ಜಾನುವಾರ ಹತ್ಯೆ ನಿಷೇಧ ಕಾರ್ಪೋರೇಟ್ ಲೂಟಿಯನ್ನು ವೇಗಗೊಳಿಸುವ ಹುನ್ನಾರ

ಬಳ್ಳಾರಿ;ಜ,18 : “ಜಾನುವಾರು ಹತ್ಯೆ ನಿಷೇದ ಕಾರ್ಪೊರೇಟ್ ಲೂಟಿಯನ್ನು ವಿಸ್ತರಿಸಿ ವೇಗಗೊಳಿಸುವ ಹುನ್ನಾರ” ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಹಗರಿಬೊಮ್ಮನ ಹಳ್ಳಿಯಲ್ಲಿ ನಡೆಯಿತು. ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ದಲಿತ ಹಕ್ಕುಗಳ ಸಮಿತಿ  ಹಮ್ಮಿಕೊಂಡಿತ್ತು.

ದಲಿತ ಹಕ್ಕುಗಳ ಸಮಿತಿ ಕರ್ನಾಟಕ ರಾಜ್ಯ ಸಹ ಸಂಚಾಲಕರಾದ ಬಿ.ಮಾಳಮ್ಮರವರು ಪುಸ್ತಕ  ಬಿಡುಗಡೆ ಮಾಡಿ ನಂತರ ಮಾತನಾಡಿದ ಅವರು ಜಾನುವಾರು ಹತ್ಯೆ ನಿಷೇಧ  ತಿದ್ದುಪಡಿ ಕಾಯ್ದೆಯನ್ನು ರಾಜ್ಯದ ಜನತೆಯ  ಮುಂದೆ  ಅದರ ಸಾಧಕ ಬಾಧಕಗಳ ಕುರಿತು ಚರ್ಚೆ ನಡಸದೇ ವಿಧಾನ  ಸಭೆಯಲ್ಲಿ ಶಾಸಕರು ಚರ್ಚೆಸಲು ಅವಕಾಶ  ನೀಡದೇ  ವಿಧಾನ  ಪರಿಷತ್  ಕಲಾಪದಲ್ಲಿ ಪ್ರಜಾಸತ್ತಾತ್ಮಕವಾಗಿ ಅಂಗೀಕರಿಸದೇ  ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿದೇ ಇದರ ಅಗತ್ಯ ಮತ್ತು ಅವಸರವಾದರೂ ಏನಿತ್ತು? ಇದು  ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಸರ್ವಾಧಿಕಾರ  ದೋರಣಿಯೂ ಆಗಿದೆ. ಇದು ಕಾರ್ಪೊರೇಟ್  ಲೂಟಿಯನ್ನು ವಿಸ್ತರಿಸಿ,  ವೇಗಗೋಳಿಸುವ  ಹುನ್ನಾರ ಹೊಂದಿದೆ ಎಂದು ಹೇಳಿದರು.

ಮುಂದುವರಿದು ಮಾತನಾಡಿ ಇಲ್ಲಿಯವರೆಗೂ ಜಾನುವಾರು ಗೋವುಗಳ ಸಂತತಿಯನ್ನು ಮತ್ತು ದೇಶಿಯ ತಳಿ ರಕ್ಷಣೆಯನ್ನು ಮತ್ತು ಅವುಗಳ ಅಭಿ ವೃದ್ಧಿಯನ್ನು ರೈತರು ಕೂಲಿಕಾರರು ಕಸುಬುದಾರರು ಹಾಗೂ ಇತರೆ ಕಸುಬುದಾರರು ಮಾಡುತ್ತಾ ಬಂದಿದ್ದಾರೆ. ಈ ದಿನ ಅವರ ಉಪ ಕಸುಬುಗಳನ್ನು ಸರ್ಕಾರಗಳು ದಿವಾಳಿ ಕೋರ ನೀತಿಗಳಿಂದಾಗಿ ಅಳಿವಿನಂಚಿಗೆ ತಲುಪಿದೆ. ಜಾನುವಾರು ಸಂರಕ್ಷಣೆಯೂ ಅಥವಾ ದೇಶಿಯ ತಳಿಗಳ ರಕ್ಷಣೆಯೆಂದರೆ ಉಪ ಕಸುಬಿನ ಅಭಿವೃದ್ಧಿ ಮತ್ತು ದೇಶಿಯ ತಳಿಯ ಇಳುವರಿ ಹೆಚ್ಚಳಕ್ಕೆ ಕೈಗೊಳ್ಳುವ ಕ್ರಮಗಳಾಗಿರುತ್ತವೆ. ಆದರೇ ಮಸೂದೆಯಲ್ಲಿ ಅಂತಹ ಯಾವುದೇ ಕ್ರಮಗಳು ಕಂಡು ಬರುತ್ತಿಲ್ಲ. ಬದಲಿಗೆ ಸಂಕಷ್ಟದಲ್ಲಿರುವ ಉಪಕಸುಬುನ್ನುಮತ್ತಷ್ಟು ಸಂಕಷ್ಟಕ್ಕೆ ದೂಡುವ ಅಂಶಗಳೆ ಹೆಚ್ಚಾಗಿವೆ.

ಈ ಕಾರ್ಯಕ್ರಮದಲ್ಲಿ ದೇವದಾಸಿ  ಮಹಿಳಾ ವಿಮೊಚನಾ ಸಂಘದ ಅಧ್ಯಕ್ಷೆ ಬಿ. ಮೈಲಮ್ಮ, ಕಾರ್ಯದರ್ಶಿ ಪಿ.ಚಾಂದಬಿ, ಸಿಐಟಿಯುನ ಜಗನ್ನಾಥ,  ಜಾಹಂಗಿರ್, ಪ್ರಾಂತ ರೈತ ಸಂಘದ ಮುಖಂಡರಾದ ಸಿ.ಹನುಮಂತಪ್ಪ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *