ಬೆಂಗಳೂರು: ಜನವರಿ.22 ರಿಂದ ಆರಂಭಗೊಂಡಿರುವ ಜಂಟಿ ಅಧಿವೇಶನ ಜನವರಿ 31ರಂದು ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ ವಿಬಿ ಜಿ ರಾಮ್ ಜಿ ಕುರಿತಾಗಿ ಚರ್ಚೆಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಫೆಬ್ರವರಿ 4ರ ವರೆಗೆ ಅಧಿವೇಶನ ವಿಸ್ತರಣೆ ಮಾಡಲಾಗಿದೆ. ಬೆಂಗಳೂರು
ಈ ಬಾರಿಯ ಅಧಿವೇಶನ ಉಭಯ ಸದನಗಳಲ್ಲೂ ಭಾರೀ ಸದ್ದು ಗದ್ದಲಕ್ಕೆ ಕಾರಣವಾಗುತ್ತಿದೆ. ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿದ್ದು, ಸದನದಲ್ಲಿ ಆಡಳಿತ ಪಕ್ಷವನ್ನು ಕಟ್ಟಿಹಾಕುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಬೆಂಗಳೂರು
ವಿಧಾನಮಂಡಲ ಅಧಿವೇಶನದಲ್ಲಿ ಈ ಹಿಂದೆ ವಿಪಕ್ಷಗಳಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿತ್ತು. ಆದರೆ ಈ ಬಾರಿ ತಕ್ಕಮಟ್ಟಿಗೆ ಅದನ್ನು ಮೀರುವಲ್ಲಿ ಬಿಜೆಪಿ ಯಶಸ್ವಿ ಆಗಿರುವುದು ಗೋಚರಿಸುತ್ತಿದೆ. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಅರ್ಧದಲ್ಲೇ ಮೊಟಕುಗೊಂಡಿರುವುದು ಬಿಜೆಪಿಗೆ ಬೂಸ್ಟ್ ನೀಡಿದೆ.
ಇದನ್ನೂ ಓದಿ: ಎಡಿಸಿ, ಬುಡಕಟ್ಟು ಹಕ್ಕುಗಳು ಮತ್ತು ಎಫ್‌ಆರ್‌ಎಗಳನ್ನು ಬಿಜೆಪಿ ನಾಶಮಾಡುತ್ತಿದೆ – ಬೃಂದಾ ಕಾರಟ್
ಸದನದಲ್ಲಿ ರಾಜ್ಯಪಾಲರಿಗೆ ಅಡ್ಡಿ ಉಂಟು ಮಾಡಲಾಗಿದೆ ಎಂದು ಆರೋಪಿಸಿ ಉಭಯ ಸದನದಲ್ಲೂ ಬಿಜೆಪಿ ತೀವ್ರ ಸದ್ದು ಮಾಡುತ್ತಿದೆ. ವಿಧಾನ ಪರಿಷತ್‌ನಲ್ಲಿ ಕಲಾಪ ಸುಗಮವಾಗಿ ನಡೆಯಲು ಅವಕಾಶ ಇಲ್ಲದಂತಹ ಪರಿಸ್ಥಿತಿ ಶುಕ್ರವಾರದವರೆಗೆ ನಿರ್ಮಾಣವಾಗಿತ್ತು.
ಪ್ರತಿಭಟನೆ, ಅಬ್ಬರ :
ವಿಪಕ್ಷಗಳು ಸಹಜವಾಗಿ ಸರ್ಕಾರವನ್ನು ಕಟ್ಟಿಹಾಕಲು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತದೆ. ಇದು ಸಹಜ ಸಂಪ್ರದಾಯ. ಆದರೆ ಸದನ ಆರಂಭವಾದ ದಿನದಿಂದ ಈವರೆಗೆ ವಿಪಕ್ಷಗಳು ಧರಣಿ ನಡೆಸದೆಯೂ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿವೆ. ರಾಜ್ಯಪಾಲರ ಭಾಷಣ ವಿವಾದದ ಕುರಿತಾಗಿ ಸರ್ಕಾರ ವಿಪಕ್ಷಗಳಿಗೆ ಟಾಂಗ್ ನೀಡುವ ಕೆಲಸ ಮಾಡುತ್ತಿದ್ದರೂ, ಈ ಹಿಂದಿನ ಘಟನಾವಳಿಗಳನ್ನು ಉಲ್ಲೇಖಿಸಿ ವಿಪಕ್ಷ ಅದಕ್ಕೆ ತಿರುಗೇಟು ನೀಡುತ್ತಿದೆ.
ಕಳೆದ ಅಧಿವೇಶನಗಳಲ್ಲಿ ಬಿಜೆಪಿಯಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿತ್ತು. ಬಿಜೆಪಿಯ ನಾಯಕರಲ್ಲಿ ಪರಸ್ಪರ ಹೊಂದಾಣಿಕೆಯ ಕೊರತೆ ಸದನದಲ್ಲೇ ವ್ಯಕ್ತವಾಗುತ್ತಿತ್ತು. ಆದರೆ ಈ ಬಾರಿ ಒಂದಿಷ್ಟು ಸಮನ್ವಯತೆ ಗೋಚರಿಸುತ್ತಿದೆ. ವಿಪಕ್ಷದಲ್ಲಿ ಆರ್.ಅಶೋಕ್, ಸುನೀಲ್ ಕುಮಾರ್, ಸುರೇಶ್ ಕುಮಾರ್, ಅರವಿಂದ ಬೆಲ್ಲದ ತಮ ಮಾತುಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಇದನ್ನೂ ನೋಡಿ: ಒಂದು ಪಟ್ಟಿ, ನೂರಾರು ಪ್ರಶ್ನೆಗಳು – ಸುಪ್ರೀಂ ಕೋರ್ಟ್‌ನಲ್ಲಿ SIR ವಿಚಾರಣೆ Janashakthi Media
