JNU ವಿದ್ಯಾರ್ಥಿ ಸಂಘದ ಚುನಾವಣೆ : ಎಡ ವಿದ್ಯಾರ್ಥಿ ಒಕ್ಕೂಟಕ್ಕೆ ಭರ್ಜರಿ ಗೆಲುವು, ಮಖಾಡೆ ಮಲಗಿದ ABVP

ನವದೆಹಲಿ : ಪ್ರತಿಷ್ಠಿತ ವಿಶ್ವವಿದ್ಯಾಲಯ ಎಂದು ಗುರುತಿಸಿಕೊಂಡಿರುವ ದೆಹಲಿ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕದ ಚುನಾವಣೆಯಲ್ಲಿ ಎಡ ವಿದ್ಯಾರ್ಥಿ ರಂಗ ಭರ್ಜರಿ ಗೆಲುವು ದಾಖಲಿಸಿದೆ. JNU

ಬಿಜೆಪಿ ಬೆಂಬಲದ ವಿದ್ಯಾರ್ಥಿ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್,ಎಬಿವಿಪಿ ಎಲ್ಲಾ ಸ್ಥಾನಗಳಲ್ಲಿ ತೀವ್ರ ಮುಖಭಂಗ ಅನುಭವಿಸಿದೆ.

ಎಡ ವಿದ್ಯಾರ್ಥಿ ರಂಗದಿಂದ ಸ್ಪರ್ಧಿಸಿದ್ದ ಐಸಾ ಸಂಘಟನೆಯ ಧನಂಜಯ ಗೆಲುವು ಸಾಧಿಸಿದ್ದಾರೆ. 3100 ಮತಗಳನ್ನು ಪಡೆಯುವ ಮೂಲಕ ಜೆನ್‌ಯು ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ABVPಯ ಉಮೇಶ್ ಚಂದ್ರ ಅಜ್ಮೀರ್ 2,118 ಮತಗಳನ್ನು ಪಡೆದರು.

ಎಡ ವಿದ್ಯಾರ್ಥಿ ಒಕ್ಕೂಟದಿಂದ ಉಪಾಧ್ಯಕ್ಷ ‌ಸ್ಥಾನದಲ್ಲಿ‌ ಸ್ಪರ್ಧಿಸಿರುವ SFI ವಿದ್ಯಾರ್ಥಿ ಸಂಘಟನೆಯ ಅವಿಜಿತ್ ಘೋಷ್‌ 2,762‌ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ABVP ಯ ದೀಪಿಕಾ ಶರ್ಮಾ 1848 ಮತಗಳನ್ನಷ್ಟೆ ಪಡೆಯಲು ಸಾಧ್ಯವಾಯಿತು. JNU

ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಬಾಪ್ಸಾ ಸಂಘಟನೆಯ ಪ್ರಿಯಾಂಶಿ ಎಡ ವಿದ್ಯಾರ್ಥಿ ರಂಗದ ಅಭ್ಯರ್ಥಿಯಾಗಿದ್ದಾರು. 3,440 ಮತಗಳನ್ನು ಪಡೆದು ಅವರು ಗೆಲುವು ಸಾಧಿಸಿದ್ದಾರೆ. ABVPಯ ಅರ್ಜುನ್ ಆನಂದ್ 2412 ಮತಗಳನ್ನು ಪಡೆದು ಸೊಲುಂಡಿದ್ದಾರೆ.

ಸಹಕಾರ್ಯದರ್ಶಿಯ ಸ್ಥಾನಕ್ಕೆ ಎಡ‌ ವಿದ್ಯಾರ್ಥಿ ಒಕ್ಕೂಟದಿಂದ ‌AISF ಸಂಘಟನೆಯ ‌ಅಭ್ಯರ್ಥಿ ಮೊಹಮದ್ ಸಾಜಿದ್ 3035 ಮತ ಪಡೆದು ಗೆಲುವು ಸಾಧಿಸಿದ್ದು, ABVPಯ ಗೋವಿಂದ್ ಡಾಂಗಿ 2591 ಮತ ಪಡೆದು ಸೋಲುಂಡಿದ್ದಾರೆ.

ಇದನ್ನೂ ಓದಿಚುನಾವಣಾ ಬಾಂಡ್ : ಉದ್ದೇಶ ಒಳ್ಳೆಯದಾಗಿದೆ: ‘ಹಣವಿಲ್ಲದೆ ಯಾವುದೇ ರಾಜಕೀಯ ಪಕ್ಷ ನಡೆಸಲು ಸಾಧ್ಯವಿಲ್ಲ – ನಿತಿನ್ ಗಡ್ಕರಿ

ಕೋವಿಡ್ ಕಾರಣದಿಂದ ಕಳೆದ ನಾಲ್ಕು ವರ್ಷಗಳಿಂದ ಜೆಎನ್‌ಯುನಲ್ಲಿ ಚುನಾವಣೆ ನಡೆದಿರಿಲ್ಲ. ಸುದೀರ್ಘ4 ವರ್ಷಗಳ ಬಳಿಕ ನಡೆಯುತ್ತಿರುವ ಈ ಚುನಾವಣೆ ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಎಡಪಂಥೀಯ ವಿದ್ಯಾರ್ಥಿ ಘಟಕಗಳಾದ ಆಲ್ ಇಂಡಿಯಾ ಸ್ಟುಡೆಂಟ್ ಆಸೋಸಿಯೇಶನ್(AISA) ಡೆಮಾಕ್ರಟಿಕ್ ಸ್ಟುಡೆಂಟ್ ಫೆಡರೇಶನ್(DSF), ಸ್ಟುಡೆಂಟ್ ಫೆಡರೇಶನ್ ಆಫ್ ಇಂಡಿಯಾ(SFI) ಆಲ್ ಇಂಡಿಯಾ ಸ್ಟುಡೆಂಟ್ ಫೆಡರೇಶನ್(AISF) ವಿದ್ಯಾರ್ಥಿ ಸಂಘಟನೆಗಳು ಜಂಟಿಯಾಗಿ ಸ್ಪರ್ಧೆ ನಡೆಸಿದ್ದವು. JNU

JNU ವಿದ್ಯಾರ್ಥಿ ಸಂಘದ ಚುನಾಣೆಯಲ್ಲಿ ಶೇಕಡಾ 73ರಷ್ಟು ಮತದಾನವಾಗಿತ್ತು. 12 ವರ್ಷಗಳಲ್ಲೇ ಗರಿಷ್ಠ ಮತದಾನ ದಾಖಲಾಗಿತ್ತು. 7,700 ವಿದ್ಯಾರ್ಥಿಗಳು ತಮ್ಮ ಹಕ್ಕು ಚಲಾಯಿಸಿದ್ದರು. ಇಲ್ಲಿವರೆಗೆ ನಡೆದ ಚುನಾವಣೆಯಲ್ಲಿ 22 ಬಾರಿ SFI ನಿಂದ ಅಧ್ಯಕ್ಷರಾಗಿದ್ದರೆ. ಐಸಾ ಸಂಘಟನೆ 12 ಬಾರಿ ಅಧ್ಯಕ್ಷ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ವಿದ್ಯಾರ್ಥಿ ಸಂಘದ ಚುನಾಣೆಯಲ್ಲಿ ABVP ಯನ್ನು ಗೆಲ್ಲಿಸಲು ಕೇಂದ್ರದ ಬಿಜೆಪಿ ಸರ್ಕಾರ ತನ್ನ ಪ್ರಭಾವವನ್ನು ಬೀರಿತ್ತು. ಸ್ಪರ್ಧಿಸಿದ್ದ ಎಡ ವಿದ್ಯರ್ಥಿಗಳಿಗೆ ಹಿಂಸೆ ನೀಡಿತ್ತು, ಆದಾಗ್ಯೂ ABVP ತೀವ್ರ ಸೋಲು ಅನುಭವಿಸಿದ್ದು, ಕೋಮುವಾದ ಸೋಲುಂಡಿದೆ. ಎಡ ವಿದ್ಯರ್ಥಿಗಳ ಗೆಲುವು ಮಾನವೀಯತೆ, ಪ್ರೀತಿ, ಐಕ್ಯತೆಯ ಗೆಲುವಾಗಿದೆ ಎಂದು ವಿಶ್ಲೇಷಿಸಲಾಗುತ್ತದೆ.

 

Donate Janashakthi Media

Leave a Reply

Your email address will not be published. Required fields are marked *