ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿರುವ “ಜೈ ಭಾರತಿ ವಂದೇ ಭಾರತಿ, ಸರ್ ಪೆ ಹಿಮಾಲಯ ಕಾ ಛತ್ರ ಹೈ” ಎಂಬ ಹಾಡನ್ನು ಇಂದಿರಾ ಗಾಂಧಿ ಅವರು ಅವಕಾಶ ನೀಡದ ಕಾರಣಕ್ಕೆ ರೇಡಿಯೊ ಅಥವಾ ಟಿವಿ ಚಾನೆಲ್‌ಗಳಲ್ಲಿ ಕೇಳಲು ಸಾಧ್ಯವಾಗಿಲ್ಲ ಎಂದು ವಾಟ್ಸಪ್‌ನಲ್ಲಿ ಸಂದೇಶವೊಂದನ್ನು ಹರಡಲಾಗುತ್ತಿದೆ. ಬಹಳ ಮುಖ್ಯವಾಗಿ ಇದನ್ನುಬಿಜೆಪಿ ಮತ್ತು ಆರೆಸ್ಸೆಸ್ ಬೆಂಬಲಿರುವ ಹಂಚುತ್ತಿದ್ದಾರೆ.
ಲತಾ ಮಂಗೇಶ್ಕರ್ ಅವರ ಹಾಡಿನ ಜೊತೆಗೆ, “ಈ ಹಾಡು ಇಲ್ಲಿಯವರೆಗೆ ಯಾವುದೇ ರೇಡಿಯೋ ಅಥವಾ ಟಿವಿ ಚಾನೆಲ್‌ಗಳಲ್ಲಿ ಏಕೆ ಕೇಳಿಲ್ಲ ಎಂದು ನಾನು ಆಶ್ಚರ್ಯ ಪಡುತ್ತೇನೆ?? ಕಾರಣ ಏನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಯಾಕೆಂದರೆ ಇಂದಿರಾಗಾಂಧಿ ಅದಕ್ಕೆ ಅವಕಾಶ ನೀಡಲಿಲ್ಲ” ಎಂಬ ವೈರಲ್ ಸಂದೇಶವನ್ನು ಹರಡಲಾಗುತ್ತಿದೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಚರಕ ಪೂಜೆಯ ಅಣಕು ನರಬಲಿ ಆಚರಣೆ ‘ನಿಜ’ ಎಂಬಂತೆ ವೈರಲ್!
ಈ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡುವಂತೆ ಜನಶಕ್ತಿ ಮೀಡಿಯಾದ +916361984022 ನಂಬರ್‌ಗೆ ವಿನಂತಿಗಳು ಬಂದಿವೆ. ಜನಶಕ್ತಿ ಮೀಡಿಯಾದ ಫ್ಯಾಕ್ಟ್‌ಚೆಕ್ ಗ್ರೂಪ್‌ಗೆ ಸೇರಿಲು ಇಲ್ಲಿ ಕ್ಲಿಕ್ ಮಾಡಿ.
ಫ್ಯಾಕ್ಟ್‌ಚೆಕ್
ಈ ಬಗ್ಗೆ ನಾವು ಹುಡುಕಾಡಿದಾಗ ಈ ಹಾಡು 1955ರಲ್ಲಿ ಬಿಡುಗಡೆಯಾದ “ಜಗದ್ಗುರು ಶಂಕರಾಚಾರ್ಯ” ಎಂಬ ಹಿಂದಿ ಚಿತ್ರದ್ದಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.(IMDb ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ) ಈ ಚಿತ್ರವನ್ನು ಬಾಂಬೆ ಮೂಲದ “ಶೈಖ್ ಫತ್ತೆಲಾಲ್” ಅವರು ನಿರ್ದೇಶನ ಮಾಡಿದ್ದರು.
ಯೂಟ್ಯೂಬ್‌ನಲ್ಲಿ ಈ ಸಿನಿಮಾ ಇಲ್ಲವಾದರೂ ಅದರ ಹಾಡುಗಳು ಈಗಲೂ ಲಭ್ಯವಿದೆ. ಅವುಗಳನ್ನು ನೀವು ಇಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಮುಸ್ಲಿಂ ಆಧ್ಯಾತ್ಮಿಕ ನಾಯಕನನ್ನು ಭಯೋತ್ಪಾದಕ ಬೆಂಬಲಿಗ ಎಂದು ಸುಳ್ಳು ಹೇಳಿದ ಬಿಜೆಪಿ ಶಾಸಕ ಯತ್ನಾಳ್
1955 ನವೆಂಬರ್ 14ರಂದು ಈ ಸಿನಿಮಾಗೆ U ಸರ್ಟಿಫಿಕೇಟ್ ಅನ್ನು ಬಾಂಬೆಯ ಸೆನ್ಸಾರ್ ಮಂಡಳಿ ನೀಡಿತ್ತು. ಯು ಸರ್ಟಿಫಿಕೇಟ್ ಸಿನಿಮಾವನ್ನು ಎಲ್ಲಾ ವಯೋಮಾನದವರು ನೋಡಬಹುದಾದ ಸಿನಿಮಾವಾಗಿದೆ. ಅಲ್ಲದೆ, ಅದೇ ವರ್ಷ 1955ರ ನವೆಂಬರ್ 18ರಂದು ಈ ಸಿನಿಮಾ ಬಿಡುಗಡೆಯಾಗಿತ್ತು ಎಂದು filmssongs.in ಎಂಬ ವೆಬ್ ನಮಗೆ ಮಾಹಿತಿ ನೀಡುತ್ತದೆ. ಲತಾ ಮಂಗೇಶ್ಕರ್
ಈ ಹಾಡನ್ನು ಖ್ಯಾತ ಹಿನ್ನೆಲೆ ಗಾಯಕ ಮನ್ನಾ ಡೇ ಅವರು “ಜಗದ್ಗುರು ಶಂಕರಾಚಾರ್ಯ” ಸಿನಿಮಾಗಾಗಿ ಹಾಡಿದ್ದರು. ಈ ಹಾಡನ್ನು ಲತಾ ಮಂಗೇಶ್ಕರ್ ಅವರು “ಎ ಮೇರೆ ವತನ್ ಕೆ ಲೋಗೋನ್” ಆಲ್ಬಂಗಾಗಿ ನಂತರ ಹಾಡಿದ್ದಾರೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಕ್ಲಿಪ್ ಮಾಡಿದ ವಿಡಿಯೊ ಬಳಸಿ, ‘ರಾಹುಲ್ ಗಾಂಧಿ ಭಾರತ ಮಾತೆಗೆ ಅವಮಾನಿಸಿದ್ದಾರೆ’ ಎಂದು ಸುಳ್ಳು ಹೇಳಿದ ಬಿಜೆಪಿ
ಅಷ್ಟೆ ಅಲ್ಲದೆ, ಮನ್ನಾ ಅವರು ಹಾಡಿರುವ ಈ ಸಿನಿಮಾದ ಹಾಡು “ರೇಡಿಯೊ ಸಿಲೋನ್”ನಲ್ಲಿ ಕೂಡಾ ಪ್ರಸಾರವಾಗಿದೆ. ಈ ಬಗ್ಗೆಗಿನ ದಾಖಲೆ ಕೂಡಾ ನಮಗೆ ಲಭ್ಯವಾಗಿದೆ. ಅದನ್ನುಕೆಳಗಿನ ವಿಡಿಯೊದಲ್ಲಿ ನೋಡಬಹುದಾಗಿದೆ.
1995ರಲ್ಲಿ ಬಿಡುಗಡೆಯಾದ ಈ ಸಿನಿಮಾದ ವೇಳೆ ಭಾರತದ ಪ್ರಧಾನಿ ಆಗಿದ್ದವರು ಜವಾಹರ್ ಲಾಲ್ ನೆಹರೂ ಅವರಾಗಿದ್ದಾರೆ. ಇಂದಿರಾ ಗಾಂಧಿ ಅವರು ಈ ದೇಶದ ಪ್ರಧಾನಿ ಆಗಿದ್ದು, 1966ರಲ್ಲಾಗಿದೆ. ಈ ವೇಳೆಗೆ ಈ ಸಿನಿಮಾ ಬಿಡುಗಡೆಯಾಗಿ ಸುಮಾರು 11 ವರ್ಷಗಳಾಗಿತ್ತು. ಅಲ್ಲದೆ ಹಾಡು ಈಗಲೂ ಎಲ್ಲರಿಗೂ ಲಭ್ಯವಿದೆ. ಅದಾಗ್ಯೂ ಇಂಟರ್‌ನೆಟ್‌ನಲ್ಲಿ ಈ ಹಾಡಿನ ಪ್ರಸಾರ ತಡೆದಿರುವ ಬಗ್ಗೆ ನಮಗೆ ಯಾವುದೆ ಮಾಹಿತಿ ಲಭ್ಯವಿಲ್ಲ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಹಿಂದೂಗಳ ವ್ಯಾಪಾರ ಬಹಿಷ್ಕರಿಸುವಂತೆ ಬೆಂಗಳೂರಿನಲ್ಲಿ ಮುಸ್ಲಿಮರು ಕರೆ ನೀಡಿಲ್ಲ
ಒಟ್ಟಿನಲ್ಲಿ ಹೇಳಬಹುದಾದರೆ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿರುವ “ಜೈ ಭಾರತಿ ವಂದೇ ಭಾರತಿ, ಸರ್ ಪೆ ಹಿಮಾಲಯ ಕಾ ಛತ್ರ ಹೈ” ಎಂಬ ಹಾಡನ್ನು ಇಂದಿರಾ ಗಾಂಧಿ ಅವರು ತೆಡೆದಿರುವ ಬಗ್ಗೆ ಯಾವುದೆ ಆಧಾರ ಇಲ್ಲ. ಈ ಹಾಡನ್ನು ಅವರು ಪ್ರಧಾನಿ ಆಗುವುದಕ್ಕಿಂತ 11 ವರ್ಷಗಳ ಹಿಂದೆಯೆ ಬಿಡುಗಡೆ ಮಾಡಲಾಗಿತ್ತು. ಜೊತೆಗೆ ಈ ಹಾಡು ರೇಡಿಯೊ ಸಿಲೋನ್‌ನಲ್ಲಿ ಕೂಡಾ ಪ್ರಸಾರವಾಗಿದೆ. ಬಿಜೆಪಿ ಮತ್ತು ಆರೆಸ್ಸೆಸ್ ಬೆಂಬಲಿಗರು ದುರುದ್ದೇಶದಿಂದ ತಪ್ಪು ಮಾಹಿತಿಯೊಂದಿಗೆ ಹಂಚುತ್ತಿದ್ದಾರೆ.
ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.
ವಿಡಿಯೊ ನೋಡಿ: ಮಹಾಧರಣಿ : ದುಡಿಯುವ ಜನರ ಹೋರಾಟದ ಹಾಡುಗಳು| ಕ್ರಾಂತಿಯಾಗಲಿ ಈ ನೆಲದ ಕ್ರಾಂತಿಯಾಗಲಿ Janashakthi Media