ನವದೆಹಲಿ: ಮೂಲಸೌಕರ್ಯ ನಿರ್ವಹಣೆ, ಸುರಕ್ಷತೆಯ ಕಾರ್ಯಕ್ಷಮಪೆ ಪರೀಶಿಲನೆ ಹಾಗೂ ನಿರ್ದಿಷ್ಟ ಮಾರ್ಗಗಳಲ್ಲಿ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ಕೆಲಸಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಭಾರತೀಯ ರೈಲ್ವೇ 425 ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.
ಫೆಬ್ರವರಿ 23 ರಂದು ಹೊರಡಬೇಕಿದ್ದ 98 ರೈಲುಗಳು ಇದೇ ಕಾರಣಕ್ಕಾಗಿ ಭಾಗಶಃ ರದ್ದುಗೊಂಡಿದೆ.
ರೈಲು ಟಿಕೆಟ್ ಮರುಪಾವತಿ
ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಮೂಲಕ ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡಿದ್ದರೆ ಹಣವನ್ನು ಮರುಪಾವತಿಸಲಾಗುತ್ತದೆ. ಐಆರ್‌ಸಿಟಿಸಿ ಅಂತರ್ಜಾಲ ತಾಣದ ಮೂಲಕ ನೀವು ಟಿಕೆಟಸ್ ಕಾಯ್ದಿರಿಸಿದ್ದರೆ, ತನ್ನಿಂತಾನೆ ರದ್ದುಗೊಂಡು, ಪ್ರಯಾಣಿಕರಿಗೆ ಹಣ ಮರಳುತ್ತದೆ. ಇದರೊಂದಿಗೆ ಪ್ರಯಾಣಿಕರು ಟಿಕೆಟ್ ರದ್ದು ಮಾಡಲು ತಮ್ಮ ಐಆರ್‌ಸಿಟಿಸಿ ಖಾತೆಗೆ ಲಾಗ್ ಇನ್ ಆಗಬೇಕು. ಮೂಲ ಖಾತೆಯಲ್ಲಿ ಮರುಪಾವತಿಯ ಆಯ್ಕೆ ನೀಡಲಾಗಿದೆ.
ರೈಲು ಹೊರಡುವ 12 ಗಂಟೆಗಳಿಂದ 48 ಗಂಟೆಗಳ ಮೊದಲು ದೃಢೀಕರಿಸಿದ ಟಿಕೆಟ್ ರದ್ದುಗೊಳಿಸಿದರೆ, ಭಾರತೀಯ ರೈಲ್ವೆ ಪ್ರಯಾಣಿಕರ ಪ್ರಯಾಣದ ಕನಿಷ್ಠ ಶೇಕಡಾ 25 ರಷ್ಟ ಮರು ಪಾವತಿಯಾಗಲಿದೆ.
ನಿಗದಿತ ನಿರ್ಗಮನಕ್ಕೆ ಕನಿಷ್ಠ 48 ಗಂಟೆಗಳ ಮೊದಲು ಟಿಕೆಟ್ ಅನ್ನು ರದ್ದುಗೊಳಿಸಿದರೆ, ಮರುಪಾವತಿ ನಿಮ್ಮ ಕಾಯ್ದಿರಿಸಿದ ಟಿಕೆಟ್ ವರ್ಗವನ್ನು ಅವಲಂಬಿಸಿರುತ್ತದೆ. ಎರಡನೇ ದರ್ಜೆಯ ಟಿಕೆಟ್ ಅನ್ನು ರದ್ದುಗೊಳಿಸುವುದರಿಂದ ಪ್ರತಿ ಪ್ರಯಾಣಿಕರಿಗೆ 60 ರೂ. ವೆಚ್ಚವಾಗುತ್ತದೆ.
ಎರಡನೇ ದರ್ಜೆ ರೈಲಿನ ಪ್ರಯಾಣ ಮೊತ್ತವು 120 ರೂ. ಎಸಿ ಮೂರು ಹಂತಗಳಿಗೆ ರದ್ದತಿ ಶುಲ್ಕ 180 ರೂ. , ಎಸಿ ಎರಡು ಹಂತದವರಿಗೆ 200 ರೂ ಮತ್ತು ಟಿಕೆಟ್ ಮೊದಲ ಎಸಿ ಎಕ್ಸಿಕ್ಯುಟಿವ್ ವರ್ಗಕ್ಕೆ ಸೇರಿದರೆ ರೂ 240. ಕಡಿತವಾಗುತ್ತದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ