ಹತ್ರಾಸ್ ನಲ್ಲಿ ದಲಿತ ಯುವತಿ ಅತ್ಯಾಚಾರ ಘಟನೆ: ಜನವಾದಿ ಮಹಿಳಾ ಸಂಘಟನೆ ಖಂಡನೆ

ದೆಹಲಿ: ಉತ್ತರಪ್ರದೇಶದ ಹತ್ರಾಸ್ ನಲ್ಲಿ ಹತ್ತೊಂಬತ್ತು ವರ್ಷದ ದಲಿತ ಯುವತಿಯ ಮೇಲೆ ನಡೆದ ಬರ್ಭರ ದೌರ್ಜನ್ಯ ಅತ್ಯಾಚಾರ ಮತ್ತು ಪೋಷಕರಿಗೆ ಯುವತಿಯ ಮುಖವೂ ತೋರಿಸದೆ ಅಂತ್ಯ ಸಂಸ್ಕಾರ ಮಾಡಿರುವ ಭಯಾನಕ ಘಟನೆಯನ್ನು ಅಖಿಲ‌ ಭಾರತ ಜನವಾದಿಮಹಿಳಾ ಸಂಘಟನೆಯು ತೀವ್ರವಾಗಿ ಖಂಡಿಸಿದೆ.

ಇಂದು ರಾಜಧಾನಿ ದೆಹಲಿಯಲ್ಲಿ ಉತ್ತರಪ್ರದೇಶ ಭವನದ ಎದುರು ಜನವಾದಿ ಮಹಿಳಾ ಸಂಘಟನೆ, ಎನ್.ಎಫ್.ಐ‌.ಡಬ್ಲ್ಯು, ಏ.ಐ.ಎಂ.ಎಸ್.ಎಸ್.
ಎಸ್.ಎಫ್. ಐ, ಎ.ಐ.ಎಸ್.ಎಫ್, ಎ.ಐ‌.ಎಸ್.ಡಿ.ಓ, ಡಿ.ವೈ‌. ಎಫ್.ಐ, ಎ.ಐ.ವೈ‌.ಎಫ್, ಎ.ಐ.ಡಿ.ವೈ.ಓ, ಮತ್ತು ಅನ್ ಹದ್ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಪ್ರತಿಭಟನಾಕಾರರನ್ನು ದೆಹಲಿಯ ಪೋಲೀಸರು ಬಲವಂತವಾಗಿ ಬಂಧಿಸಿದ್ದು ಚಿಕ್ಕದೊಂದು ಪೋಲೀಸ್ ವಾಹನದಲ್ಲಿ ಅದರ ಸಾಮರ್ಥ್ಯ ಕ್ಕೆ ಮೀರಿ ಜನರನ್ನು ತುಂಬುತ್ತಿರುವ ವಿಡಿಯೋಗಳು ಪೋಲಿಸರ ವರ್ತನೆಗೆ ಸಾಕ್ಷಿಯಾಗಿದೆ.
ದೈಹಿಕ ಅಂತರವನ್ನು ಕಾಪಾಡಬೇಕೆಂದು ಪುನಃ ಪುನಹ ಹೇಳುವ ಕೇಂದ್ರ ಸರಕಾರದ‌ ಈ ನಡೆಯನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿ ಬಂಧಿಸಿರುವವರನ್ನು ಕರೆದೊಯ್ಯಲು ಸೂಕ್ತ ವಾಹನ ತರಲು ಒತ್ತಾಯಿಸಿದ್ದಾರೆ. ಈಗ ಬಂಧಿತರೆಲ್ಲರೂ ಪೋಲೀಸ್ ವಶದಲ್ಲಿದ್ದಾರೆ.

ಅಪರಾಧ ಗಳನ್ನು ಪೋಷಿಸುವ, ಅಪರಾಧಿಗಳನ್ನು ರಕ್ಷಿಸುವ ಯು.ಪಿ. ಸರಕಾರ ಮತ್ತು ಅದಕ್ಕೆ ಪೂರಕವಾಗಿ ವರ್ತಿಸುವ ಕೇಂದ್ರದ ಗೃಹ ಇಲಾಖೆಯ ವರ್ತನೆಗಳನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕರ್ನಾಟಕ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ಬಂಧಿತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ಸಂಘಟನೆಯು ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *