ಕೋಲ್ಕತ್ತಾ: ಈ ಬಾರಿ ಚುನಾವಣೆಯಲ್ಲಿಯೇ ಅತ್ಯಂತ ಕುತೂಹಲಕ್ಕೆ ಕಾರಣವಾಗಿದ್ದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮಮತಾ ಬ್ಯಾನರ್ಜಿ ಕಡಿಮೆ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ.
ತೀವ್ರವಾದ ಪೈಪೋಟಿಯ ಕಣವಾಗಿದ್ದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಮತದಾರ ಬಂಗಾಳದ ದೀದಿ ಮಮತಾ ಬ್ಯಾನರ್ಜಿ ಅವರನ್ನು ಗೆಲ್ಲಿಸಿದ್ದಾರೆ. ಇವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ 1,200 ಮತಗಳ ಅಂತರದಿಂದ ಮಮತಾ ಬ್ಯಾನರ್ಜಿ ಮುನ್ನಡೆ ಕಾಯ್ದುಕೊಂಡಿದ್ದು ಜಯಗಳಿಸುವರೆ ಎಂಬುದು ಕುತೂಹಲ ಮೂಡಿದೆ.
ಇದನ್ನು ಓದಿ : ಇತಿಹಾಸ ನಿರ್ಮಿಸಿದ ಎಲ್.ಡಿ.ಎಫ್ : ಶತಕ ಬಾರಿಸಿದ ಎಡರಂಗ
ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಲು ಬಿಜೆಪಿ ಸತತವಾಗಿ ಪ್ರಯತ್ನಸಿತ್ತು. ದೀದಿಯ ಆಪ್ತರಾಗಿದ್ದ ಸುವೇಂದು ಅಧಿಕಾರಿಯನ್ನು ಕಮಲ ಪಾಳಯಕ್ಕೆ ಸೆಳೆದು, ಮಮತಾ ವಿರುದ್ಧವೇ ಟಿಕೆಟ್ ನೀಡಿತ್ತು.
ಬಿಜೆಪಿಯಿಂದ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ಹಲವು ನಾಯಕರು ಪಶ್ಚಿಮ ಬಂಗಾಳದಲ್ಲಿ ನಡೆದ ಎಂಟು ಹಂತದ ಚುನಾವಣೆಯಲ್ಲಿ ಸತತ ರ‍್ಯಾಲಿಗಳನ್ನು ನಡೆಸಿದ್ದರು.
ಸಂಜೆ 5.30ರ ಹೊತ್ತಿಗೆ ಟಿಎಂಸಿ ಪಕ್ಷವು 210 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ರಾಜ್ಯ ವಿಧಾನಸಭೆಯ ಅಧಿಕಾರ ಆ ಪಕ್ಷಕ್ಕೆ ಒಲಿದಿದೆ. ಪ್ರತಿಸ್ಪರ್ಧಿ ಬಿಜೆಪಿಗೆ 79 ಸ್ಥಾನಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ. ಆದರೆ, ಇವರೆಡೂ ಪಕ್ಷಗಳು ವಿರುದ್ಧ ಅತ್ಯಂತ ಪೈಪೋಟಿಯನ್ನು ನೀಡಿದ್ದ ಸಂಯುಕ್ತ ಮೋರ್ಚಾ ಎರಡು ಸ್ಥಾನದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಯಾವುದೇ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಇತರರು ಒಂದು ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ.
ಕೊನೆಗೂ ಮಮತಾ ಬ್ಯಾನರ್ಜಿ ತನ್ನ ಶಕ್ತಿ ಏನೆಂದು ಈ ಫಲಿತಾಂಶದ ಮೂಲಕ ತೋರಿಸಿದ್ದಾರೆ.