ಗಂಗಾವತಿ : ಮಾತೃಪೂರ್ಣ ಯೋಜನೆ ಅಡಿಯಲ್ಲಿ ಅಂಗನವಾಡಿ ಮೂಲಕ ಮೊಟ್ಟೆ ಪೂರೈಕೆ ಗುತ್ತಿಗೆಯಲ್ಲಿ ಅಕ್ರಮ ಭ್ರಷ್ಟಾಚಾರ ಮಾಡಿದ ಶಾಸಕರಾದ ಪರಣ್ಣ ಮುನವಳ್ಳಿ ಮತ್ತು ಸಚಿವರಾದ ಶಶಿಕಲಾ ಜೊಲ್ಲೆ ರಾಜೀನಾಮೇ ಪಡೆಯಲು ಒತ್ತಾಯಿಸಿ ಸಿಪಿಐಎಂ ತಾಲೂಕು ಸಮಿತಿ ಪ್ರತಿಭಟನೆ ನಡೆಸಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದೆ.
ಗರ್ಭಿಣಿಯರು ಮತ್ತು ಅಪೌಷ್ಟಿಕ ಮಕ್ಕಳ ಮಾತೃ ಪೂರ್ಣ ಯೋಜನೆಯ ಅಡಿಯಲ್ಲಿ ಪೌಷ್ಠಿಕ ಆಹಾರ ಮೊಟ್ಟೆ ವಿತರಣೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ .ಮತ್ತು ಗರ್ಭಿಣಿಯ ಮಹಿಳೆಯರು ಮಕ್ಕಳಿಗೆ ಕಲ್ಯಾಣ ಕರ್ನಾಟಕದ 6ಜಿಲ್ಲೆಯಲ್ಲಿ ಅಂಗನವಾಡಿಗಳ ಮೂಲಕ ಗರ್ಭಿಣಿಯರು ಬಾಣಂತಿಯರು ಹಾಗೂ ಅಪೌಷ್ಟಿಕ ಮಕ್ಕಳಿಗೆ ಮೊಟ್ಟೆ ವಿತರಿಸಲು ಸರ್ಕಾರ ತೀರ್ಮಾನ ಮಾಡಲಾಗಿತ್ತು ಆದರೆ ಸರ್ಕಾರದ ಭಾಗವಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಯಾವ ಶಶಿಕಲಾ ಜೊಲ್ಲೆ ಮತ್ತು ಗಂಗಾವತಿ ವಿಧಾನಸಭೆ ಶಾಸಕರಾದ ಪರಣ್ಣ ಮುನವಳ್ಳಿಯವರು ಸೇರಿಕೊಂಡು ಮೊಟ್ಟೆಯ ವ್ಯವಹಾರದಲ್ಲಿ ಭಾರಿ ಅಕ್ರಮ ಭ್ರಷ್ಟಾಚಾರ ಮಾಡಿರುವದು ಬೆಳಕಿಗೆ ಬಂದಿದೆ ಇದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಬಲವಾಗಿ ಖಂಡಿಸುತ್ತದೆ. ಸಚಿವರಾದ ಶಶಿಕಲಾ ಜೊಲ್ಲೆ ಮತ್ತು ಶಾಸಕರಾದ ಪರಣ್ಣ ಮುನವಳ್ಳಿಯವರ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಜಿ. ನಾಗರಾಜ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗಂಗಾವತಿ ತಾಲ್ಲೂಕ ಸಿಪಿಐಎಂ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಹಾಗೂ ಪಕ್ಷದ ಮುಖಂಡರಾದ ಬಸವರಾಜ ಮರಕುಂಬಿ, ಹುಸೇನಪ್ಪ , ಹನುಮಂತ, ಗ್ಯಾನೇಶ್ ಕಡಗದ್, ಮಂಜುನಾಥ ಡಗ್ಗಿ, ಕೃಷ್ಣಪ್ಪ, ಮರಿನಾಗ ಡಗ್ಗಿ, ಸೋಮಪ್ಪ, ಬಸವರಾಜ ಗೋನಾಳ, ಮುಕೇಶ, ಚಂದುಸಾಬ, ಬಾಳಪ್ಪ ಹುಲಿಹೈದರ್ ಸೇರಿದಂತೆ ಇತರರು ಇದ್ದರು.