ಶಿವಮೊಗ್ಗ: ವಿಶ್ವಪ್ರಸಿದ್ಧ ಜೋಗ್ ಜಲಪಾತವನ್ನು ಕಾಮಗಾರಿಯ ಕಾರಣದಿಂದ ಮೂರು ತಿಂಗಳ ಕಾಲ ಪ್ರವೇಶ ನಿರ್ಭಂದಿಸಲಾಗಿದೆ.
ವಿಶ್ವಪ್ರಸಿದ್ಧ ಜೋಗ್ ಫಾಲ್ಸ್ ವೀಕ್ಷಣೆಗೆ ತೆರಳಲು ಯೋಜನೆ ಹಾಕಿಕೊಂಡಿದ್ದೀರಾ? ಹಾಗಾದರೆ ನೀವು ಇದನ್ನು ಓದಬೇಕು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ್ ಜಲಪಾತ ಕಾಮಗಾರಿಯ ಕಾರಣದಿಂದ ಮೂರು ತಿಂಗಳ ಕಾಲ ಪ್ರವೇಶವನ್ನು ನಿರ್ಭಂದಿಸಲಾಗಿದೆ.
ಇದನ್ನೂ ಓದಿ : ಸರಿಯಾದ ಸಮಯಕ್ಕೆ ಫೀಸ್ ಕಟ್ಟಲಿಲ್ಲ ಅಂದರೆ ಮಕ್ಕಳನ್ನು ಕತ್ತಲೆ ಕೋಣೆ ಕೂಡಿಯಾಕುವ ಶಿಕ್ಷೆ: ಖಾಸಗಿ ಶಾಲೆಯೊಂದರ ಮೇಲೆ ಅರೋಪ
ಜೋಗದ ಮುಖ್ಯದ್ವಾರ ಕಾಮಗಾರಿ ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಜನವರಿ 01 ರಿಂದ ಮಾರ್ಚ್ 15ರ ವರೆಗೆ ಮೂರು ತಿಂಗಳುಗಳ ಕಾಲ ಸಾರ್ವಜನಿಕರ ಮತ್ತು ಪ್ರವಾಸಿಗರ ಪ್ರವೇಶವನ್ನು ನಿರ್ಭಂದಿಸಲಾಗಿದೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ತೊಂದರೆಯಾಗ ಬಾರದೆಂಬ ಕಾರಣದಿಂದ ಪ್ರವೇಶ ನಿರ್ಭಂದಿಸಲಾಗಿದೆ. ಸಾರ್ವಜನಿಕರು ಮತ್ತು ಪ್ರವಾಸಿಗರು
ಸಹಕರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜೋಗ ನಿರ್ವಹಣಾ ಪ್ರಾಧಿಕಾರ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ನೋಡಿ : ದೇವನೂರ ಮಹಾದೇವ ಅವರಿಗೆ ವೈಕಂ ಪ್ರಶಸ್ತಿ: ವೈಕಂ ಸತ್ಯಾಗ್ರಹದ ಆಳ ಅಗಲ Janashakthi Media