ಪತ್ರಕರ್ತರನ್ನು ಅವಾಚ್ಯ ಪದಗಳಿಂದ ನಿಂದಿಸಿ, ಧಮ್ಕಿ : ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿಯನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಪತ್ರಕರ್ತರ ಪ್ರತಿಭಟನೆ

ನೆಲಮಂಗಲ: ನೆಲಮಂಗಲ ತಾಲೂಕು ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ಪತ್ರಕರ್ತರನ್ನು ಅವಾಚ್ಯ ಪದಗಳಿಂದ ನಿಂದಿಸಿ, ಧಮ್ಮಿ ಹಾಕಿರುವ ಕಾರಣ, ಜಗದೀಶ್ ಚೌಧರಿಯನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಲೂಕು ಕಚೇರಿ ಮುಂದೆ ಸ್ವಾಭಿಮಾನಿ ಪತ್ರಕರ್ತರು ಪ್ರೆಸ್ ಕ್ಲಬ್ ಕೌನ್ಸಿಲ್ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ  ನಡೆಸಿದರು. ಪತ್ರಕರ್ತರನ್ನು 

ಈ ಪ್ರತಿಭಟನೆಯಲ್ಲಿ ಬಿಗ್‌ಬಾಸ್‌ ಖ್ಯಾತಿಯ ಲಾಯರ್‌ ಜಗದೀಶ್ ಭಾಗಿಯಾಗಿ ಬೆಂಬಲ ಸೂಚಿಸಿ, ಬಿಜೆಪಿ ಅಧ್ಯಕ್ಷ ಜಗದೀಶ್ ಚೌಧರಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು. ತಾಲೂಕಿನ 50 ಕ್ಕೂ ಹೆಚ್ಚು ಸ್ವಾಭಿಮಾನಿ ಪತ್ರಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತಮಟೆ ಬಾರಿಸಿ ಜಗದೀಶ್‌ ಚೌಧರಿ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಪತ್ರಕರ್ತರ ಬಗ್ಗೆ, ಅವಾಚ್ಯ ಪದ ಬಳಕೆ ಮಾಡಿ, ತನ್ನ ಹಿಂಬಾಲಕರಿಂದ ಧಮ್ಮಿ ಹಾಕಿಸಿರುವ ಚೌಧರಿಯನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ : ‌ನ್ಯಾ.ಶೇಖರ್ ಕುಮಾರ್ ಯಾದವ್ ಮುಸ್ಲಿಂ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ: ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಸೂಚನೆ

ಪ್ರತಿಭಟನೆಯಲ್ಲಿ ಮಾತನಾಡಿದ ಲಾಯರ್ ಜಗದೀಶ್ ಅವರು, ಈ ಹಿಂದೆ ಒಬ್ಬ ಭ್ರಷ್ಟ ಐಪಿಎಸ್ ಅಧಿಕಾರಿ ಬಗ್ಗೆ ಮಾತನಾಡಿದಾಗ ರೌಡಿಶೀಟರ್ ಜಗದೀಶ್ ಚೌಧರಿ ನನಗೂ ಧಮ್ಮಿ ಹಾಕಿದ ಈ ರೀತಿ ನನ್ನನ್ನು ಮುಗಿಸಲು ಎಷ್ಟೋ ಜನ ಧಮ್ಮಿ ಹಾಕಿದ್ದಾರೆ. ಈತ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾನೆ. ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಮದ್ಯ ವಿತರಣೆ ಮಾಡಿ ಈತ ಟ್ರೋಲ್ ಆಗಿದ್ದ. ಹೀಗಾಗಿ ಉಚ್ಚಾಟನ
ಮಾಡಲಾಗಿತ್ತು. ಇದೀಗ ಪತ್ರಕರ್ತರಿಗೆ ಧಮ್ಮಿ ಹಾಕಿರುವ ಚೌಧರಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೌಡಿ ಶೀಟರ್ ಜಗದೀಶ್ ಚೌದ್ರಿ ಹೆದರಿಕೆ ಬೆದರಿಕೆಗೆ ಪತ್ರಕರ್ತರು ಹೆದರಬಾರದು. ರೌಡಿ ಶೀಟರ್‌ವನ್ನು ಪೊಲೀಸರು ಮೊದಲು ಮಟ್ಟಿಹಾಕಿ ಪತ್ರಕರ್ತರನ್ನು ರಕ್ಷಣೆ ಮಾಡಬೇಕು. ನಾನು ಕೂಡ ನಿಮ್ಮ ಜತೆ ಇದ್ದೇನ ಪೊಲೀಸರು ಕೂಡಲೇ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇವೆ ಎಂದು ವಕೀಲ್ ಸಾಬ್‌ ಜಗದೀಶ್‌ ಹೇಳಿದರು.

ಇದನ್ನೂ ನೋಡಿ : ಹಾಡು | ‘‌ಕಮಿಷನರ್ ಅನುಪಮ್ ಅಗರ್ವಾಲ್ ಹಠಾವೊ’ ಸಾಹಿತ್ಯ ಮತ್ತು ಹಾಡು : ಶ್ಯಾಮರಾಜ ಪಟ್ರೆಮೆ Janashakthi Media

Donate Janashakthi Media

Leave a Reply

Your email address will not be published. Required fields are marked *