ಜನರ ಸಹಕಾರದಿಂದ ಮಾತ್ರವೇ ಕೊರೊನಾ ಗೆಲ್ಲಬಹುದು: ಸಚಿವ ಶ್ರೀರಾಮುಲು

ಬಳ್ಳಾರಿ: ಕೋವಿಡ್-19 ತುರ್ತು ಪರಿಸ್ಥಿತಿಯಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ವ್ಯಾಪಕಗೊಳ್ಳುತ್ತಿರುವ ಕೊರೊನಾ ಸೋಂಕನ್ನು ಬೇಧಿಸಲು ಸಾಧ್ಯ. ಅದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಖಾತೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಇದನ್ನು ಓದಿ: ದಂಧೆಯ ರೂವಾರಿಗಳು ಬಿಜೆಪಿಯವರೇ : ದಿನೇಶ್‌ ಗುಂಡೂರಾವ್‌

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಸೊಂಕಿನ ಹರಡುವಿಕೆ ಪ್ರಮಾಣ ದಿನದಿಂದ ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಜನರ ಸಹಕಾರವು ಬಹುಮುಖ್ಯವಾಗಿದೆ. ಕೇವಲ ಅಧಿಕಾರಿಗಳಿಂದ ಮಾತ್ರ ಇಂತಹ ಹೆಮ್ಮಾರಿ ಹೆಡಮುರಿ ಕಟ್ಟಲು ಸಾಧ್ಯವಿಲ್ಲ, ಅವರೊಂದಿಗೆ ಜನರೂ ಸಹಕರಿಸಬೇಕು ಎಂದು ಹೇಳಿದರು.

ಎಲ್ಲಂದರಲ್ಲಿ ಜನರು ಅನಗತ್ಯವಾಗಿ ತಿರುಗಾಡುವುದು ಸಾಮಾನ್ಯವಾಗಿದೆ. ತರಕಾರಿ ಮಾರುಕಟ್ಟೆ ಸೇರಿದಂತೆ ನಾನಾ ಕಡೆ ಜನರು ಮುಗಿಬೀಳುವ ದೃಶ್ಯಗಳು ಸಾಮಾನ್ಯವಾಗಿವೆ. ಇದು ಮೊದಲು ನಿಲ್ಲಬೇಕು, ಜನರಲ್ಲಿ ಜವಾಬ್ದಾರಿ ಹೆಚ್ಚಾಗಬೇಕು ಎಂದು ಮನವಿ ಮಾಡಿದರು. ಸದ್ಯದ ಸ್ಥಿತಿಯಲ್ಲಿ ಲಾಕ್ ಡೌನ್ ಮಾಡಿದರೆ ಉತ್ತಮ ಎನ್ನುವ ಅಭಿಪ್ರಾಯ ನನ್ನದು, ಲಾಕ್ ಡೌನ್‌ ಮಾಡದಿದ್ದರೆ ನಿಯಂತ್ರಣಕ್ಕೆ ತರಲು ಕಷ್ಟಕರವಾಗಲಿದೆ ಎಂದು ಹೇಳಿದರು.

ಇದನ್ನು ಓದಿ: ಕೋವಿಡ್ ನಿರ್ವಹಣೆಯಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ರಾಜಕೀಯ ಪಕ್ಷಗಳು

ಸರ್ಕಾರ ಸ್ವಲ್ಪ ನಿಯಮಗಳನ್ನು ಸಡಿಸಿಲಿಸಿದರೂ ಜನರು ಅದನ್ನೇ ನೆಪವಾಗಿಟ್ಟುಕೊಂಡು ಅನಾವಶ್ಯಕವಾಗಿ ರಸ್ತೆಗೆ ಇಳಿಯಲಿದ್ದಾರೆ. ಸರ್ಕಾರ ಸೊಂಕಿನ ಪ್ರಮಾಣ ತಗ್ಗಿಸಲು ಶ್ರಮಪಡುತ್ತಿದೆ. ಆದರೇ, ಜನರು ಮಾತ್ರ ಭಯವಿಲ್ಲದೇ ಅನಗತ್ಯವಾಗಿ ಎಲ್ಲಂದರಲ್ಲೇ ತಿರುಗಾಡುವುದು ಕಣ್ಣಿಗೆ ಬೀಳುತ್ತಿದೆ. ಹಾಗಾಗಿ ನನ್ನ ಪ್ರಕಾರ ಸಂಪೂರ್ಣವಾಗಿ ಲಾಕ್‌ಡೌನ್‌ ಮಾಡಬೇಕು ಎಂದು ಸಚಿವರು ಹೇಳಿದರು.

ವರದಿ: ಪಂಪನಗೌಡ.ಬಿ.ಬಳ್ಳಾರಿ

Donate Janashakthi Media

Leave a Reply

Your email address will not be published. Required fields are marked *