ನಾನು ಕಾಲೇಜು ದಿನಗಳಲ್ಲಿ ಓದುತ್ತಿದಂತಹ ಸಂದರ್ಭದಲ್ಲಿ ಭಾರತ ವಿದ್ಯಾರ್ಥಿ ಒಕ್ಕೂಟದ (ಎಸ್ಎಫ್ಐ) ಸಂಘಟನೆಯ ಜಿಲ್ಲಾ ಮತ್ತು ರಾಜ್ಯ ಸಮಿತಿಯಲ್ಲಿ ಸಂಘಟಕರಾಗಿ ಕಾರ್ಯನಿರ್ವಹಿಸುತ್ತಿದ್ದಂತಹ ಮುನಿರಾಜು ಕಾಮ್ರೇಡ್ ರವರು ನನ್ನ ಜೊತೆಯಲ್ಲಿ ಫೋನಿನಲ್ಲಿ ಮಾತನಾಡುತ್ತಿರುವಾಗ ಹೀಗೆ ಹೇಳಿದರು. ‘ ನಾನು ಪದವಿ ಕಾಲೇಜಿನಲ್ಲಿ ವಾರಕ್ಕೆ 10 ಗಂಟೆಗಳಂತೆ ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಧರ್ಮಸ್ಥಳದ ಸೌಜನ್ಯ ಪ್ರಕರಣದ ಪರವಾಗಿ ಧ್ವನಿ ಎತ್ತಿ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರ ಗ್ರೂಪ್ ಗಳಲ್ಲಿ ವಿಚಾರವನ್ನು ಹಂಚಿಕೊಂಡಿದೆ. ಆಗ ಕಾಲೇಜಿನ ಪ್ರಾಂಶುಪಾಲರು ಅದನ್ನು ಗಮನಿಸಿ ನನ್ನನ್ನು ಕರೆದು ಧರ್ಮಸ್ಥಳದ ವಿಚಾರವಾಗಿ ಯಾರೇ ಮಾತನಾಡಿದರೂ ಕೂಡ ನಾನು ಸಹಿಸುವುದಿಲ್ಲ ಎಂದು ಸಿಟ್ಟನ್ನು ಹೊರಹಾಕಿ ವಾರಕ್ಕೆ 10 ಗಂಟೆ ಇದ್ದ ನನ್ನ ಕಾರ್ಯ ಭಾರವನ್ನು ಕೇವಲ ನಾಲ್ಕು ಗಂಟೆಗಳಿಗೆ ಇಳಿಸಿ, ನನ್ನನ್ನು ಮತ್ತೊಂದು ಕಾಲೇಜಿಗೆ ಬದಲಾಯಿಸಿದರು. ನನಗೆ ಇದರಿಂದ ತೊಂದರೆಯಾಯಿತು ನಿಜ ಆದರೆ ತೊಂದರೆಯಾಯಿತು ಎನ್ನುವ ಕಾರಣಕ್ಕೆ ನಾನು ಸಿದ್ದಾಂತ ಹಾಗೂ ವಿಚಾರವನ್ನು ಬಲಿಕೊಡಲು ಸಿದ್ಧನಿಲ್ಲ. ಫ್ರೀಡಂ
-ಡಾ. ಸತ್ಯಮೂರ್ತಿ ಗೂಗಿ
ಅಕ್ಟೋಬರ್ 25ನೇ ತಾರೀಕು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರ್ಮಸ್ಥಳದ ದೌರ್ಜನ್ಯ ವಿರೋಧಿ ವೇದಿಕೆಯಿಂದ ಕೋಮು ಸೌಹಾರ್ದತೆಯ ಭಾಗವಾಗಿ ಪ್ರಗತಿಪರ ಹೋರಾಟಗಾರರು, ಸಾಹಿತಿಗಳು, ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇಟ್ಟಂತವರು, ಹಾಗೂ ಎಡಪಂಥೀಯ ಚಿಂತನೆಯುಳ್ಳವರು ಭಾಗಿಯಾಗಿ ಈ ಕಾರ್ಯಕ್ರಮ ಯಶಸ್ಸಾದರೆ ನನಗೆ ಅದಕ್ಕಿಂತ ಬೇರೆ ಸಂತೋಷವಿಲ್ಲ ಎಂದು ಹೇಳಿ ಒಂದು ಕಡೆ ಅವರಿಗೆ ಕೆಲಸದ ವಿಚಾರವಾಗಿ ಆಗಿರುವ ನೋವು ಹಾಗೂ ಇನ್ನೊಂದು ಕಡೆ ಧರ್ಮಸ್ಥಳದಲ್ಲಿ ನಡೆದ ದೌರ್ಜನ್ಯಗಳ ವಿರೋಧವಾಗಿ ಪ್ರಗತಿಪರ ಹಾಗೂ ಸಮಾನಮಾನಸ್ಕರೆಲ್ಲರೂ ಒಟ್ಟಾಗಿ ಪ್ರತಿಭಟಿಸುತ್ತಿರುವುದರ ಸಂತೋಷವನ್ನು ಒಟ್ಟಿಗೆ ಹಂಚಿಕೊಂಡಿದ್ದು ಅವರ ಮನದಾಳದ ಭಾವನೆಯನ್ನು ತಿಳಿಸುತ್ತಿತ್ತು. ಫ್ರೀಡಂ
ಗಮನಿಸಬೇಕಾದ ವಿಚಾರ:- ಧರ್ಮಸ್ಥಳದ ಅಥವಾ ದೇವರ ವಿರುದ್ಧವಾಗಿ ಯಾರೂ ಹೋರಾಟ ಮಾಡುತ್ತಿಲ್ಲ ಸುಮಾರು 70-80ರ ದಶಕದಿಂದಲೂ ಅಲ್ಲಿನ ದಲಿತರಿಗೆ ಭೂಮಿಯನ್ನು ಕಿತ್ತುಕೊಂಡು ಅವರಿಗೆ ಆಗಿದ್ದ ಅನ್ಯಾಯ ಹಾಗೂ ವೇದವರಿಂದ ಹಿಡಿದು ಸೌಜನ್ಯ ಕೊಲೆ ಪ್ರಕರಣದವರಿಗೂ ಆಗಿರುವ ಅನ್ಯಾಯ ಪ್ರಕರಣಗಳಿಗೆ ಕೇವಲ ನ್ಯಾಯ ದೊರೆತು ಸತ್ಯ ಹೊರಬೇಕಷ್ಟೇ. ಎಂಬ ನೋವಿನ ಸಂಗತಿಗಳನ್ನೇ ಎಳೆ ಎಳೆಯಾಗಿ ಬಿಚ್ಚಿಟ್ಟರು. ಫ್ರೀಡಂ
ಇದನ್ನೂ ಓದಿ: ಬೀದರ್ | 6.60 ಕೋಟಿ ರೂಪಾಯಿ ಮೌಲ್ಯದ ಗಾಂಜಾ ಜಪ್ತಿ : ಪೊಲೀಸರ ಮಿಂಚಿನ ಕಾರ್ಯಾಚರಣೆ
ಈ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರಾದ ನಾವು ಚಿಂತಿಸಬೇಕಾಗಿರುವುದು:- ಯಾವುದೇ ಹೋರಾಟಗಳು ದೌರ್ಜನ್ಯ, ತೊಂದರೆಗೆ ಸಿಲುಕಿದವರ ಪರವಾಗಿ ಇರಬೇಕು ಆದರೆ ಧರ್ಮಸ್ಥಳದ ವಿಚಾರದಲ್ಲಿ ಮೂಲ ಸಮಸ್ಯೆಯನ್ನೇ ಮರೆಮಾಚಿದಂತಿದೆ. ಇರುವ ಸಮಸ್ಯೆಯನ್ನು ಬಿಟ್ಟು ವಿಷಯ ಅತ್ತಿಂದಿತ್ತ ಗಿರಕಿ ಹೊಡೆಯುತ್ತಿದೆ. ಬಿಜೆಪಿ ಸಂಘ ಪರಿವಾರದವರು ಹಿಂದೂ ಧರ್ಮ ಹಾಗೂ ಧರ್ಮಸ್ಥಳದ ಪರವಾಗಿ ಎಂಬಂತೆ ಬೃಹತ್ ಹೋರಾಟ. ಇನ್ನುಳಿದ ಸಮಾನ ಮನಸ್ಕರು ಹಾಗೂ ಪ್ರಗತಿಪರರು ಸೌಜನ್ಯ ಹಾಗೂ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ಧ್ವನಿಯೆತ್ತಲಾರಂಬಿಸಿದ್ದಾರೆ.
ಪ್ರಮುಖ ವಿಚಾರ:-
ಈಗ ಇಲ್ಲಿ ಗಮನಿಸಬೇಕಾದ ಎಡ ಮತ್ತು ಬಲಪಂಥೀಯ ವಿಚಾರಗಳು ಮುನ್ನೆಲೆಗೆ ಬಂದು, ಈ ಪ್ರಕರಣಗಳಲ್ಲಿ ದೇವರು, ಹಿಂದುತ್ವ ಹಾಗೂ ಧರ್ಮವನ್ನು ಎಳೆದು ತಂದು ಮೂಲ ಸಮಸ್ಯೆಗಳನ್ನೇ ಮರೆಮಾಚಿಸುತ್ತಿವೆ.
ಇಲ್ಲಿ ಮುಖ್ಯವಾಗಿ ಅರ್ಥೈಸಿಕೊಳ್ಳಬೇಕಾದ ವಿಚಾರ ಬಿಜೆಪಿ ಹಾಗೂ ಸಂಘ ಪರಿವಾರದವರು ಧರ್ಮ ಹಾಗೂ ಸ್ಥಳದ ಮಹಿಮೆಗೆ ಚ್ಯುತಿ ಬರುತ್ತಿದೆ ಎಂಬುದು ಅವರ ಉಹಾತ್ಮಕ ವಾದ. ಚಿಂತನೆಯಲ್ಲಿ ಶ್ರೇಷ್ಠರು ಹಾಗೂ ಎಡಪಂಥೀಯರು ಧರ್ಮ ದೇವರು ಧರ್ಮಸ್ಥಳ ಇದ್ಯಾವುದರ ವಿರೋಧಿಗಳು ನಾವಲ್ಲ..!
ಕೇವಲ ನಡೆದಿರುವ ಅನ್ಯಾಯ ಪ್ರಕರಣಗಳಿಗೆ ನ್ಯಾಯ ಸಿಗಬೇಕು ಎನ್ನುವುದಷ್ಟೇ ನಮ್ಮ ಹೋರಾಟ,..! ಎಂಬುದು ಪ್ರಗತಿಪರ ಹಾಗೂ ಎಡಪಂಥೀಯರ ಒಕ್ಕೊರಲ ವಾದ.
ಹೀಗಾಗಿ ಜನಸಾಮಾನ್ಯರ ಒತ್ತಾಯವೂ ಕೂಡ ಇದೇ ಆಗಿದೆ ಎಂಬ ವಿಚಾರದಲ್ಲಿ ಯಾವುದೇ ಸಂದೇಹವಿಲ್ಲ. ಪ್ರಕರಣಗಳು ಧರ್ಮಕ್ಕೆ ಹಾಗೂ ದೇವರಿಗೆ ತಳುಕು ಹಾಕಿಕೊಳ್ಳದೆ, ನಿರ್ಭೀತಿಯಿಂದ ಯಾವುದೇ ಒತ್ತಡಕ್ಕೆ ಒಳಗಾಗದೆ ಪಾರದರ್ಶಕ ತನಿಖೆ ನಡೆದು, ನೈಜ ಸತ್ಯಾಂಶ ಹೊರ ಬರಬೇಕಿದೆ. ಈ ಮೂಲಕ ನಾಡಿನ ಹಾಗೂ ದೇಶದ ಜನರ ಮನಸ್ಸಲ್ಲಿ ಈಗಾಗಲೇ ಮನೆ ಮಾಡಿರುವ ಅನುಮಾನದ ಗುಮ್ಮ ಹೊರಬರಬೇಕಿದೆ. ಕಾನೂನು ಕನಿಷ್ಠ ಹಾಗೂ ಜನಸಾಮಾನ್ಯರ ಕೈಗೆಟುಕುವ ರೀತಿಯಲ್ಲಿ ತನಿಖೆ ನಡೆದು ಸಹಜ ನ್ಯಾಯ ದೊರೆತು ಇತಿ ಶ್ರೀ ಹಾಡಬೇಕಿದೆ.
ಇದನ್ನೂ ನೋಡಿ: ಉಳ್ಳಾಲದಲ್ಲಿ ಸರಕಾರಿ ತಾಲೂಕು ಆಸ್ಪತ್ರೆ ಸ್ಥಾಪನೆ ಯಾವಾಗ ? Janashakthi Media
