ಶ್ರೀಹರಿಕೋಟಾ: ಬ್ರಿಟನ್ ಮೂಲದ ಒನ್‌ವೆಬ್ ಗ್ರೂಪ್‌ಗೆ ಸೇರಿದ 36 ಉಪಗ್ರಹಗಳನ್ನು ಹೊತ್ತ ಇಸ್ರೊದ ಅತ್ಯಂತ ಭಾರವಾದ ಲಾಂಚ್ ವೆಹಿಕಲ್ ಮಾರ್ಕ್-3 (ಎಲ್‌ವಿಎಂ3) ಉಡಾವಣಾ ನೌಕೆ ಭಾನುವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಹಾರಿತು.
ಇಸ್ರೊದ ವಾಣಿಜ್ಯ ಘಟಕ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ಬ್ರಿಟನ್‌ನ ನೆಟ್‌ವರ್ಕ್ ಆಕ್ಸೆಸ್ ಅಸೋಸಿಯೇಟ್ಸ್ ಲಿಮಿಟೆಡ್ (ಒನ್‌ವೆಬ್ ಗ್ರೂಪ್ ಕಂಪನಿ) ಸಂಸ್ಥೆಯೊಂದಿಗಿನ ಒಪ್ಪಂದದಂತೆ ನಡೆಸಿದ ಎರಡನೇ ಉಡಾವಣಾ ಕಾರ್ಯಾಚರಣೆ ಇದಾಗಿದೆ.
ಇದನ್ನೂ ಓದಿ : ಇಸ್ರೋದ ಮತ್ತೊಂದು ಸಾಧನೆ; ಕಕ್ಷೆಗೆ ಯಶಸ್ವಿಯಾಗಿ ಸೇರಿದ 3 ಉಪಗ್ರಹಗಳು
ಇದೇ ಯೋಜನೆ ಅಡಿಯಲ್ಲಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ 36 ಉಪಗ್ರಹಗಳನ್ನು ಉಡ್ಡಯನ ಮಾಡಲಾಗಿತ್ತು. ಈ ಮೂಲಕ ಭೂಮಿಗೆ ಸಮೀಪದ ಕಕ್ಷೆಗೆ (ಎಲ್‌ಇಒ) ಒಟ್ಟು 72 ಸಂವಹನ ಉಪಗ್ರಹಗಳನ್ನು ಸೇರಿಸಲಾಗಿದೆ.
ಇಸ್ರೊ : (Indian National Committee for Space Research) :
ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಇಸ್ರೋ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಕೇಂದ್ರಗಳನ್ನು ಹೊಂದಿದೆ. ಬೆಂಗಳೂರು, ಕೇರಳದ ತಿರುವನಂತಪುರಂ, ಗುಜರಾತಿನ ಅಹ್ಮದಾಬಾದ್, ತಮಿಳುನಾಡಿನ ಮಹೇಂದ್ರಗಿರಿ, ಕರ್ನಾಟಕದ ಹಾಸನ ಹಾಗೂ ಆಂಧ್ರ್ ಪ್ರದೇಶದ ಶ್ರೀಹರಿಕೋಟದಲ್ಲಿ ಕಚೇರಿಗಳಿವೆ.
ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ 1962ರಲ್ಲಿ ಬಾಹ್ಯಾಕಾಶ ಸಂಶೋಧನಾ ರಾಷ್ಟ್ರೀಯ ಸಮಿತಿ(Indian National Committee for Space Research) ಸ್ಥಾಪಿಸಿದರು. ಭಾರತೀಯ ಸರ್ಕಾರದ ಇಂಡಿಯನ್ ಸ್ಪೇಸ್ ಪ್ರೋಗ್ರಾಂ ರೂಪಿಸಲು ಸ್ಥಾಪಿಸಿದ ಸಂಸ್ಥೆಯ ಮೊದಲ ಅಧ್ಯಕ್ಷರಾಗಿ ಡಾ ವಿಕ್ರಮ್ ಸಾರಾಭಾಯ್ ಸೇವೆ ಸಲ್ಲಿಸಿದ್ದರು. 1969ರಲ್ಲಿ ಅದೇ ಸಂಸ್ಥೆ ಇಸ್ರೋ ಆಗಿ ಬೆಳೆಯಿತು. ಅದೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation)ಯನ್ನು ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಎಂದು ಕರೆಯಲಾಗುತ್ತಿದೆ.
ಕೇರಳದ ತಿರುವನಂತಪುರಂನಲ್ಲಿ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಪ್ರಮುಖ ಕೇಂದ್ರವಾಗಿದೆ. ರಾಕೆಟ್, ಉಡಾವಣಾ ವಾಹನಗಳು ಮತ್ತು ಉಪಗ್ರಹಗಳು ನಿರ್ಮಾಣ ಮತ್ತು ಅದಕ್ಕೆ ಸಂಬಂಧಿಸಿದ ತಾಂತ್ರಿಕ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಭಾರತೀಯ ಬಾಹ್ಯಾಕಾಶ ಅಭಿಯಾನ ಪಿತಾಮಹ ಎನಿಸಿರುವ ಡಾ ವಿಕ್ರಮ್ ಸಾರಾಭಾಯ್ ಅವರನ್ನು ಗೌರವಿಸಲು 1971ರ ಡಿಸೆಂಬರ್ 30ರಂದು ಈ ಕೇಂದ್ರಕ್ಕೆ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್ ಎಂದು ಮರುನಾಮಕರಣ ಮಾಡಲಾಯಿತು