗಿ : ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿರುವ ಪಠ್ಯ ಪರಿಷ್ಕರಣೆಯನ್ನು ರದ್ದು ಮಾಡುವಂತೆ ಆಗ್ರಹಿಸಿ ಕರ್ನಾಟಕ ಅಸ್ಮಿತೆ ಆಂದೋಲನ ಸಮಿತಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದೆ.

ಕಾಂಗ್ರೆಸ್‌ ಹಾಗೂ ಎಡ ಪಕ್ಷಗಳು ಜಂಟಿಯಾಗಿ ಕರ್ನಾಟಕ ಅಸ್ಮಿತೆ ಜನಾಂದೋಲ ಸಮಿತಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು, ಡಾ. ಬಾಬಾಸಾಹೇಬ ಅಂಬೇಡ್ಕರ್‌ ಹಾಗೂ ಬಸವೇಶ್ವರ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಶಾಸಕ ಪ್ರಿಯಾಂಕ್ ಖರ್ಗೆ ಧರಣಿಗೆ ಚಾಲನೆ ನೀಡಿದರು.

ಈ ವೇಳೆ ಮಾತಾನಾಡಿದ ಹೋರಾಟಗಾರ್ತಿ ಕೆ. ನಿಲಾ ಅವರು, ಬುದ್ದ ಬಸವ ಅಂಬೇಡ್ಕರ ಜೊತೆಗೆ ಸೂಫಿ ಸಂತರ ನೆಲವಾದ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ಈ ನೆಲದ ಮಹನೀಯರಿಗೆ ಅವಮಾನ ಮಾಡಿ ಐತಿಹಾಸಿಕ ಹಿನ್ನೆಲೆಗಳನ್ನು ತಿರುಚಲಾಗಿದೆ. ಈ ವ್ಯವಸ್ಥಿತಿ ಷಡ್ಯಂತ್ರದ ವಿರುದ್ದ ಬಹುದೊಡ್ಡ ಮಟ್ಟದ ಹೋರಾಟ ನಡೆಸಬೇಕಾಗಿದೆ ಎಂದರು.

ಕಲ್ಯಾಣ ನೆಲದಲ್ಲಿ ಹಿಂದೂ ಮುಸ್ಲಿಂರು ಕೂಡಿ ಜೀವನ ಮಾಡುತ್ತಿದ್ದಾರೆ. ಆದರೆ ಇತ್ತೀಚಿಗೆ ಈ ನೆಲದ ಮೇಲೆ ಕೋಮುದ್ವೇಷ ಹಬ್ಬಿಸಲು ಪ್ರಯತ್ನಿಸಲಾಗುತ್ತದೆ. ಹೆಡಗೇವಾರ, ಗೋವಾಳ್ಕರ್ ಅವರಂತ ಆರ್ ಎಸ್ ಎಸ್ ನಾಯಕರ ಚಿಂತನೆಗಳನ್ನು ಈ ಸರ್ಕಾರ ಅಳವಡಿಸಲು ಪ್ರಯತ್ನಿಸುತ್ತಿದೆ. ಹಿಂಬಾಗಿಲ ಮೂಲಕ ಮನಸ್ಮೃತಿಯನ್ನು ಹೇರಲು ಪ್ರಯತ್ನಿಸಲಾಗುತ್ತಿದೆ. ಆದರೆ, ಈ ನೆಲದ ಬುದ್ದ ಬಸವ ಅಂಬೇಡ್ಕರ್ ಅವರ ಅನುಯಾಯಿ ಗಳು ಪ್ರಗತಿಪರರು, ಚಿಂತಕರು, ನಾಡಿನ ಜನರು ಸರ್ಕಾರದ ಈ ನಿರ್ಧಾರದ ವಿರುದ್ದ ಹೋರಾಡಲಿವೆ ಎಂದು ಘೋಷಿಸಿ, ಈ ಕೂಡಲೇ ಪರಿಷ್ಕರಿಸಿದ ಪಠ್ಯಪುಸ್ತಕ ವಾಪಸ್ ಪಡೆಯಬೇಕು ಎಂದು ಪ್ರತಿಭನಟನಾಕಾರರು ಆಗ್ರಹಿಸಿದರು.

Donate Janashakthi Media

Leave a Reply

Your email address will not be published. Required fields are marked *