2019 ರ ಆಗಸ್ಟ್ ನಲ್ಲಿ ಜಮ್ಮು – ಕಾಶ್ಮೀರಕ್ಕೆ ನೀಡಲಾಗಿದ್ದ 4ಜಿ ಇಂಟರ್ ನೆಟ್ ಸೌಲಭ್ಯವನ್ನು ಹಿಂಪಡೆಯಲಾಗಿದೆ. ಇದೀಗ 17 ತಿಂಗಳ ಬಳಿಕ ಮರಳಿ ಸೌಲಭ್ಯವನ್ನು ನೀಡಲಾಗಿದೆ. ಆ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮುಜುಗರ ತಪ್ಪಿಸಿಕೊಂಡಂತಾಗಿದೆ.
ಜಮ್ಮು. ಫೆ.,6 : ಜಮ್ಮು – ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿ ಸರಿಸುಮಾರು 17 ತಿಂಗಳ ನಂತರ, ಕಣಿವೆ ರಾಜ್ಯದಲ್ಲಿ 4 ಜಿ ಇಂಟರ್ ನೆಟ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ರೈತ ಹೋರಾಟದಲ್ಲಿ ಇಂಟರ್ ನೆಟ್ ಸ್ಥಗಿತ ಮಾಡಿದ್ದು, ರೈತರನ್ನು ಸರಕಾರ ನಡೆಸಿಕೊಂಡಿದ್ದ ರೀತಿಗೆ ಜಾಗತಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಹಾಲಿವುಡ್ ನಟರು, ವಿಶ್ವ ವಿಖ್ಯಾತ ಆಟಗಾರರು ದೆಹೆಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದು ಸರಕಾರಕ್ಕೆ ಭಾರೀ ಮುಜಗುರ ವ್ಯಕ್ತವಾಗಿತ್ತು. ಈಗ ಎಚ್ಚೆತ್ತುಕೊಳ್ಳುವ ಮೂಲಕ ಮತ್ತೊಂದು ಮುಜುಗುರವನ್ನು ತಪ್ಪಿಸಿಕೊಂಡಂತಾಗಿದೆ.
2019 ರ ಆಗಸ್ಟ್ ನಲ್ಲಿ ಜಮ್ಮು – ಕಾಶ್ಮೀರಕ್ಕೆ ನೀಡಲಾಗಿದ್ದ 4ಜಿ ಇಂಟರ್ ನೆಟ್ ಸೌಲಭ್ಯವನ್ನು ಹಿಂಪಡೆಯಲಾಗಿದೆ. ಇದೀಗ 17 ತಿಂಗಳ ಬಳಿಕ ಮರಳಿ ಸೌಲಭ್ಯವನ್ನು ನೀಡಲಾಗಿದೆ. ಜಮ್ಮು – ಕಾಶ್ಮೀರದಲ್ಲಿ 4 ಜಿ ಇಂಟರ್ ನೆಟ್ ಸೌಲಭ್ಯ ಒದಗಿಸುವ ಕುರಿತು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನ್ ಕಾಬ್ರಾ ಅವರು, ಈ ಸಂಬಂಧ ನಿರ್ಬಂಧವನ್ನು ತೆರವು ಮಾಡಲಾಗಿದೆ. ನಿನ್ನೆ ಮಧ್ಯರಾತ್ರಿಯಿಂದಲೇ 4 ಜಿ ಇಂಟರ್ ನೆಟ್ ಸೌಲಭ್ಯವನ್ನು ಒದಗಿಸಲಾಗಿದೆ. ಇದರ ಸೌಲಭ್ಯವನ್ನು ಮರಳಿ ಪಡೆಯಬಹುದಾಗಿದೆ ಎಂದು ಗೃಹ ಕಾರ್ಯದರ್ಶಿ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಜಮ್ಮು – ಕಾಶ್ಮೀರಕ್ಕೆ ನೀಡಲಾಗಿದ್ದ ಸ್ಥಾನಮಾನವನ್ನು ರದ್ದುಮಾಡಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಕೇಂದ್ರ ಸರ್ಕಾರ ಜಾರಿಮಾಡಿ ಆದೇಶ ಹೊರಡಿಸಿತ್ತು. 2020ರ ಮೇ 11 ರಂದು ಸುಪ್ರೀಂ ಕೋರ್ಟ್, ಇಂಟರ್ ನೆಟ್ ಸೇರಿದಂತೆ, ಅಗತ್ಯ ಮೂಲಸೌಕರ್ಯ ಒದಗಿಸುವಂತೆ, ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ, ಕೇಂದ್ರ ಸರ್ಕಾರ ಇಂಟರ್ ನೆಟ್ ಸೇವೆಯನ್ನು ಪುನ: ನೀಡಲಾಗಿದೆ. ಈ ಕುರಿತು ಜಮ್ಮು – ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಮನೋಹರ್ ಸಿನ್ಹಾ ಪ್ರತಿಕ್ರಿಯಿಸಿ ಜಮ್ಮು – ಕಾಶ್ಮೀರದಲ್ಲಿ ಮರಳಿ 4 ಜಿ ಇಂಟರ್ ನೆಟ್ ಅನ್ನು ಒದಗಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅಭಿನಂದಿಸುವುದಾಗಿ ಅವರು ತಿಳಿಸಿದ್ದಾರೆ. 2020ರ ಜನವರಿ 25 ರಿಂದ 2 ಜಿ ಇಂಟರ್ ನೆಟ್ ಸೇವೆಯನ್ನು ಒದಗಿಸಲಾಗಿತ್ತು. ಇದೀಗ ಜಮ್ಮು – ಕಾಶ್ಮೀರದಲ್ಲಿ 4 ಜಿ ಇಂಟರ್ ನೆಟ್ ಸೇವೆಯನ್ನು ಒದಗಿಸಲಾಗಿದೆ. ಹೀಗಾಗಿ ಅಲ್ಲಿನ ನಾಗರಿಕರಿಗೆ ಬಹುದಿನಗಳ ನಂತರ, ಇಂಟರ್ ಸೇವೆ ಲಭ್ಯವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.