ಜಾರ್ಖಂಡ್ ರಾಜ್ಯದಲ್ಲಿ ಒಂದು ವಾರ ಲಾಕ್ ಡೌನ್

ರಾಂಚಿ: ಕೋವಿಡ್‌-19 ಪ್ರಕರಣಗಳ ಉಲ್ಬಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾರ್ಖಂಡ್ ರಾಜ್ಯದಲ್ಲಿ ಒಂದು ವಾರ ಸಂಪೂರ್ಣ ಲಾಕ್‌ಡೌನ್‌ ಮಾಡುವುದಾಗಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಘೋಷಿಸಿದ್ದಾರೆ.

ಮೂಲಗಳ ಪ್ರಕಾರ ಏಪ್ರಿಲ್ 22ರ ಗುರುವಾರ ಬೆಳಗ್ಗೆ 6 ರಿಂದ ಏಪ್ರಿಲ್ 29ರ ಗುರುವಾರ ಸಂಜೆ 6 ಗಂಟೆಯ ರವರೆಗೆ ಲಾಕ್‌ಡೌನ್ ಜಾರಿಯಾಗಲಿದೆ. ಮುಂದಿನ ಪರಿಸ್ಥಿತಿ ಗಮನಿಸಿ ಲಾಕ್‌ಡೌನ್ ಇನ್ನಷ್ಟು ದಿನಗಳು ವಿಸ್ತರಿಸುವ ಸಾಧ್ಯತೆಯಿದೆ ಎಂಬ ವರದಿಗಳು ಇವೆ.

ಇದನ್ನು ಓದಿ: ಹೈಕೋರ್ಟ್‌ನ ಲಾಕ್‌ಡೌನ್ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್

ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗುವುದು ಎಂಬ ಮೂಲಗಳು ಇವೆ. ಜಾರ್ಖಂಡ್‌ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವೆ ಕೆಲವು ಕೇಂದ್ರ, ರಾಜ್ಯ ವಲಯಗಳು ಮತ್ತು ಖಾಸಗಿ ಕಚೇರಿಗಳು ಮಾತ್ರ ತೆರೆದಿರುತ್ತವೆ. ಆದರೆ, ರಾಜ್ಯದಲ್ಲಿ ಕೈಗಾರಿಕೆಗಳು, ನಿರ್ಮಾಣ, ಕೃಷಿ ಮತ್ತು ಗಣಿಗಾರಿಕೆ ಚಟುವಟಿಕೆಗಳು ಎಂದಿನಂತೆ ಮುಂದುವರಿಯಲಿವೆ.

“ಕರೋನಾ ವೈರಸ್ ಸರಪಳಿಯನ್ನು ಕತ್ತರಿಸುವ ಉದ್ದೇಶದಿಂದಾಗಿ ಏಪ್ರಿಲ್ 22 ರಿಂದ ಏಪ್ರಿಲ್ 29 ರವರೆಗೆ ‘ಸ್ವಾಸ್ಥ್ಯ ಸುರಕ್ಷಾ ಸಪ್ತಾಹ’ವನ್ನು ಆಚರಿಸಲು ನಾವು ನಿರ್ಧರಿಸಿದ್ದೇವೆ. ಅದರ ಅಡಿಯಲ್ಲಿ ಅಗತ್ಯ ವಸ್ತುಗಳ ಮಾರಾಟ ಮಾಡುವುದನ್ನು ಹೊರತುಪಡಿಸಿ ಇತರೆ ಎಲ್ಲಾ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಬಂದ್ ಮಾಡಲಾಗುವುದು ಎಂದು ಸಿಎಂ ಸೊರೆನ್ ತಿಳಿಸಿದ್ದಾರೆ.

ಇದನ್ನು ಓದಿ: ಕೋವಿಡ್‌ ನಿಂದ ಮೃತಪಟ್ಟವರ ಮರಣ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಫೋಟೊ ಇರಲಿ – ನವಾಬ್‌ ಮಲ್ಲಿಕ್

ಏಪ್ರಿಲ್ 19ರಂದು ಕೋವಿಡ್ -19 ಸೋಂಕಿನ ಪರಿಣಾಮವಾಗಿ 46 ಮಂದಿ ಸಾವನ್ನಪ್ಪಿದ್ದಾರೆ, ರಾಜ್ಯದಲ್ಲಿ ಸದ್ಯ 28,000 ಕ್ಕೂ ಹೆಚ್ಚಿನ ಪ್ರಕರಣಗಳು ಸಕ್ರಿಯವಾಗಿವೆ.

ಮುಖ್ಯಮಂತ್ರಿಗಳು ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಬೆಂಬಲ ಅತ್ಯಧಿಕವಾಗಿದೆ. ಇದರಿಂದ ಮಾತ್ರ ಸೋಂಕನ್ನು ನಿವಾರಣೆ ಮಾಡಲು ಸಾಧ್ಯ. ಅಲ್ಲದೆ, ಸರ್ಕಾರದ ಆದೇಶಗಳನ್ನು ಪಾಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *