ರಾಂಚಿ: ಹೇಮಂತ್ ಸೊರೇನ್ ಸರ್ಕಾರವು ಜಾರ್ಖಂಡ್ ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತ ಯಾಚನೆಯಲ್ಲಿ ಗೆಲುವು ಸಾಧಿಸಿದೆ. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಅವರ ಪರ 45 ಶಾಸಕರು ಬೆಂಬಲ ಸೂಚಿಸಿದರು.
ಭೂಹಗರಣ ಪ್ರಕರಣದಲ್ಲಿ ಜಾಮೀನು ದೊರೆತ ನಂತರ, ಮತ್ತೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಹೇಮಂತ್ ಸೊರೇನ್, ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿದರು.
ಇದನ್ನು ಓದಿ : ‘ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿರೋದು ನಿಜ; ಮರುಪರೀಕ್ಷೆ ನಡೆಸಿ’ ಎಂದ ಸುಪ್ರೀಂಕೋರ್ಟ್!
ಈ ಸಂದರ್ಭದಲ್ಲಿ ಆಡಳಿತಾರೂಢ ಮೈತ್ರಿಕೂಟದ ಜೆಎಂಎಂನ 27, ಕಾಂಗ್ರೆಸ್ ಪಕ್ಷದ 17, ಆರ್‌ಜೆಡಿಯ ಓರ್ವ ಶಾಸಕ ಹೇಮಂತ್ ಸೊರೇನ್ ಪರವಾಗಿ ಮತ ಚಲಾಯಿಸಿದರು. ಇದರಿಂದ 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಹೇಮಂತ್ ಸೊರೇನ್ 45 ಶಾಸಕರ ಬೆಂಬಲವನ್ನು ಪಡೆಯುವ ಮೂಲಕ ವಿಶ್ವಾಸ ಮತ ಸಾಬೀತು ಪಡಿಸಿದರು.
ಇದನ್ನು ನೋಡಿ : ಅಯೋಧ್ಯೆಯಲ್ಲಿ ಬಿಜೆಪಿಯನ್ನುಸೋಲಿಸಿದಂತೆ ಗುಜರಾತ್‌ನಲ್ಲೂ ಸೋಲಿಸುತ್ತೇವೆ – ರಾಹುಲ್ ಗಾಂಧಿJanashakthi Media