ಕಾರವಾರ: ಗೋವಾಕ್ಕೆ “ಜಂಪಿಂಗ್ ಚಿಕನ್” ಸಪ್ಲೈ ಮಾಡುತ್ತಿದ್ದ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಈ ಜಂಪಿಂಗ್ ಚಿಕನ್ ಎಂದರೆ, ಬೇರೇನೂ ಅಲ್ಲ, ಕಪ್ಪೆ. ಗೋವಾದಲ್ಲಿ ಜಂಪಿಂಗ್ ಚಿಕನ್ ಎಂದೇ ಹೆಸರು ಪಡೆದಿರುವ ಕಪ್ಪೆಗಳ ಖಾದ್ಯ ಪ್ರಖ್ಯಾತಿ ಗಳಿಸಿದೆ. ಬುಲ್ ಫ್ರಾಗ್ ಜಾತಿಯ ಕಪ್ಪೆಗಳು ಅತೀ ದೊಡ್ಡದಾಗಿರುತ್ತದೆ. ಇದನ್ನು ಜೀವಂತವಾಗಿ ಹಿಡಿದು ಗೋವಾದಲ್ಲಿ ಇವುಗಳ ಕಾಲುಗಳನ್ನು ಕಡಿದು ಫ್ರೈ ಮಾಡಿ ಭಕ್ಷಿಸುತ್ತಾರೆ. ಇದಲ್ಲದೇ ಜೀವಂತವಾಗಿಯೇ ಇವುಗಳ ಚರ್ಮ ತೆಗೆದು ಫ್ರೈ ಮಾಡಿ ತಿನ್ನುತ್ತಾರೆ. ಗೋವಾ ಭಾಗದಲ್ಲಿ ಈ ಕಪ್ಪೆಗಳ ಭಕ್ಷವನ್ನು ಜಂಪಿಂಗ್ ಚಿಕನ್ ಎನ್ನುತ್ತಾರೆ.
ಗೋವಾಕ್ಕೆ ಕಪ್ಪೆಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ್ದ ಕಳ್ಳರನ್ನು ಇಲ್ಲಿನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಖಚಿತ ಮಾಹಿತಿಯನ್ನಾಧರಿಸಿದ ಅರಣ್ಯಾಧಿಕಾರಿಗಳು ಕಾರವಾರ-ಸದಾಶಿವಗಡ ನಡುವಿನ ಕಾಳಿ ಸೇತುವೆ ಬಳಿ ಬಸ್ ತಡೆದು ಪರಿಶೀಲಿಸಿದಾಗ, “ಇಂಡಿಯನ್ ಬುಲ್ ಫ್ರಾಗ್” ಕಪ್ಪೆಗಳಿದ್ದ ಚೀಲ ಕಂಡಿದ್ದು, ಅದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಶಿಸ್ತು ಕ್ರಮದ ಎಚ್ಚರಿಕೆ
ಈ ಸಂಬಂಧ ಗೋವಾದ ಕಾಣಕೋಣ್ ನಿವಾಸಿ ಚಾಲಕ ಸಿದ್ದೇಶ್ ದೇಸಾಯಿ ಮತ್ತು ಬಸ್ ನಿರ್ವಾಹಕ ಜಾನುಲೂಲಿಮ್ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿತರಿಂದ ಸುಮಾರು 40ಕ್ಕೂ ಹೆಚ್ಚಿನ ಕಪ್ಪೆಗಳಿದ್ದ ಚೀಲ ಹಾಗೂ ಕಪ್ಪೆಗಳನ್ನು ವಶಪಡಿಸಿಕೊಂಡಿದ್ದಾರೆ.
ಗೋವಾದ ರೆಸಾರ್ಟ್‌ಗಳಲ್ಲಿ ಈ ಬುಲ್ ಫ್ರಾಗ್‌ಗಳ ವಿಶೇಷ ಖಾದ್ಯಗಳನ್ನು ತಯಾರು ಮಾಡುತ್ತಾರೆ. ಇಲ್ಲಿಗೆ ಬರುವ ವಿದೇಶಿಗರು ಈ ಕಪ್ಪೆ ಖಾದ್ಯವನ್ನು ಅತಿಯಾಗಿ ಇಷ್ಟ ಪಡುತ್ತಾರೆ. ಹೆಚ್ಚಿನ ಬೇಡಿಕೆಯಿಂದಾಗಿ, ಈ ಜಾತಿಯ ಕಪ್ಪೆಯನ್ನು ಹಿಡಿದು ಗೋವಾದ ರೆಸಾರ್ಟ್‌ಗಳಿಗೆ ಮಾರಾಟ ಮಾಡುವ ಕಪ್ಪೆಗಳ್ಳರ ದೊಡ್ಡ ಜಾಲವಿದೆ ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ನೋಡಿ: “ನಾವು ಮಾಡಿದ ದೇವ್ರು ನೀನು, ನಮಗೆ ದೇವ್ರು ಅಂತಿಯೇನೋ” ಸಿದ್ದಯ್ಯ ಸ್ವಾಮಿ ಬನ್ಯೂ Janashakthi Media