ಮುಖ್ಯನ್ಯಾಯಮೂರ್ತಿಯಾಗಿ ಎನ್​.ವಿ. ರಮಣ ಪ್ರಮಾಣವಚನ ಸ್ವೀಕಾರ

ನವದೆಹಲಿ: ಸುಪ್ರೀಂಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ.ರಮಣ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಮಾಣ ವಚನ ಬೋಧಿಸಿದರು.

ಇದನ್ನು ಓದಿ: ಪ್ರತಿದಿನ 1471 ಟನ್‌ ಆಕ್ಸಿಜನ್‌ ಪೊರೈಸುವಂತೆ ಕೇಂದ್ರಕ್ಕೆ ಸಿಎಂ ಮನವಿ

“ದೇಶದಲ್ಲಿ ಪ್ರಸಕ್ತ ಕೋವಿಡ್-19 ಎರಡನೇ ಅಲೆಯ ದಾಳಿಗೆ ಒಳಗಾಗಿರುವ ನಾವು ಪರೀಕ್ಷಾ ಸಮಯವನ್ನು ಎದುರಿಸುತ್ತಿದ್ದೇವೆ. ವಕೀಲರು, ನ್ಯಾಯಾಧೀಶರು ಹಾಗೂ ನ್ಯಾಯಾಲಯದ ಸಿಬ್ಬಂದಿ ಎಲ್ಲರೂ ಕೋವಿಡ್ ವೈರಸ್ ನಿಂದ ಬಾಧಿತರಾಗಿದ್ದಾರೆ. ಪ್ರಸರಣದ ಸರಪಳಿಯನ್ನು ಮುರಿಯಲು ಕೆಲವು ಕಠಿಣ ಕ್ರಮಗಳು ಅಗತ್ಯವಾಗಬಹುದು. ನಾವು ಸಾಂಕ್ರಾಮಿಕವನ್ನು ಒಟ್ಟಾಗಿ ಸಮರ್ಪಣೆಯಿಂದ ಸೋಲಿಸಬಹುದು” ಎಂದು ನೂತನ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಹೇಳಿದರು.

ಏಪ್ರಿಲ್‌ 06ರಂದು ನ್ಯಾಯಾಂಗ ಇಲಾಖೆ ಹಾಗೂ ಕಾನೂನು ಸಚಿವಾಲಯ ನ್ಯಾಯಮೂರ್ತಿ ನುಥಲಪತಿ ವೆಂಕಟರಮಣ ಅವರನ್ನು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ನೇಮಕಾತಿಗೆ ಸಂಬಂಧ ಪಟ್ಟಂತೆ ಅಧಿಸೂಚನೆ ಹೊರಡಿಸಿತ್ತು.

ಶುಕ್ರವಾರದಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿ ಹೊಂದಿದ ಎಸ್‌.ಎ. ಬೊಬ್ದೆ ಅವರು ನ್ಯಾ. ಎನ್.ವಿ.ರಮಣ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸ್ಸು ಮಾಡಿದ್ದರು.

ಇದನ್ನು ಓದಿ: ಕೃಷಿಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ 150 ನೇ ದಿನ

ನ್ಯಾ. ಎಸ್​.ಎ. ಬೊಬ್ಡೆ ಅವರು ನ್ಯಾ. ಎನ್​.ವಿ. ರಮಣ ಅವರೊಂದಿಗೆ ಹಲವಾರು ಪ್ರಕರಣಗಳಲ್ಲಿ ನ್ಯಾಯಪೀಠ ಹಂಚಿಕೊಂಡಿದ್ದರು.

1957, ಆಗಸ್ಟ್ 27ರಂದು ಜನಿಸಿದ ನ್ಯಾ. ರಮಣ ಅವರ ಸೇವಾವಧಿ 2022, ಆಗಸ್ಟ್ 26ರಂದು ಕೊನೆಗೊಳ್ಳಲಿದೆ. ಆಂಧ್ರ ಪ್ರದೇಶದ ಹೈಕೋರ್ಟ್​ಗೆ ಖಾಯಂ ನ್ಯಾಯಾಧೀಶರಾಗಿ ಹಾಗೂ ದೆಹಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. 2014ರ ಫೆಬ್ರವರಿಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ ನ್ಯಾ.ರಮಣರವರು ಇಂದಿನಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಮೂರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *