ಬೀದರ್: ಅಪ್ರಾಪ್ತ ಬಾಲಕಿಯ ಅಸ್ವಾಭಾವಿಕ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಬೆಮಳಖೇಡ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರಾಚಯ್ಯ ಮಠಪತಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್.ಅಮಾನತುಗೊಳಿಸಿದ್ದಾರೆ.ಅಮಾನತು
ಇದನ್ನೂ ಓದಿ:ವಿದ್ಯಾರ್ಥಿನಿ ಸಾವು: ಶಾಲೆಗೆ ಬಿಗಿ ಬಂದೋಬಸ್ತ್, ಶಿಕ್ಷಕ ಸೇರಿ ಮೂವರ ಬಂಧನ
ಅಪ್ರಾಪ್ತ ಬಾಲಕಿ ಅಸಹಜ ಸಾವಿನ ಕುರಿತು ಅವರ ಕುಟುಂಬದವರು ಠಾಣೆಗೆ ದೂರು ಕೊಡಲು ಬಂದಿದ್ದರು. ಆದರೆ, ಆ ದೂರನ್ನು ಸ್ವೀಕರಿಸಿ, ಘಟನಾ ಸ್ಥಳಕ್ಕೆ ಹೋಗಿ ಸೂಕ್ತ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಡಿವೈಎಸ್‌ಪಿ ವರದಿ ಕೊಟ್ಟಿದ್ದಾರೆ. ಅದನ್ನು ಆಧರಿಸಿ ರಾಚಯ್ಯ ಮಠಪತಿ ಅವರನ್ನು ಅಮಾನತ್ತುಗೊಳಿಸಲಾಗಿದೆ ಎಂದು ಎಸ್ಪಿ ಚನ್ನಬಸವಣ್ಣ ಎಸ್.ಎಲ್ ತಿಳಿಸಿದ್ದಾರೆ.
ಆ-17ರಂದು ಬಾಲಕಿ ಸಾವನ್ನಪ್ಪಿದ್ದಳು. ಯುವಕನೊಬ್ಬನ ಕಿರುಕುಳಕ್ಕೆ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪಿಸಿದ್ದರು. ಅ-04ರಂದು ಹೂತಿದ್ದ ಬಾಲಕಿಯ ಶವ ತೆಗೆದು ಮರು ಪರೀಕ್ಷೆ ನಡೆಸಲಾಗಿದೆ. ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ವಿಡಿಯೋ ನೋಡಿ:ಅಸಹಜ ಸಾವುಗಳಲ್ಲಿ ಹರಿದ ನೆತ್ತರಿಗೆ ಉತ್ತರ ಕೊಡಿ – ಕೆ.ಎಸ್. ವಿಮಲಾ Janashakthi Media