ಜನಶಕ್ತಿ ಉತ್ಸವ : ಸಾಮಾಜಿಕ ನ್ಯಾಯ ಇಲ್ಲದೆ ನಿಜವಾದ ಅಭಿವೃದ್ಧಿ ಅಸಾಧ್ಯ: ಡಾ.ಎಕ್ಕಾರು

ಉಡುಪಿ: ಸಾಮಾಜಿಕ ನ್ಯಾಯವನ್ನು ಕೇಂದ್ರವಾಗಿ ಇಟ್ಟುಕೊಂಡು ಅಭಿವೃದ್ದಿ ಪಥದ ಬಗ್ಗೆ ಯೋಚನೆ ಮಾಡಬೇಕಾಗಿದೆ. ಅದನ್ನು ಹೊರತು ಪಡಿಸಿದರೆ ನಿಜವಾದ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅದು ಕೇವಲ ಅಂಕಿ ಅಂಶಗಳ ಸುಡೋ ಅಭಿವೃದ್ಧಿಯಾಗುತ್ತದೆಂದು ಹಿರಿಯ ಚಿಂತಕ ಡಾ.ಗಣನಾಥ ಎಕ್ಕಾರು ಹೇಳಿದ್ದಾರೆ.

ಜನಶಕ್ತಿ ವಾರಪತ್ರಿಕೆಯ ಪ್ರಚಾರಾಂದೋಲನ ಭಾಗವಾಗಿ ಡಿಸೆಂಬರ್‌ 31 ರಂದು ಉಡುಪಿ ಬಡಗಬೆಟ್ಟು ಸೊಸೈಟಿ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ಜನಶಕ್ತಿ ಉತ್ಸವದಲ್ಲಿ ಅವರು ಉಡುಪಿ ಜಿಲ್ಲೆಯ ಅಭಿವೃದ್ಧಿಯ ಪಥ ಕುರಿತು ವಿಚಾರ ಮಂಡಿಸಿದರು.

ಅಭಿವೃದ್ಧಿಯನ್ನು ಶಿಕ್ಷಣ, ಆರೋಗ್ಯ ಹಾಗೂ ಬದುಕಿನ ಗುಣಮಟ್ಟದ ಆಧಾರದ ಮೇಲೆ ಅರ್ಥೈಸಬೇಕಾಗುತ್ತದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಬದುಕಿನ ಗುಣಮಟ್ಟವು ಆಶಾದಾಯಕವಾಗಿಲ್ಲ. ಸಂಸ್ಕೃತಿ ಮತ್ತು ಪ್ರಕೃತಿಯನ್ನು ಬಿಟ್ಟು ನಾವು ಅಭಿವೃದ್ಧಿ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ. ಕೃಷಿಯಲ್ಲಿನ ಸ್ಥಿತ್ಯಂತರ ಎಲ್ಲರದ ಮೇಲೆ ಪ್ರಭಾವ ಬೀರುತ್ತಿದೆ. ಇಲ್ಲಿನ ಮಾತೃ ಪ್ರಧಾನ ಬದಲು ಪುರುಷ ಪ್ರಧಾನ ಕುಟುಂಬ ವ್ಯವಸ್ಥೆ ಜಾರಿಗೆ ಬರುತ್ತಿದೆ ಎಂದು ಅವರು ತಿಳಿಸಿದರು.

ಒಂದು ಪ್ರದೇಶದ ಅಭಿವೃದ್ಧಿಗೆ ಖಾಸಗಿಗಿಂತ ಸರಕಾರಿ ಶಿಕ್ಷಣ ಸಂಸ್ಥೆಗಳ ಪಾತ್ರ ಬಹಳ ಮಹತ್ವವಾಗಿದೆ. ಆದರೆ ಇಂದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಿಂದ ದೂರವಾಗಿ ಖಾಸಗಿಗೆ ಹೆಚ್ಚು ಪ್ರೋತ್ಸಾಹ ನೀಡುವ ಕಾರ್ಯ ನಡೆಯುತ್ತಿದೆ. ಇದರಿಂದ ಬಡ ಹಿಂದುಳಿದವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ ರಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನಾವು ಸರಕಾರಿ ವಲಯದ ಶಿಕ್ಷಣ ಸಂಸ್ಥೆ ಗಳನ್ನು ಗಟ್ಟಿಕೊಳ್ಳಿಸಬೇಕಾಗಿದೆ. ಈ ಬಗ್ಗೆ ಹಕ್ಕೋತ್ತಾಯವನ್ನು ಅಗತ್ಯವಾಗಿ ಮಾಡಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

‘ಜ್ಞಾನ-ವಿಜ್ಞಾನ- ಜಿಂದಾಬಾದ್’ ನಾಟಕ

ಇದನ್ನೂ ಓದಿದೇಶೀಯ ಭಾಷೆ-ಸಂಸ್ಕೃತಿ ಉಳಿವಿಗಾಗಿ ಪರ್ಯಾಯ ಮಾಧ್ಯಮ ಅಗತ್ಯ: ಪುರುಷೋತ್ತಮ ಬಿಳಿಮಲೆ

ಉಡುಪಿ ಜಿಲ್ಲೆಯ ಪರಿಸರದ ಮೇಲೆ ವಿವಿಧ ಉದ್ಯಮಗಳು ಹಾನಿ ಉಂಟು ಮಾಡುತ್ತಿದೆ. ಇದು ಜಿಲ್ಲೆಯ ಸಮಾತೋಲನ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ಪರಿಸರ ನಾಶವನ್ನು ತಡೆಗಟ್ಟದಿದ್ದರೆ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಆದುದರಿಂದ ನಾವು ಪರಿಸರ ರಕ್ಷಣೆ ಬಗ್ಗೆ ಪ್ರಾಮಾಣಿಕವಾಗಿ ಚಿಂತನೆ ಮಾಡ ಬೇಕು. ಸಮಾತೋಲನವ ಅಭಿವೃದ್ಧಿಗೆ ಉತ್ತಮ ಪರಿಸರ ಅತೀ ಮುಖ್ಯವಾಗಿದೆ ಎಂದರು.

ಕರಾವಳಿ ಜಿಲ್ಲೆಗಳ ಸೌಹಾರ್ದ ಪರಂಪರೆ ಕುರಿತು ಮಂಗಳೂರು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಇಸ್ಮಾಯಿಲ್ ಎನ್. ಮಾತ ನಾಡಿದರು. ಅಧ್ಯಕ್ಷತೆಯನ್ನು ವಿಮಾ ನೌಕರರ ಸಂಘದ ಅಧ್ಯಕ್ಷ ಕೆ.ವಿಶ್ವನಾಥ್ ವಹಿಸಿದ್ದರು. ಕಾರ್ಮಿಕ ಮುಖಂಡ ಬಾಲಕೃಷ್ಣ ಶೆಟ್ಟಿ, ಜನಶಕ್ತಿ ವಾರಪತ್ರಿಕೆ ಸಂಪಾದಕ ಡಾ.ಕೆ.ಪ್ರಕಾಶ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೀಲಾವತಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನಾ ಸಂತೋಷ್ ನಾಯಕ್ ಪಟ್ಲ ನಿರ್ದೇಶನದ ವೈಜ್ಞಾನಿಕ ಮನೋಭಾವದ ಕುರಿತ ಮಕ್ಕಳ ನಾಟಕ ‘ಜ್ಞಾನ-ವಿಜ್ಞಾನ- ಜಿಂದಾಬಾದ್ ಪ್ರದರ್ಶನಗೊಂಡಿತು.

ರಮೇಶ್ ಗುಲ್ವಾಡಿ ಕಾರ್ಯಕ್ರಮ ನಿರೂ ಪಿಸಿದರು, ಎಚ್.ನರಸಿಂಹ ಸ್ವಾಗತಿಸಿದರು, ಸುರೇಶ್ ಕಲ್ಲಾಗರ ವಂದಿಸಿದರು.

ಈ ವಿಡಿಯೋ ನೋಡಿ : ಕರಾವಳಿ ನಾಡು ಇದೀಗ ಕಾರ್ಪೊರೇಟ್ ಬಿಳಿಯಾನೆಗಳ ಬಟ್ಟಲಾಗಿದೆ – ರಾಜಾರಾಂ ತಲ್ಲೂರು Janashakthi Media

 

Donate Janashakthi Media

Leave a Reply

Your email address will not be published. Required fields are marked *