ಬಯಲುಸೀಮೆಯ ನೀರಾವರಿ ಹೋರಾಟಗಾರ ಡಾ. ಮಧುಸೀತಪ್ಪ ನಿಧನ

ಚಿಕ್ಕಬಳ್ಳಾಪುರ: ಬಯಲುಸೀಮೆಯ ನೀರಾವರಿ ಹೋರಾಟಗಾರ, ಚಿಂತಕ ಹಾಗೂ ವೈದ್ಯರಾಗಿದ್ದ ಡಾ. ಮಧುಸೀತಪ್ಪ ಆಗಸ್ಟ್‌ 27 ರಾತ್ರಿ ಬಾಗೇಪಲ್ಲಿಯ ಶಿವಪುರದ ತಮ್ಮ ಫಾರ್ಮ್ ಹೌಸ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಯಲುಸೀಮೆ

ಲಂಡನ್ ನಲ್ಲಿ ಅತ್ಯುನ್ನತ ವೈದ್ಯರಾಗಿದ್ದ ಮೃತ ಮಧುಸೀತಪ್ಪ ಅವರು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಿಕೊಡುವ ಕನಸು ಕಂಡಿದ್ದರು.

ಇದನ್ನೂ ಓದಿ: ಸಮುದಾಯ ಸುವರ್ಣ ಸಂಭ್ರಮ| ಜನಪರ ಹೋರಾಟಗಾರರಿಗೆ ದೇಶದ್ರೋಹಿ ಹಣೆಪಟ್ಟಿ: ಎಲ್ ಹನುಮಂತಯ್ಯ ಆತಂಕ

ಅಷ್ಟೇ ಅಲ್ಲದೇ ವೈದ್ಯ ಮಧುಸೀತಪ್ಪನವರು ನೀರಾವರಿ ಹೋರಾಟಕ್ಕೆ ಸಂಬಂಧಿಸಿದಂಟೆ ಡಾಕ್ಯುಮೆಂಟರಿ, ಜಾನಪದ ಹಾಡುಗಳನ್ನು ನಿರ್ಮಿಸಿ ತಮ್ಮದೇ ಆದ ಕಾಣಿಕೆ ನೀಡಿದ್ದರು.

2023 ವಿಧಾನ ಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಎಎಪಿ ಫಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದಕ್ಕೂ ಮೊದಲು ಅವರು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಲೋಕಸಭಾ ಚುನಾವಣೆಯ ಸ್ಪರ್ಧಾಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ದೊರೆಯದ ಕಾರಣ ಎಎಪಿ ಸೇರಿದ್ದರು.

ಮೃತರ ಪತ್ನಿ ಹಾಗೂ ಪುತ್ರ ಲಂಡನ್ ನಲ್ಲಿಯೇ ವಾಸವಿದ್ದು, ಅವರು ಬಂದ ನಂತರ ಅಂತ್ಯಕಿಯೆ ನಡೆಯಲಿದೆ ಎಂದು ಆಪ್ತರು ತಿಳಿಸಿದ್ದಾರೆ.

ಇದನ್ನೂ ನೋಡಿ: ಧರ್ಮಸ್ಥಳದ ಎಲ್ಲ ಪ್ರಕರಣಗಳನ್ನು ಎಸ್‌ಐಟಿ ವ್ಯಾಪ್ತಿಗೆ ನೀಡಬೇಕುJanashakthi Media

Donate Janashakthi Media

Leave a Reply

Your email address will not be published. Required fields are marked *