ಬೆಂಗಳೂರು: ಒಂದೆಡೆ ರಾಜ್ಯ ತೀವ್ರ ಬರಗಾಲ, ವಿದ್ಯುತ್ ಕ್ಷಾಮದಿಂದ ಬಳಲುತ್ತಿದ್ದರೆ ಮುಖ್ಯಮಂತ್ರಿ ಮಾತ್ರ ಐಶಾರಾಮಿ ಜೀವನದ ಮೂಲಕ ಶೋಕಿ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ. ಕೋಟಿ
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ನಿವಾಸಕ್ಕೆ ಹೊಸದಾಗಿ ‘ಕಾನ್ಫ್ ರೆನ್ಸ್ ಹಾಲ್’ ಮಾಡಿಕೊಂಡಿದ್ದಾರೆ. ಅದಕ್ಕೆ 3 ಕೋಟಿ ರೂ.ಗಳಷ್ಟು ಜನರ ದುಡ್ಡು ಖರ್ಚು ಮಾಡಿದ್ದಾರೆ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯ ಸರ್ಕಾರ ಪತನವಾಗಲಿದೆಯೆ? ದುಬೈಯಲ್ಲಿ ತಂತ್ರ ನಡೆಯುತ್ತಿದೆಯೆ?
ಜನರ ದುಡ್ಡು ಖರ್ಚು ಮಾಡುವುದರ ಜತೆಗೆ, ಕಾವೇರಿ ನಿವಾಸಕ್ಕೆ 1.90 ಕೋಟಿ ರೂಪಾಯಿ ಬೆಲೆ ಬಾಳುವ ‘ಸ್ಟ್ಯಾನ್ಲಿ’ ವಿದೇಶಿ ಬ್ರಾಂಡಿನ ಸೋಫಾ ಸೆಟ್ ಸೋಫಾ ಸೆಟ್, ಕಾಟ್ ಹಾಕಿಸಲಾಗಿದೆ. ಇದಕ್ಕೆ ಸರಕಾರದಿಂದ ಹಣ ನೀಡಲಾಗಿಲ್ಲ. ಹಾಗಾದರೆ, ಅದಕ್ಕೆ ಹಣ ಕೊಟ್ಟವರು ಯಾರು? ಇಂಥ ಐಶಾರಾಮಿ ಸೋಫಾ, ಕಾಟ್’ಗಳನ್ನು ಬಳಸುವ ವ್ಯಕ್ತಿ ಸಮಾಜವಾದಿನಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ನನಗೆ ಬಂದಿರುವ ಮಾಹಿತಿ ಪ್ರಕಾರ ಯಾರೋ ಸಚಿವರೊಬ್ಬರ ಕಡೆಯವರು ಅದನ್ನೆಲ್ಲಾ ಮಾಡಿಸಿದ್ದಾರಂತೆ. ಇದೆನ್ನೆಲ್ಲಾ ನೋಡುತ್ತಿದ್ದರೆ ಇದು ಹ್ಯುಬ್ಲೆಟ್ ವಾಚ್ʼನ ಅಪ್ಡೇಟೆಡ್ ವರ್ಷನ್ ಥರಾ ಕಾಣುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.