ತೆಂಗು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಸಂಯುಕ್ತ ಹೋರಾಟ-ಕರ್ನಾಟಕ ತೆಂಗು ಬೆಳೆಗಾರರ ರಾಜ್ಯ ಸಮನ್ವಯ ಸಮಿತಿ ಆಗ್ರಹ

ಬೆಂಗಳೂರು: ಕೇಂದ್ರ ಸರ್ಕಾರ ಕೊಬ್ಬರಿಗೆ ಕ್ವಿಂಟಾಲಿಗೆ ರೂ.20,000 ಕನಿಷ್ಠ ಬೆಂಬಲ ಬೆಲೆ  ಮತ್ತು ರಾಜ್ಯ ಸರ್ಕಾರ ರೂ.5,000 ಪ್ರೋತ್ಸಹ ಧನ ನೀಡಬೇಕು ಹಾಗೂ ತೆಂಗು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಅ-03 ರಂದು ಪ್ರೀಡಂ ಪಾರ್ಕ್‌ನಲ್ಲಿ ರಾಜಭವನ ಚಲೋ ನಡೆಸಿ ರಾಜ್ಯಪಾಲರಿಗೆ ಮನವಿ ಪತ್ರ ನೀಡುವ ಮೂಲಕ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ರೈತರ ಮಾತು ಸರ್ಕಾರ ಕೇಳಿಲ್ಲವೆಂದರೆ ವಿಧಾನಸೌಧಕ್ಕೆ ನುಗ್ಗಲಿದ್ದೇವೆ: ತೆಂಗು ಬೆಳೆಗಾರರ ಎಚ್ಚರಿಕೆ

ಇತ್ತೀಚೆಗೆ ಕೊಬ್ಬರಿ ಬೆಲೆ ತೀವ್ರವಾಗಿ ಕುಸಿದು ತೆಂಗು ಬೆಳೆಗಾರರು ಸಂಕಷ್ಟದಲ್ಲಿರುವ ಇಂದಿನ ಸಂದರ್ಭದಲ್ಲಿ ತೆಂಗು ಬೆಳೆಗಾರರ ಸಮಸ್ಯೆಯನ್ನು ಮತ್ತು ಹಕ್ಕೊತ್ತಾಯಗಳನ್ನು ತಮ್ಮಗಳ ಗಮನಕ್ಕೆ ತರಲಾಗುತ್ತಿದ್ದು, ಆದಷ್ಟು ಬೇಗನೆ ಬಗೆಹರಿಸಬೇಕು ಎಂದು ಸಂಯುಕ್ತ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತರೈತ ಸಂಘ ಆಗ್ರಹಿಸಿದೆ.

ವಿಶ್ವಾದ್ಯಂತ ಪ್ರಸಿದ್ಧವಾಗಿರುವ ಉಂಡೆ ಕೊಬ್ಬರಿಯ ಬೆಲೆ ಕ್ವಿಂಟಲ್‌ಗೆ ರೂ.7,000 ಕುಸಿದಿದೆ, ಕರ್ನಾಟಕದಲ್ಲಿ 2.18 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುವ ಕೊಬ್ಬರಿಯನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ, ಏಕೆಂದರೆ, 2.38 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿಯಲ್ಲಿ 1.75 ಲಕ್ಷ ಮೆಟ್ರಿಕ್ ಟನ್ ಇನ್ನೂ ರೈತರ ಬಳಿಯೇ ಇದೆ. ನೋಂದಣಿ ಮಾಡಲು ಸಾಧ್ಯವಾಗದ ರೈತರು ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ನೋಂದಣಿಯನ್ನು ಮತ್ತೆ ಆರಂಭಿಸಬೇಕು.

ರಾಜ್ಯ ಸರ್ಕಾರ ಚಳುವಳಿಯ ಒತ್ತಡದಿಂದ ರೂ.250 ಪ್ರೋತ್ಸಾಹ ಧನ ನೀಡುತ್ತಿರುವುದು ಸಂತೋಷದ ಸಂಗತಿ. ಆದರೆ ಅದು ಪೂರ್ವಾನ್ವಯವಾಗುವದಿಲ್ಲ, ಹಾಗಾಗಿ ಕೊಟ್ಟು ಖರೀದಿಯನ್ನು ಮುಂದುವರೆಸದಿದ್ದರೆ ರೈತರಿಗೆ ಯಾವ ಅನುಕೂಲವೂ ಆಗುವುದಿಲ್ಲ ಎಂದು ಸಂಘಟನೆ ಆರೋಪಿಸಿದೆ.

ಇದನ್ನೂ ಓದಿ:ತೆಂಗು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಸಂಯುಕ್ತ ಹೋರಾಟ – ಕರ್ನಾಟಕ ಸಮಿತಿ ಆಗ್ರಹ

ಕಳೆದ ಐದಾರು ವರ್ಷಗಳಿಂದ ಒಳಬರ ಮತ್ತು ಹಸಿಬರೆಗಳಿಂದ ತೆಂಗು ಬೆಳೆಗಾರರು ನಷ್ಟ ಅನುಭವಿಸಿದರು. ಇದರ ಜೊತೆಗೆ ಕಪ್ಪು ಕೆಂಪು ಮೂತಿ ಕೀಟಗಳ ಬಾಧೆ, ದೊಡ್ಡ ರಸ ಸೋರುವ ರೋಗ, ಕದ್ದು ಮುಕ್ಕ ರೋ, ಗರಿ, ಉದುರುವ ರೋಗಗಳಿಗೆ ತೆಂಗಿನಮರಗಳು ಬಲಿಯಾಗುತ್ತಿವೆ. ಇದರಿಂದ ತೆಂಗು ಬೆಳೆಗಾರರು ಎಲ್ಲಾ ದಿಕ್ಕುಗಳಿಂದಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತೆಂಗಿನ ಉತ್ಪನ್ನಗಳನ್ನು ಆಹಾರ ಪದಾರ್ಥಗಳನ್ನು ಮತ್ತು ಸೋ, ಡಿಟೆರ್ಜೆಂಟ್, ಶಾಂಪೂ, ಸಿಂಘನ್ ರ‌, ಗಿಡನ್ ತಯಾರಿಸಲು ಉಪಯೋಗಿಸುತ್ತಾರೆ. ಅಲ್ಲದೆ ಅಲಂಕಾರಿಕ ವಸ್ತುಗಳು, ವೈದ್ಯಕೀಯ ಹಾಗೂ ಇನ್ನಿತರ ಉದ್ದೇಶಗಳಿಗೆ ಉಪಯೋಗಿಸುತ್ತಾರೆ ಎಂದು ಸಂಘಟನೆ ನಾಯಕರು ತಿಳಿಸಿದರು.

ಆದರೆ ಕೇಂದ್ರ ಸರ್ಕಾರವು ಪರ್ಯಾಯವಾಗಿ ಬಳಸಬಹುದಾದ ಅಗ್ಗದ ಉತ್ಪನ್ನಗಳಾದ ತಾಳೆಎಣ್ಣೆ, ಸೋಯಾ ಎಣ್ಣೆ, ತೆಂಗು, ತೆಂಗಿನ ಪುಡಿಗಳನ್ನು ಆಮದು ಮಾಡಿಕೊಳ್ಳುವುದರಿಂದ ತೆಂಗಿನ ಉತ್ಪನ್ನಗಳಿಗೆ ಬೇಡಿಕೆ ಇಳಿಮುಖವಾಗಿದೆ. ಶೂನ್ಯ ತೆರಿಗೆ ಆಮದು ವ್ಯಾಪಾರವನ್ನು 2024ರ ಮಾರ್ಚ್ ತಿಂಗಳವರೆಗೆ ಮೂರು ಬಾರಿ ವಿಸ್ತರಿಸಿ ತೆಂಗು ಬೆಳೆಗಾರರಿಗೆ ಬರೆ ಎಳೆಯುತ್ತಿದೆ. ಹಾಗಾಗಿ ಕೊಬ್ಬರಿ ಬೆಲೆ ತೀವ್ರವಾಗಿ ಕುಸಿದಿದೆ ಎಂದು ಹೇಳಿದರು.

ಡಾ.ಸ್ವಾಮಿನಾಥನ್ ವರದಿಯಂತೆ ಉತ್ಪಾದನಾ ವೆಚ್ಚಕ್ಕೆ ಶೇ.50 ರಷ್ಟು ಸೇರಿಸಿ ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸಬೇಕಿತ್ತು. ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆಯ ಕನಿಷ್ಟ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ ರೂ.16,730 ನಿಗದಿಪಡಿಸಬೇಕೆಂದು ಶಿಫಾರಸ್ಸು ಮಾಡಿರುವುದನ್ನೂ ಕೇಂದ್ರ ಸರ್ಕಾರವು ಗಣನೆಗೆ ತೆಗೆದುಕೊಂಡಿಲ್ಲ. ಆದರೆ ಕನಿಷ್ಟ ಬೆಂಬಲ ಬೆಲೆ ಕೇವಲ ರೂ.11,750 ಕ್ಕೆ ಸೀಮಿತವಾಗಿದೆ. ಜೊತೆಗೆ ರೈತರು ಬೆಳೆದ ಎಲ್ಲಾ ಬೆಳೆಯನ್ನು ತೆಗೆದುಕೊಳ್ಳದೆ ಕೇವಲ ಶೇ.25 ರಷ್ಟು ಮಾತ್ರ ಖರೀದಿ ಮಾಡುವುದರಿಂದ ರೈತರು ದಲ್ಲಾಳಿಗಳ ಬಲೆಗೆ ಬೀಳಲೇಬೇಕಾಗಿದೆ ಎಂದು ತೆಂಗು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ತೆಂಗು ಬೆಳೆಗಾರರ ನೆರವಿಗೆ ನಿಂತ ರಾಜ್ಯ ಸರ್ಕಾರ:ಕ್ವಿಂಟಲ್ ಉಂಡೆ ಕೊಬ್ಬರಿಗೆ 1,250 ರೂ ಬೆಂಬಲ ಬೆಲೆ ಘೋಷಣೆ

ಇದರ ಜೊತೆಗೆ ಉಪಉತ್ಪನ್ನಗಳಾದ ನಾರು, ಚಿಪ್ಪು, ತಿರುಳು, ಗರಿಗಳು ಉತ್ಪಾದಿಸುವ ಘಟಕಗಳು ಸರ್ಕಾರದ ಬೆಂಬಲವಿಲ್ಲದೆ, ಬದಲಿಗೆ ಅವುಗಳಿಗೆ ಹೊಡೆತ ನೀಡುವ ನೀತಿಗಳಿಂದಾಗಿ ಮುಚ್ಚುತ್ತಿವೆ. ಇದೂ ರೈತರ ಉಪ ಆದಾಯ ಕುಸಿಯಲು ಕಾರಣವಾಗಿವೆ. ತೆಂಗಿನಮರಗಳನ್ನು ವಾಯುಗುಣ ವೈಪರೀತ್ಯಗಳಿಂದ ರಕ್ಷಿಸುವ ಯಾವ ಕ್ರಮವೂ ಸರ್ಕಾರದಲ್ಲಿಲ್ಲ. ಹಾಗಾಗಿ ತೆಂಗಿನ ಮೇಲೆ ಬೀರುವ ಅವುಗಳ ದುಷ್ಪರಿಣಾಮದಿಂದಾಗಿ ತೆಂಗು ಬೆಳ ನಷ್ಟ ಅನುಭವಿಸುತ್ತಿದ್ದಾರೆ.

ಹೀಗೆ, ತೆಂಗು ಬೆಳೆಗಾರರು ತೀವ್ರವಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಕೆಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಸಕಾಲದಲ್ಲಿ ತೆಗೆದುಕೊಳ್ಳದಿದ್ದರೆ, ತೆಂಗು ಬೆಳೆಗಾರರು ನೆಲಕಚ್ಚುತ್ತಾರೆ. ಆದ್ದರಿಂದ ಅವರ ಸಮಸ್ಯೆಗಳಿಗೆ ಪರಿಹಾರವಾಗಿ ಕೆಳಗಿನ ಹಕ್ಕೊತ್ತಾಯಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕು ಎಂದರು.

ಈ ನಿಟ್ಟಿನಲ್ಲಿ ತಾವು ರಾಜ್ಯದ ತೆಂಗು ಬೆಳೆಗಾರರ ಪರವಾಗಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ನ್ಯಾಯ ಕೊಡಿಸಬೇಕು. ಜೊತೆಗೆ ರೈತ ಮುಖಂಡರ ಜೊತೆ ಕೇಂದ್ರದ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲು ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಹಕ್ಕೊತ್ತಾಯಗಳು:

01. ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ ರೂ.20,000 ಕಾನೂನುಬದ್ಧಗೊಳಿಸಬೇಕು. ಕನಿಷ್ಠ ಬೆಂಬಲ

ಬೆಲೆ (ಎಂಎಸ್‌ಪಿ) ನಿಗದಿಪಡಿಸಬೇಕು ಮತ್ತು ಅದನ್ನು

02. ಎಳನೀರು ಮತ್ತು ತೆಂಗಿನಕಾಯಿಗೂ ಕನಿಷ್ಠ ಬೆಂಬಲ ಬೆಲೆ ನಿಗಿಪಡಿಸಬೇಕು.

03. ಪ್ರಮಾಣ ಮಿತಿ ಹೇರದೇ ತೆಂಗಿನ ಉತ್ಪನ್ನವನ್ನು ಸಂಪೂರ್ಣವಾಗಿ ಖರೀದಿಸಬೇಕು ಮತ್ತು ಅದಕ್ಕೆ ಅವಶ್ಯಕತೆಯಿರುವಷ್ಟು ಹಣ ಬಿಡುಗಡೆ ಮಾಡಬೇಕು.

04. ಮುಕ್ತ ಮಾರುಕಟ್ಟೆಯಡಿಯಲ್ಲಿ ತೆಂಗಿನ ಉತ್ಪನ್ನ ಮತ್ತು ಖಾದ್ಯ ತೈಲ ಆಮದನ್ನು ಕೂಡಲೇ ನಿಲ್ಲಿಸಬೇಕು. 05. ಕೇಂದ್ರ ಸರ್ಕಾರದ ಎಣ್ಣೆ ಉಪಯೋಗಿಸುವ ಕಾರ್ಖಾನೆಗಳು ಹಾಗೂ ಸಂಸ್ಥೆಗಳು ತೆಂಗಿನೆಣ್ಣೆಯನ್ನು ಉಪಯೋಗಿಸಬೇಕು.

06. ಪೂರ್ಣ ಪ್ರಮಾಣದ ಖರೀದಿಯನ್ನು ದಾಸ್ತಾನು ಮಾಡಲು ಬೃಹತ್ ಗೋಡೋನುಗಳನ್ನು ಮತ್ತು ಬಹಳ ಕಾಲ ಕಾಪಾಡಲು ಶೀತಲೀಕರಣ ವ್ಯವಸ್ಥೆಯನ್ನು ಮಾಡಬೇಕು.

07. ಖರೀದಿ ಕೇಂದ್ರವನ್ನು ವರ್ಷವಿಡೀ ತೆರೆದು, ನಿರಂತರವಾಗಿ ಕೊಬ್ಬರಿ ಖರೀದಿಸಬೇಕು ಮತ್ತು ಅದಕ್ಕೆ ತಕ್ಕಂತೆ ನಫೆಡ್ ಮಾರ್ಗಸೂಚಿಗಳನ್ನು ರೂಪಿಸಬೇಕು.

08. ಜೀವಪರಿಸರಾತ್ಮಕ, ವಾಯುಗುಣ ವೈಪರೀತ್ಯ ತಾಳಿಕೆ ಕೃಷಿ ಪದ್ಧತಿಯನ್ನು ರೂಪಿಸಿ ಜಾರಿಗೊಳಿಸಿ

09. ಎಲ್ಲಾ ರೈತರ ಎಲ್ಲಾ ಬೆಳೆಗಳಿಗೂ ಕನಿಷ್ಟ ಬೆಂಬಲ ಬೆಲೆ ನಿಗದಿಯಾಗಬೇಕು.

10. ಮೌಲ್ಯವರ್ಧಿತ ತೆಂಗಿನ ಉತ್ಪನ್ನಗಳಾದ ನಾರು, ಚಿಪ್ಪು, ನೀರಾ, ಇದ್ದಿಲು, ಎಳನೀರು, ತಿರುಳು, ಮರ, ಗರಿಗಳನ್ನು ತಯಾರಿಸುವ ಕಾರ್ಖಾನೆಗಳಿಗೆ ಪ್ರೋತ್ಸಾಹ ಕೊಡಬೇಕು ಮತ್ತು ಅದನ್ನು ಮಾರುಕಟ್ಟೆ ಮಾಡಬೇಕು.

11. ಹೊಸದಾಗಿ ನೋಂದಣಿ ಮಾಡಲು ಅವಕಾಶ ನೀಡಬೇಕು.

ಸಂಯುಕ್ತ ಹೋರಾಟ ಸಮಿತಿಯ ಸಿ.ಯತಿರಾಜು, ಕರ್ನಾಟಕ ರಾಜ್ಯ ರೈತ ಸಂಘಟನೆಯ ಬಡಗಲಪುರ ನಾಗೇಂದ್ರ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹೆಚ್‌.ಆರ್‌.ಬಸವರಾಜಪ್ಪ, ಎಐಕೆಕೆಎಂಎಸ್‌ ಎಸ್‌.ಎನ್‌.ಸ್ವಾಮಿ, ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್‌, ಹಣಕಾಸು ಕಾರ್ಯದರ್ಶಿ ಎಚ್‌.ಆರ್.‌ ನವೀನ್‌ ಕುಮಾರ್‌, ಎಐಕೆಎಸ್‌ ಪಿ.ಲೋಕೇಶ್‌, ಅನ್ನದಾತ ರೈತ  ಸಂಘಟನೆಯ ಮಧುಸೂದನ್‌ ಸೇರಿದಂತೆ ತೆಂಗುಬೆಳೆಗಾರರು ಭಾಗವಹಿಸಿದ್ದರು.

ವಿಡಿಯೋ ನೋಡಿ:ಬೆಂಬಲ ಬೆಲೆ ಖರೀದಿಗೆ ಆಗ್ರಹ: ಕೈಯಲ್ಲಿ ಟೆಂಗಿನಕಾಯಿ ಹಿಡಿದು ಪ್ರತಿಭಟಿಸಿದ ತೆಂಗು ಬೆಳೆಗಾರರು Janashakthi Media

Donate Janashakthi Media

Leave a Reply

Your email address will not be published. Required fields are marked *