ಜೋಶಿಮಠ ಭೂಕುಸಿತದ ಉಪಗ್ರಹ ಚಿತ್ರ, ವರದಿ ತೆಗೆದು ಹಾಕಿಲು ಇಸ್ರೋ ಮೇಲೆ ಸರ್ಕಾರದ ಒತ್ತಡ!

ನವದೆಹಲಿ: ಅನುಮತಿಯಿಲ್ಲದೆ ಜೋಶಿಮಠದ ಪರಿಸ್ಥಿತಿ ಬಗ್ಗೆ ಮಾಧ್ಯಮಗಳು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)  ಮತ್ತು ಇತರ ಹಲವಾರು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮೇಲೆ ಉತ್ತರಖಂಡ ರಾಜ್ಯ ಸರ್ಕಾರ ಒತ್ತಡ ಹೇರಿದೆ. ಈ ಹಿನ್ನೆಲೆಯಲ್ಲಿ ಉಪಗ್ರಹ ಚಿತ್ರಗಳನ್ನು ಮತ್ತು ವರದಿಯನ್ನು ಇಸ್ರೋ ತೆಗೆದುಹಾಕಿದೆ.

ಇಸ್ರೋ ಸಂಸ್ಥೆಯು ತನ್ನ ಅಧ್ಯಯನದಂತೆ ಭೂಮಿ ಕುಸಿಯುತ್ತಿರುವ ಬಗ್ಗೆ ಪ್ರಕಟಿಸಿದ್ದ ಉಪಗ್ರಹ ಚಿತ್ರಗಳನ್ನು ಮತ್ತು ವರದಿಯನ್ನು ಸಿದ್ಧಪಡಿಸಿತ್ತು ಮತ್ತು ಬಹಿರಂಗಗೊಳಿಸಿತ್ತು. ಜೋಶಿಮಠದ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ಸ್ಥಳದಲ್ಲೇ ನಿಯೋಜನೆಗೊಂಡಿರುವ ಉತ್ತರಖಂಡ ಸಚಿವ ಡಾ ಧನ್ ಸಿಂಗ್ ರಾವತ್ ಇಸ್ರೋ ಅಧಿಕಾರಿಗಳನ್ನು ಸಂಪರ್ಕಿಸಿ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ: ಇಸ್ರೋ ಸಂಸ್ಥೆಯಿಂದ ಉಪಗ್ರಹ ಚಿತ್ರ ಬಿಡುಗಡೆ: ಕೆಲವೇ ದಿನದಲ್ಲಿ ಜೋಶಿಮಠ ಸಂಪೂರ್ಣ ಮುಳುಗಡೆ?

ಇದರ ನಡುವೆಯೇ ಕೇಂದ್ರ ಸರ್ಕಾರವು ಸಹ ವಿಜ್ಞಾನಿಗಳು, ಭೂವಿಜ್ಞಾನಿಗಳು ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳು ಜೋಶಿಮಠದ ಭೂ ಕುಸಿತಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ವರದಿ, ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಬಾರದೆಂದು ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಜೋಶಿಮಠ ಪ್ರದೇಶದ ಭೂಕುಸಿತದ ಬಗ್ಗೆ ಶುಕ್ರವಾರವಷ್ಟೇ ಬಿಡುಗಡೆಗೊಂಡಿದ್ದ ವರದಿಯು ಅಲ್ಲಿ ಡಿಸೆಂಬರ್‌ 27 ಹಾಗೂ ಜನವರಿ 8 ರ ನಡುವೆ  ಭೂಮಿ 5.4 ಸೆಂ.ಮೀನಷ್ಟು ಕುಸಿದಿದೆ ಎಂದು ಹೇಳಿತ್ತು. ಅದೇ ಸಮಯ ಎಪ್ರಿಲ್-ನವೆಂಬರ್‌ 2022 ರ ಅವಧಿಯಲ್ಲಿ 8.9ಸೆಂ.ಮೀ.ನಷ್ಟು ಭೂಮಿ ಕುಸಿದಿತ್ತು ಎಂದು ವರದಿ ಪ್ರಕಟಿಸಿತು.

ಜೋಶಿಮಠ ನಂತರ, ಈಗ ಕರ್ಣಪ್ರಯಾಗ್ ಮತ್ತು ತೆಹ್ರಿ ಗರ್ವಾಲ್ ಮನೆಗಳ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿರುವ ವರದಿಗಳು ಬರುತ್ತಿವೆ.

ಇದನ್ನು ಓದಿ: ಜೋಶಿಮಠದ ಅಪಾಯಕಾರಿ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭ – 678 ಕಟ್ಟಡಗಳು ಅಸುರಕ್ಷಿತ

ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ಸರ್ಕಾರದ ಗೌಪತ್ಯೆಯ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಪತ್ರ ಬರೆದಿದ್ದು, ಇಸ್ರೋ ಮೇಲೆ ಹೇರಲಾದ ಒತ್ತಡವನ್ನು ಖಂಡಿಸಿದ್ದಾರೆ.

ಬಿಕ್ಕಟ್ಟು ನಿಭಾಯಿಸಿ ಅವುಗಳಿಗೆ ಪರಿಹಾರ ಕಂಡುಕೊಂಡು, ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರಿ ಸಂಸ್ಥೆಗಳು ಇಸ್ರೋ ವಿರುದ್ಧ ತಿರುಗಿಬಿದ್ದಿದೆ ಮತ್ತು ಅಧಿಕಾರಿಗಳನ್ನು ಮಾಧ್ಯಮಗಳೊಂದಿಗೆ ಸಂವಹನ ನಡೆಸುವುದನ್ನು ತಡೆಯುತ್ತಿವೆ. ನರೇಂದ್ರ ಮೋದಿ ಅವರೇ, ‘ಸಂದೇಶವಾಹಕರ ಮೇಲೆ ಗುಂಡು ಹಾರಿಸಬೇಡಿ’ ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.‌

ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ‘ಒಂದು ಸಾಂವಿಧಾನಿಕ ಸಂಸ್ಥೆಯನ್ನು ಮತ್ತೊಂದು ಸಾಂವಿಧಾನಿಕ ಸಂಸ್ಥೆ ಮೇಲೆ ದಾಳಿ ಮಾಡುವಂತೆ ಮಾಡಲಾಗುತ್ತಿದೆ. ಈಗ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಇಸ್ರೊಗೆ ಮಾಹಿತಿ ನೀಡದಂತೆ ಹೇಳಿದೆ. ಆದರೆ, ಉಪಗ್ರಹ ಚಿತ್ರಗಳು ಸುಳ್ಳು ಹೇಳಲು ಹೇಗೆ ಸಾಧ್ಯ? ಇದು ನವ ಭಾರತ, ಅಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಎಲ್ಲವೂ ತಿಳಿದಿದೆ ಮತ್ತು ಯಾರು ಯಾವುದರ ಬಗ್ಗೆಯೂ ಮಾತನಾಡಬೇಕು ಎಂಬುದನ್ನು ನಿರ್ಧರಿಸುತ್ತಾರೆ’ ಎಂದು ಪ್ರಧಾನಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *