ಇಸ್ರೇಲ್‌ನಿಂದ ಆಸ್ಪತ್ರೆಗೆ ಬಾಂಬ್ | 500 ಕ್ಕೂ ಹೆಚ್ಚು ಜನರ ಕಗ್ಗೊಲೆ; ವಿಶ್ವದಾದ್ಯಂತ ಪ್ರತಿಭಟನೆ

ಗಾಝಾ: ಇಸ್ರೇಲಿ ಪಡೆಗಳು ಸೆಂಟ್ರಲ್ ಗಾಜಾದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆ (ಅಲ್ ಅಹ್ಲಿ ಅರಬ್ ಆಸ್ಪತ್ರೆ) ಮೇಲೆ ಅಕ್ಟೋಬರ್ 17 ಬಾಂಬ್ ದಾಳಿ ನಡೆಸಿದ್ದು, ಪರಿಣಾಮ 500 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್  ನಾಗರಿಕರು ಹತ್ಯೆಯಾಗಿದ್ದಾರೆ. ದಾಳಿಯಲ್ಲಿ 600ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಂತ್ರಸ್ತರಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ವೈದ್ಯಕೀಯ ವಸ್ತುಗಳನ್ನು ಸರಬರಾಜು ಮಾಡುವುದನ್ನು ಇಸ್ರೇಲ್ ನಿರಾಕರಿಸಿದ್ದು, ಗಾಯಾಳುಗಳಲ್ಲಿ ಹೆಚ್ಚಿನವರು ಚಿಕಿತ್ಸೆಯಿಲ್ಲದೆ ಮೃತಪಡುವ ಸಂಭವವಿದೆ ಎಂದು ವರದಿಗಳು ಹೇಳಿವೆ.

ಬಾಂಬ್ ದಾಳಿಯ ನಂತರ ಕೊಲ್ಲಲ್ಪಟ್ಟ ಪ್ಯಾಲೆಸ್ತೀನಿಯನ್ನರ ಶವಗಳ ನಡುವೆ ಗಾಜಾ ಆರೋಗ್ಯ ಸಚಿವಾಲಯವು ಪತ್ರಿಕಾಗೋಷ್ಠಿ ನಡೆಸಿತು. “ಆಸ್ಪತ್ರೆಯು ಸಂತ್ರಸ್ತ ನಾಗರಿಕರಿಗೆ ಯಾವಾಗಲೂ ಸುರಕ್ಷಿತ ಸ್ಥಳವೆಂದು ಗಾಝಾ ನಿವಾಸಿಗಳು ಪರಿಗಣಿಸಿದ್ದರು ಎಂದು ಪ್ಯಾಲೆಸ್ತೀನಿಯನ್ ಆರೋಗ್ಯ ಸಚಿವಾಲಯ ಹೇಳಿದೆ” ಎಂದು ಕುದ್ಸ್‌ ನ್ಯೂಸ್ ನೆಟ್‌ವರ್ಕ್ ವರದಿ ಮಾಡಿದೆ. ಯುದ್ಧ ಕಾಲದಲ್ಲಿ ಆಸ್ಪತ್ರೆಗಳು ಸುರಕ್ಷಿತವಾಗಿರುವುದರಿಂದ ಹೆಚ್ಚಿನ ನಿರಾಶ್ರಿತರು ಕೂಡಾ ಅಲ್ಲಿ ತಂಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ ಎಂದ ಸುಪ್ರೀಂ ಕೋರ್ಟ್‌

ಆಸ್ಪತ್ರೆಯ ಮೇಲೆ ಇಸ್ರೇಲ್ ಸುರಿಸಿದ ಬಾಂಬ್ ದಾಳಿಯ ವಿರುದ್ಧ ಪ್ರಪಂಚದಾದ್ಯಂತ ಆಕ್ರೋಶ ಹುಟ್ಟುಹಾಕಿದೆ. ಇಸ್ರೇಲ್‌ನ ಹತ್ಯಾಕಾಂಡಕ್ಕೆ ಪ್ರತಿಕ್ರಿಯೆಯಾಗಿ ಜನರು ಜಗತ್ತಿನಾದ್ಯಂತ ತುರ್ತು ಪ್ರತಿಭಟನೆಗಳನ್ನು ಪ್ರಾರಂಭಿಸಿದ್ದಾರೆ. ಐತಿಹಾಸಿಕ ಪ್ಯಾಲೆಸ್ತೀನ್‌ನ ತಮ್ರಾ ನಗರದಲ್ಲಿ ಯುವಕರು ರಸ್ತೆಯನ್ನು ತಡೆ ಮಾಡಿ ಪ್ರತಿಭಟಿಸಿದ್ದಾರೆ. ಪಶ್ಚಿಮ ದಂಡೆಯಲ್ಲಿರುವ ನಬ್ಲುಸ್ ನಗರದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ನಿರಾಕ್ಷೇಪಣಾ ಪತ್ರ ಕೋರಿ ಬರುವ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಿ – ಸಚಿವ ಈಶ್ವರ ಖಂಡ್ರೆ ಸೂಚನೆ

ರಮಲ್ಲಾದಲ್ಲಿ ಪ್ರತಿಭಟನಾಕಾರರು ಬೀದಿಗಿಳಿಯುತ್ತಿದ್ದಂತೆ, ಪ್ಯಾಲೇಸ್ತೀನಿಯನ್‌ ಪ್ರಾಧಿಕಾರದ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದಾರೆ. ಲೆಬನಾನ್‌ನಲ್ಲಿ ಪ್ರತಿಭಟನಾಕಾರರು ಬೈರುತ್‌ನಲ್ಲಿರುವ ವಿಶ್ವಸಂಸ್ಥೆಯ ಕಟ್ಟಡಕ್ಕೆ ಮುತ್ತಿಗೆ ಹಾಕಿದ್ದಾರೆ. ಜೋರ್ಡಾನ್‌ನ ಅಮ್ಮನ್‌ನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿಯ ಮುಂದೆ ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷನೆಗೆ ಇಳಿದಿದ್ದಾರೆ ಎಂದು ವರದಿಯಾಗದೆ.

ಗಾಜಾದ ಹಮಾಸ್‌ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ನಾಗರಿಕರನ್ನು ನಿರಂತರವಾಗಿ ಗುರಿಯಾಗಿಸಿಕೊಂಡಿದ್ದು, ಬ್ಯಾಪ್ಟಿಸ್ಟ್ ಆಸ್ಪತ್ರೆಯು ಅದರ ಇತ್ತೀಚಿನ ಗುರಿಯಾಗಿದೆ. 24 ಗಂಟೆಗಳಲ್ಲಿ ದಕ್ಷಿಣಕ್ಕೆ ಸ್ಥಳಾಂತರಗೊಳ್ಳುವಂತೆ 11 ಲಕ್ಷ ಗಾಜಾದ ನಾಗರಿಕರಿಗೆ ಇಸ್ರೇಲ್ ಆದೇಶಿಸಿದೆ. ಈ ಆದೇಶವನ್ನು ಅನುಸರಿಸಿ ಸ್ಥಳಾಂತವಾಗಲು ಪ್ರಯತ್ನಿಸುತ್ತಿದ್ದ ನಾಗರಿಕರನ್ನು ಇಸ್ರೇಲ್ ಕಗ್ಗೊಲೆ ಮಾಡುತ್ತಿದೆ.

ನಿರಾಶ್ರಿತರ ಶಿಬಿರದ ಮಧ್ಯದಲ್ಲಿ ವಿಶ್ವಸಂಸ್ಥೆ ನಡೆಸುತ್ತಿದ್ದ ಶಾಲೆಯ ಮೇಲೆ ಇಸ್ರೇಲ್‌ ಬಾಂಬ್ ದಾಳಿ ಮಾಡಿ ಆರು ಮಂದಿಯನ್ನು ಹತ್ಯೆ ಮಾಡಿದೆ. ಈ ದಾಳಿಯಲ್ಲಿ 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಾನವೀಯ ನೆರವು ಗಾಜಾಕ್ಕೆ ಪ್ರವೇಶಿಸುವುದನ್ನು ತಡೆಯುವ ಸಲುವಾಗಿ ಮಂಗಳವಾರ ಇಸ್ರೇಲಿ ಪಡೆಗಳು ರಫಾ ಕ್ರಾಸಿಂಗ್ ಮೇಲೆ ಬಾಂಬ್ ದಾಳಿ ಮಾಡಿದೆ ಎಂದು ವರದಿಯಾಗಿದೆ.

ವಿಡಿಯೊ ನೋಡಿ: ವೃತ್ತಿ ರಂಗಭೂಮಿ ಉಳಿಯಬೇಕು, ಕಲಾವಿದರ ಗೋಳನ್ನು ಸರ್ಕಾರ ಕೇಳಬೇಕು Janashakthi Media

Donate Janashakthi Media

Leave a Reply

Your email address will not be published. Required fields are marked *