ಗಾಜಾ ಸಂಘರ್ಷ ಅಂತ್ಯಕ್ಕೆ ಇಸ್ರೇಲ್-ಹಮಸ್ ಒಪ್ಪಿಗೆ

ಟೆಲ್ ಅವಿವ್‌: ಅಫ್ಘಾನಿಸ್ಥಾನ ಮತ್ತು ಇಸ್ರೇಲ್‌ ನಡುವಿನ ಗಾಜಾ ಪಟ್ಟಿಯಲ್ಲಿ ಕಳೆದ 11 ದಿನಗಳಿಂದ ನಡೆಯುತ್ತಿದ್ದ ಸಶಸ್ತ್ರ ಸಂಘರ್ಷಕ್ಕೆ ಅಂತ್ಯ ಹಾಡಲು ಇಸ್ರೇಲ್ ಮತ್ತು ಹಮಸ್ ಒಪ್ಪಿಕೊಂಡಿವೆ.

ಕದನ ವಿರಾಮಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಭದ್ರತಾ ಕ್ಯಾಬಿನೆಟ್ ಅನುಮೋದನೆ ನೀಡಿದೆ. ‘ಇಸ್ರೇಲ್‌ನ ಭದ್ರತಾ ಸಚಿವಾಲಯವು ಬೇಷರತ್ತಾದ ಕದನ ವಿರಾಮವನ್ನು ಒಪ್ಪಿಕೊಂಡಿದೆ. ಇದಕ್ಕಾಗಿ ಈಜಿಪ್ಟ್ ದೇಶವು ಮಾಡಿರುವ ಎಲ್ಲ ಶಿಫಾರಸುಗಳನ್ನು ಸರ್ವಾನುಮತದಿಂದ ಇಸ್ರೇಲ್‌ ಸ್ವೀಕರಿಸಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ: ವಿಶ್ವಸಂಸ್ಥೆಯಿಂದ ಗಾಜಾದಲ್ಲಿ ಕದನ ವಿರಾಮ ಘೋಷಣೆಗೆ ಅಮೆರಿಕ ವಿರೋಧ

ಹಮಸ್ ಸಂಘಟನೆಯು ಕದನ ವಿರಾಮದ ಬಗ್ಗೆ ತಿಳಿಯಪಡಿಸಿದ್ದು, ಗುರುವಾರದ ಮಧ್ಯರಾತ್ರಿ 2 ಗಂಟೆಯ ಹೊತ್ತಿಗೆ ಜಾರಿಗೆ ಬರಲಿದೆ ಎಂದು ತಿಳಿಸಿವೆ.

ಗಾಜಾ ಪಟ್ಟಿಯಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಮಧ್ಯಪ್ರಾಚ್ಯ ರಾಯಭಾರಿ ಟೋರ್‌ ವೆನ್ನೆಸ್ಲ್ಯಾಂಡ್ ಅವರು ಹಮಸ್‌ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರೊಂದಿಗೆ ಮಾತುಕತೆ ನಡೆಸಿದರು ಎಂಬ ಮಾಹಿತಿ ಮೂಲವು ದೃಢಪಡಿಸಿದೆ.

ಇಸ್ರೇಲ್ ಮತ್ತು ಗಾಜಾ ಪಟ್ಟಿಯಲ್ಲಿನ ಹಮಸ್‌ ಸಂಘಟನೆಯ ಉಗ್ರರ ನಡುವಿನ ಸಂಘರ್ಷವನ್ನು ಅಂತ್ಯ ಹಾಡಲು ವಿಶ್ವಸಂಸ್ಥೆ ಕದನ ವಿರಾಮ ಘೋಷಿಸಲು ಮುಂದಾಗಿತ್ತು. ವಿಶ್ವಸಂಸ್ಥೆಯ ಈ ಪ್ರಸ್ತಾವಕ್ಕೆ ಅಮೇರಿಕಾ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಪ್ರಾನ್ಸ್‌, ಜರ್ಮನಿ ಮತ್ತು ಈಜಿಪ್ಟ್‌ ದೇಶಗಳು ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಕೊನೆಗೊಳಿಸಬೇಕೆಂದು ಸತತವಾಗಿ ಪ್ರಯತ್ನಸಿದವು.

ಇದನ್ನು ಓದಿ: “ನಾವು ಪ್ಯಾಲೆಸ್ಟೈನ್ ಜೊತೆಗಿದ್ದೇವೆ. ಅವರ ತಾಯ್ನಾಡನ್ನು ಪಡೆಯುವ, ಮನೆಗೆ ಮರಳುವ ಮತ್ತು ಅತಿಕ್ರಮಣಕ್ಕೆ ಪ್ರತಿರೋಧವೊಡ್ಡುವ ಹಕ್ಕನ್ನು ಬೆಂಬಲಿಸುತ್ತೇವೆ.”

ಜೆರುಸಲೇಂನ ಅಲ್-ಅಕ್ಸಾ ಮಸೀದಿಯು ವಿವಾದದ ಕೇಂದ್ರ ಬಿಂದುವಾಗಿದ್ದು, ಮುಸ್ಲಿಂ ಹಾಗೂ ಯಹೂದಿಗಳ ಪವಿತ್ರವಾದ ಸ್ಥಳವಾಗಿದೆ. ಇಲ್ಲಿ ಉಂಟಾದ ಸಂಘರ್ಷವನ್ನು ತಡೆಯಲು ಪೊಲೀಸಲು ಅಶ್ರುವಾಯು ಹಾಗೂ ಗ್ರೆನೇಡ್ ಪ್ರಯೋಗಿಸಿದ್ದರು. ಇದು ಈಗ ಗಾಜಾ ಪಟ್ಟಿಯಲ್ಲಿ ಭಾರಿ ಸಂಘರ್ಷಕ್ಕೆ ತಿರುಗಿತ್ತು.

ಮೇ 10ರಿಂದ ಸಂಘರ್ಷ ಪ್ರಾರಂಭವಾದಾಗಿನಿಂದ, ಇಸ್ರೇಲ್‌ನಿಂದ ನೂರಾರು ವೈಮಾನಿಕ ದಾಳಿಗಳನ್ನು ನಡೆಸಲಾಗಿತ್ತು. ಹಮಾಸ್‌ನ ಮೂಲಸೌಕರ್ಯ ಕೇಂದ್ರಗಳು, 9 ಕಿ.ಮೀ ಉದ್ದ ಉಗ್ರ ಸುರಂಗಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಗಾಜಾದ ವಸತಿ ಪ್ರದೇಶಗಳಲ್ಲಿ ಅಡಗಿದ್ದ ಹಮಾಸ್ ಮತ್ತು ಇತರ ಉಗ್ರಗಾಮಿ ಗುಂಪುಗಳು ಇಸ್ರೇಲಿ ನಗರಗಳ ಮೇಲೆ 4,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿದ್ದವು.

ಗಾಜಾದ ಆರೋಗ್ಯ ಅಧಿಕಾರಿಗಳ ಪ್ರಕಾರ ಕನಿಷ್ಠ 230 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದು, ಇಸ್ರೇಲ್ ನಲ್ಲಿ 12 ಜನರು ಸಾವನ್ನಪ್ಪಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *