ಐತಿಹಾಸಿಕ ಸ್ಥಳಗಳ ಹೆಸರು ಬದಲಾವಣೆ: ಆಯೋಗ ರಚಿಸಲು ಸುಪ್ರೀಂಗೆ ಮನವಿ

ನವದೆಹಲಿ: ದೇಶದಲ್ಲಿ ಸದ್ಯ ಸ್ಥಳನಾಮ ಹಾಗೂ ಊರುಗಳ ಹೆಸರುಗಳ ಬದಲಾವಣೆ ಮಾಡುವ ಕಾರ್ಯಗಳು ಆಗಾಗಯೇ ನಡೆಯುತ್ತಿದ್ದು, ನೈಜ ಐತಿಹಾಸಿಕ ಹೆಸರುಗಳನ್ನು ಸಹ ಬದಲಾವಣೆ ಮಾಡಲಾಗುತ್ತಿದೆ. ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಪ್ರಾಚೀನ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳ ಮೂಲ ಹೆಸರುಗಳನ್ನು ಪತ್ತೆ ಹಚ್ಚಲು ‘ಮರುನಾಮಕರಣ ಆಯೋಗ’ವನ್ನು ರಚಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ.

ನೂರಾರು ನಗರಗಳ ಮತ್ತು ಸ್ಥಳಗಳ ಹೆಸರುಗಳನ್ನು ಉದಾಹರಿಸಿರುವ ಅರ್ಜಿದಾರರು, ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ನಾಗರಿಕರ ‘ತಿಳಿಯುವ ಹಕ್ಕ’ನ್ನು ರಕ್ಷಿಸುವ ಸಲುವಾಗಿ ಐತಿಹಾಸಿಕ ಸ್ಥಳಗಳ ಮೂಲ ಹೆಸರುಗಳನ್ನು ಸಂಶೋಧಿಸಲು ಮತ್ತು ಪ್ರಕಟಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ  ನಿರ್ದೇಶಿಸಬೇಕೆಂದು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.

‘ಬಾಬರ್‌ ರಸ್ತೆ, ಹುಮಾಯೂನ್ ರಸ್ತೆ, ಅಕ್ಬರ್‌ ರಸ್ತೆ, ಜಹಾಂಗೀರ್‌ ರಸ್ತೆ, ತುಘಲಕ್‌ ರಸ್ತೆ, ಸಫ್ದರ್‌ ಜಂಗ್‌ ರಸ್ತೆ ಮೊದಲಾದವುಗಳ ಮರುನಾಮಕರಣಕ್ಕೆ ಸರ್ಕಾರ ಮುಂದಾಗಿ ಎಂಬ ವಿಚಾರವನ್ನು ಪ್ರಸ್ತಾಪಿಸಿರುವ ಅರ್ಜಿದಾರರು, ಸಾರ್ವಭೌಮತ್ವವನ್ನು ಕಾಪಾಡಲು ಮತ್ತು ಸಂವಿಧಾನದ 21, 25 ಮತ್ತು 29ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿರುವ ಘನತೆಯ ಹಕ್ಕು, ಧಾರ್ಮಿಕ ಹಕ್ಕು ಮತ್ತು ಸಂಸ್ಕೃತಿಯ ಹಕ್ಕನ್ನು ಪಡೆಯಲು ಹೆಸರು ಬದಲಾವಣೆ ಅವಶ್ಯಕವಾಗಿದೆ ಎಂದಿದ್ದಾರೆ.

ಮೊಘಲ್ ಗಾರ್ಡನ್ ಅನ್ನು ‘ಅಮೃತ್ ಉದ್ಯಾನ್’ ಎಂದು ಮರುನಾಮಕರಣ ಮಾಡಿದ ಕೆಲವೇ ದಿನಗಳಲ್ಲಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವವರು ಈ ಅರ್ಜಿ ಸಲ್ಲಿಸಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *