2 ಸಾವಿರ ನೋಟು ಚಲಾವಣೆ ಸ್ಥಗಿತ : ಹವಾಲಾ ಹಣದ ಮೇಲೆ ED, IT ನಿಗಾ – ಪೆಟ್ರೋಲ್ ಬಂಕ್ ಮೇಲೆ ಕಣ್ಣು

ನವದೆಹಲಿ: 2,000 ರೂ. ಮುಖಬೆಲೆಯ ನೋಟುಗಳನ್ನು  ಇದೀಗ ಭಾರತೀಯ ರಿಸರ್ವ್ ಬ್ಯಾಂಕ್  ಹಿಂಪಡೆದಿದ್ದು, ಮಂಗಳವಾರದಿಂದ ಸಾರ್ವಜನಿಕರಿಗೆ ಬ್ಯಾಂಕುಗಳಿಂದ ನೋಟ್ ವಿನಿಮಯ ಮಾಡಿಕೊಳ್ಳು ಅನುಮತಿಸಿದೆ. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ಹವಾಲಾ ಹಣದ  ಮೇಲೆ ಕಣ್ಣಿಟ್ಟಿದೆ.

ಸದ್ಯ ಆರ್‌ಬಿಐ 3 ತಿಂಗಳು ನೋಟು ವಿನಿಮಯಕ್ಕೆ ಅವಕಾಶ ಕೊಟ್ಟಿದೆ. ಈ ನಡುವೆ ಹವಾಲಾ ದಂಧೆಕೋರರಿಂದ ನೋಟು ವಿನಿಮಯದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹೀಗಾಗಿ ಇಡಿ ಹಾಗೂ ಐಟಿ ಇಲಾಖೆಗಳು ಹವಾಲಾ ದಂಧೆಕೋರರ ಮೇಲೆ ನಿಗಾ ಇರಿಸಿದ್ದು, ಈ ಕುರಿತು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹವಾಲಾ ದಂಧೆಕೋರರು ಅಪಾರ ಪ್ರಮಾಣದಲ್ಲಿ ಹಣ ಸಂಗ್ರಹಿಸಿದ್ದು, ಹೀಗಾಗಿ ನೋಟು ಹಿಂಪಡೆಯಲು ಮುಂದಾಗಿರುವ ಬಗ್ಗೆ ಮಾಹಿತಿ ದೊರಕಿದೆ. ಕಾಳಸಂತೆಯಲ್ಲಿ ಹವಾಲಾ ದಂಧೆಕೋರರ ಮೇಲೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ಹೀಗಾಗಿ ನಗರ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಪ್ರಮುಖವಾಗಿ ಪೆಟ್ರೋಲ್ ಬಂಕ್‌ಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ.

ಇದನ್ನೂ ಓದಿಆರ್​​ಬಿಐನಿಂದ ಮಹತ್ವದ ನಿರ್ಧಾರ; ಇನ್ಮುಂದೆ 2 ಸಾವಿರ ರೂ. ನೋಟ್​​ ಚಲಾವಣೆ ಇಲ್ಲ

ನೋಟು ವಿನಿಮಯಕ್ಕೆ ಸೆಪ್ಟೆಂಬರ್ 30ರ ವರೆಗೆ ಆರ್‌ಬಿಐ ಅವಕಾಶ ನೀಡಿದೆ. ಆದರೆ ನೋಟು ಬದಲಾವಣೆ ವೇಳೆ ಸಾರ್ವಜನಿಕರು ಯಾವುದೇ ದಾಖಲಾತಿ ನೀಡುವ ಅಗತ್ಯವಿಲ್ಲ. ಹೀಗಾಗಿ ಕಾಳಸಂತೆಯ ಹವಾಲಾ ದಂಧೆಕೋರರಿಗೆ ನೋಟುಗಳನ್ನು ಸುಲಭವಾಗಿ ಬದಲಾಯಿಸಿಕೊಳ್ಳಲು ಸುವರ್ಣ ಅವಕಾಶವಾಗಿದೆ. ಆದರೆ ಒಬ್ಬರಿಗೆ ದಿನಕ್ಕೆ 20 ಸಾವಿರ ರೂ. ಮಾತ್ರವೇ ಬದಲಾಯಿಸಿಕೊಳ್ಳಲು ಅವಕಾಶವಿದ್ದು, ಹೀಗಾಗಿ ಹವಾಲಾ ದಂಧೆಕೋರರು ಸಾರ್ವಜನಿಕರ ಮೂಲಕ ನೋಟು ಬದಲಾಯಿಸಿಕೊಳ್ಳಲು ಮುಂದಾಗಿದ್ದಾರೆ.

ಈ ಹಿಂದೆ ಹವಾಲಾ ಹಣದೊಂದಿಗೆ ಸಿಕ್ಕಿರವವರ ಮೇಲೆ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದು, ಬ್ಯಾಂಕ್‌ಗಳ ಬಳಿ ಮಫ್ತಿಯಲ್ಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *