ಬೆಂಗಳೂರು: ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್ ವತಿಯಿಂದ ನೀಡಲಾಗುವ 2022ನೇ ಸಾಲಿನ `ಮಾಸ್ತಿ ಪ್ರಶಸ್ತಿ’ಯು ಇದೇ ಜೂನ್ 18ಕ್ಕೆ ಬೆಂಗಳೂರಿನ ವಿಧ್ಯಾಭವನದಲ್ಲಿ ಪ್ರದಾನವಾಗಲಿದ್ದು, ಪ್ರಶಸ್ತಿಗೆ ಏಳು ಜನ ಸಾಧಕರು ಆಯ್ಕೆಯಾಗಿದ್ದಾರೆ.
ನಾಡಿನ ಖ್ಯಾತ ಸಾಹಿತಗಳಾದ ಡಾ.ಕೆ.ವಿ.ನಾರಾಯಣ (ಭಾಷಾ ವಿಜ್ಞಾನ ) ಡಾ.ಓ.ಎಲ್. ನಾಗಭೂಷಣಸ್ವಾಮಿ ( ಅನುವಾದ ), ಶಶಿಕಲಾ ವಸ್ತ್ರದ (ಕಾವ್ಯ ) ರಾಘವೇಂದ್ರ ಪಾಟೀಲ (ಕಥೆ), ಚಂದ್ರಶೇಖರ ನಂಗಲಿ (ವಿಮರ್ಶೆ) ಹಾಗೂ ಹುಣಸವಾಡಿ ರಾಜನ್ (ಪತ್ರಿಕೋದ್ಯಮ ), ರವೀಂದ್ರ ಭಟ್ಟ (ಅಂಕಣ ಸಾಹಿತ್ಯ) ಇವರುಗಳಿಗೆ ಕನ್ನಡ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿ ಸಂದಿದೆ ಎಂದು ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ತಿಳಿಸಿದ್ದಾರೆ. ಈ ಪ್ರಶಸ್ತಿಯು ₹ 25 ಸಾವಿರ ನಗದು ಜೊತೆ ಫಲಕವನ್ನ ಹೊಂದಿದೆ.
ಮಾಸ್ತಿ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಅಧ್ಯಕ್ಷರಾಗಿ ಮಾವಿನಕೆರೆ ರಂಗನಾಥನ್ , ಸದಸ್ಯರಾಗಿ ಪ್ರೊ. ಎಂ.ಎಚ್. ಕೃಷ್ಣಯ್ಯ, ಜಿ.ಎನ್. ರಂಗನಾಥ್ ರಾವ್, ಬಿ.ಆರ್. ಲಕ್ಷ್ಮಣ್ ರಾವ್ , ಬಿ.ಎಸ್. ವೆಂಕಟಚಲಪತಿ., ಕೆ.ರಮೇಶ್. ಉಷಾ ಕೇಸರಿ ಹಾಗೂ ಸದಸ್ಯ ಕಾರ್ಯದರ್ಶಿ ಎನ್. ನರೇಂದ್ರ ಬಾಬು ಅವರುಗಳು ಪ್ರಶಸ್ತಿಗೆ ಭಾಜನರಾಗುವವರನ್ನ ಆಯ್ಕೆ ಮಾಡಿದೆ.