ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮೇ 21ರಂದು ನಡೆಯಲಿರುವ ಫಾಲ್ಟಾ ವಿಧಾನಸಭಾ ಕ್ಷೇತ್ರದ ಮರುಮತದಾನಕ್ಕೂ ಮುನ್ನ, ತೃಣಮೂಲ ಕಾಂಗ್ರೆಸ್ (TMC) ಅಭ್ಯರ್ಥಿ ಜಹಾಂಗೀರ್ ಖಾನ್ ತಮ್ಮ ಸ್ಪರ್ಧೆಯಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಪಕ್ಷಕ್ಕೆ ಲಭ್ಯವಾಗಿದೆ ಎಂದು ಮೇ 19ರಂದು ತಿಳಿಸಲಾಗಿದೆ.
ಮರುಮತದಾನಕ್ಕೆ ಇನ್ನೆರಡು ದಿನ ಬಾಕಿಯಿರುವಾಗಲೇ, ಅಭಿಷೇಕ್ ಬ್ಯಾನರ್ಜಿ ಅವರ ಆಪ್ತರಾಗಿರುವ ಜಹಾಂಗೀರ್ ಖಾನ್ ಭವಿಷ್ಯದಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾಗಿ ವರದಿಗಳು ತಿಳಿಸಿವೆ. ಫಾಲ್ಟಾ
ಈ ಕ್ಷೇತ್ರದಲ್ಲಿ ಖಾನ್ ಅವರು ಬಿಜೆಪಿಯ ದೇವಾಂಘ್ಷು ಪಾಂಡಾ ಹಾಗೂ ಕಾಂಗ್ರೆಸ್ನ ಅಬ್ದುರ್ ರಜ್ಜಾಕ್ ಮೊಲ್ಲಾ ವಿರುದ್ಧ ಸ್ಪರ್ಧಿಸಲು ಸಿದ್ಧರಾಗಿದ್ದರು. ಸಿಪಿಐ(ಎಂ) ಪಕ್ಷದ ಶಂಭುನಾಥ್ ಕುರ್ಮಿ ಕೂಡ ಕಣದಲ್ಲಿದ್ದಾರೆ.
ಇದನ್ನೂ ಓದಿ: ಡೀಸೆಲ್ ಏರಿಕೆ ಪರಿಣಾಮ: ತೆಂಗಿನಕಾಯಿ ದುಬಾರಿ
ಟಿಎಂಸಿ ವಕ್ತಾರ ಅರೂಪ್ ಚಕ್ರವರ್ತಿ, ಖಾನ್ ಅವರ ನಿರ್ಧಾರ ಕುರಿತು ಮಾಹಿತಿ ದೊರೆತಿದ್ದರೂ, ಅದರ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿದರು.
“ಜಹಾಂಗೀರ್ ಖಾನ್ ಫಲ್ತಾ ಮರುಮತದಾನದಲ್ಲಿ ಸ್ಪರ್ಧಿಸದೇ ಇರುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ನಮಗೆ ಬಂದಿದೆ,” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
“ಆದರೆ, ಈ ನಿರ್ಧಾರದ ಹಿಂದಿರುವ ಕಾರಣ ಇನ್ನೂ ನಮಗೆ ತಿಳಿದಿಲ್ಲ,” ಎಂದು ಅವರು ಹೇಳಿದರು.
ಇದಲ್ಲದೆ, ಖಾನ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿರುವುದಾಗಿ ಹೇಳಲಾಗುತ್ತಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ, ಆ ವಿಡಿಯೋ ನಿಜಾಸತ್ಯತೆಯನ್ನು ಪಿಟಿಐ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ.
ಇದನ್ನೂ ನೋಡಿ: ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಅಡ್ಡಿ – ನಾಯಕರು ಏನಂತಾರೆ? Janashakthi Media
