ಬೆಂಗಳೂರು: ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಇನ್ನುಳಿದ ಒಂದು ಸ್ಥಾನಕ್ಕೆ ನಾಡಿದ್ದು ಸಭೆ ನಡೆಸಿ ಅಭ್ಯರ್ಥಿಯನ್ನು ಘೋಷಣೆ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ಗೆ 28 ಸ್ಥಾನಗಳ ಪೈಕಿ 3 ಸ್ಥಾನಗಳನ್ನು ಬಿಟ್ಟುಕೊಟ್ಟಿತ್ತು. ಪ್ರಜ್ವಲ್ ರೇವಣ್ಣ ಹಗರಣವಾದ ಬಳಿಕ ಬಿಜೆಪಿ ಈ ವಿಚಾರದಲ್ಲಿ ಯಾವುದೇ ತಲೆಹಾಕದೇ ಇದನ್ನು ಜೆಡಿಎಸ್‌ಗೆ ಮಾತ್ರ ಅದರ ವಿಚಾರವಾಗಿ ಅವರೇ ಪರಿಹರಿಸಿಕೊಳ್ಳುವಂತೆ ಬಿಟ್ಟಿದೆ. ಈ ಪ್ರಕರಣ ಮುನ್ನಲೆಗೆ ಬಂದ ಬಳಿಕ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮುಂದುವರೆಯುವುದು ಅನುಮಾನವೆಂದು ಹೇಳಲಾಗಿತ್ತಾದರೂ ಕರ್ನಾಟಕದ ಬಿಜೆಪಿಯ ಹಿರಿಯ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇನ್ನು ಕೆಲವರು ವಿಧಾನ ಪರಿಷತ್ತಿನ ಚುನಾವಣೆಯಲ್ಲೂ ಮೈತ್ರಿ ಮುಂದುವರೆಯಲಿದೆ ಎಂದಿದ್ದರು.
ಇದನ್ನು ಓದಿ : ಕರ್ನಾಟಕ ರಾಷ್ಟ್ರ ಸಮಿತಿಯ ಮತ್ತೊಂದು ದೂರಿನ ಅರ್ಜಿ ಮುಂದೂಡಿದ ಹೈಕೋರ್ಟ್
ಈಗಾಗಲೇ ಬಿಜೆಪಿ ವಿದಾನಪರಿಷತ್ತಿನ ಆರು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಎರಡೂ ಪಕ್ಷಗಳ ನಡುವೆ ಮೈತ್ರಿ ಮಾತುಕತೆ ಅಂತಿಮಗೊಂಡಿದ್ದು, ಕೇವಲ ಸೀಟು ಹಂಚಿಕೆ ಅಲ್ಲದೆ ಕ್ಷೇತ್ರಗಳ ಅಭ್ಯರ್ಥಿಗಳನ್ನು ಸಹ ಅಂತಿಮಗೊಳಿಸಲಾಗಿದೆ. ಆರು ಸ್ಥಾನಗಳ ಪೈಕಿ ಬಿಜೆಪಿ 4 ಸ್ಥಾನ ಉಳಿಸಿಕೊಂಡು ಹಿಂದಿನ ಚುನಾವಣೆಯಲ್ಲಿ ಜಯಗಳಿಸಿದ ಆಧಾರದ ಮೇಲೆ ಎರಡು ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಮೈತ್ರಿ ಪ್ರಕಾರ ಈಶಾನ್ಯ ಪದವೀಧರ ಕ್ಷೇತ್ರ, ನೈಋತ್ಯ ಪದವೀಧರ ಕ್ಷೇತ್ರ, ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ ಬಿಜೆಪಿಗೆ ಹಂಚಿಕೆಯಾದರೆ, ನೈಋುತ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರ ಜೆಡಿಎಸ್ ಪಡೆದುಕೊಂಡಿದೆ. ಈಗಾಗಲೇ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಎಸ್.ಎಲ್.ಭೋಜೇಗೌಡ ಇವರನ್ನು ಜೆಡಿಎಸ್ ಮರುಆಯ್ಕೆಗಾಗಿ ಘೋಷಿಸಿದೆ.
ಮತ್ತೊಂದು ಸ್ಥಾನಕ್ಕೆ ಶ್ರೀಕಂಠೇಗೌಡ ಮರುಆಯ್ಕೆಗಾಗಿ ಆಕಾಂಕ್ಷಿತರು ಎಂಬ ಮಾತು ಕೇಳಿ ಬರುತ್ತಿದೆ. ವಿಧಾನ ಪರಿಷತ್ತಿನ ಈ ಆರು ಸ್ಥಾನಗಳ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಮೇ 16 ಕಡೇ ದಿನವಾಗಿದೆ.
ಇದನ್ನು ನೋಡಿ : ಲಾ ಪತಾ ಚುನಾವಣಾ ಆಯೋಗ: ಬೆನ್ನೆಲುಬು ಇಲ್ಲದ ಆಯುಕ್ತರು Janashakthi Media