ಫುಟ್‌ಬಾಲ್‌: ಮೆಸ್ಸಿ ದಾಖಲೆ ಮುರಿದ ಸುನೀಲ್​ ಚೆಟ್ರಿ

ದೋಹಾ: ಇಲ್ಲಿ ನಡೆಯುತ್ತಿರುವ ಕ್ವಾಲಿಫೈಯರ್​ ಕೂಟದಲ್ಲಿ ಸುನೀಲ್‌ ಚೆಟ್ರಿ ಅವರು ಅತ್ಯಂತ ಮಹತ್ತರವಾದ ಸಾಧನೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 2-0 ಅಂತರದಲ್ಲಿ ಗೆಲುವು ಉತ್ಸುಕದೊಂದಿಗೆ ವಿಶ್ವವಿಖ್ಯಾತವಾದ ಮತ್ತೊಂದು ಸಾಧನೆಯನ್ನು ದಾಖಲಿಸಿದ್ದಾರೆ.

ಭಾರತ ಫುಟ್​ಬಾಲ್​ ತಂಡದ ನಾಯಕ ಸುನೀಲ್​ ಚೆಟ್ರಿ ಅವರು ಪ್ರಸಕ್ತ ಆಡುತ್ತಿರುವ ಆಟಗಾರರ ಪೈಕಿ ಮತ್ತು ಅಂತರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ಗೋಲು ಬಾರಿಸುವ ಮೂಲಕ ಎರಡನೇ ಸ್ಥಾನದತ್ತ ಮುನ್ನುಗ್ಗಿದ್ದಾರೆ. ಅವರು ವಿಶ್ವ ಫುಟ್‌ಬಾಲ್‌ನ ಸಾರ್ವಕಾಲಿಕ ಟಾಪ್- 10 ಪ್ರವೇಶಿಸಲು ಕೇವಲ ಒಂದು ಗೋಲಿನಿಂದ ಹಿಂದಿದ್ದಾರೆ.

ದೋಹಾದಲ್ಲಿ ನಡೆಯುತ್ತಿರುವ ಪಂದ್ಯವಳಿಯಲ್ಲಿ 36 ವರ್ಷದ ಸುನೀಲ್​ ಚೆಟ್ರಿ ಗೋಲು ಗಳಿಸುವ ಮೂಲಕ ಅಂತರಾಷ್ಟ್ರೀಯ ಆಟಗಾರ ಲಿಯೋನೆಲ್​ ಮೆಸ್ಸಿ ಅವರ ದಾಖಲೆಯನ್ನು ಮುರಿದಿದ್ದಾರೆ. ಅರ್ಜೈಂಟೀನಾ ದೇಶದ ಫುಟ್‌ಬಾಲ್‌ ಆಟಗಾರ ಲಿಯೋನೆಲ್​ ಮೆಸ್ಸಿ  143 ಪಂದ್ಯದಲ್ಲಿ 72 ಗೋಲು ಬಾರಿಸಿದ್ದರು. ಆದರೆ ಸುನೀಲ್​ ಚೆಟ್ರಿ ಅವರು 117 ಪಂದ್ಯದಲ್ಲಿ 74 ಗೋಲು ಬಾರಿಸಿ ವಿಶ್ವದಾಖಲೆಯನ್ನು ಸಾಧಿಸಿದ್ದಾರೆ. ವಿಶ್ವದಲ್ಲಿ ಮೊದಲು ಸ್ಥಾನದಲ್ಲಿರುವ ಪೋರ್ಚುಗಲ್​ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ 174 ಪಂದ್ಯಗಳಲ್ಲಿ  103 ಗೋಲು ಗಳಿಸಿಕೊಂಡಿದ್ದಾರೆ ಬಾರಿಸಿದ್ದಾರೆ.

ಅಂತರಾಷ್ಟ್ರಿಯ ಆಟಗಾರರ ಸಾರ್ವಕಾಲಿಕ ಗೋಲು ಹೊಡೆದವರ ಪಟ್ಟಿಯಲ್ಲಿ ಸುನೀಲ್​ ಚೆಟ್ರಿ 11ನೇ ಸ್ಥಾನ ಪಡೆದಿದ್ದಾರೆ. ಹಂಗೇರಿಯ ಸ್ಯಾಂಡರ್ ಕೊಕ್ಸಿಸ್, ಜಪಾನ್‌ನ ಕುನಿಶಿಜ್ ಕಮಾಮೊಟೊ ಮತ್ತು ಕುವೈತ್‌ನ ಬಶರ್ ಅಬ್ದುಲ್ಲಾ ಅವರು 75 ಗೋಲುಗಳನ್ನು ಹೊಡೆದಿದ್ದಾರೆ.

ಭಾರತ ಫುಟ್​ಬಾಲ್​ ತಂಡದ ಕೋಚ್​ ಇಗೊರ್​ ಸ್ಟಿಮಾಕ್​ ನೇತೃತ್ವದಲ್ಲಿ ಎರಡನೇ ಗೆಲುವು ಪಡೆದುಕೊಂಡಿದೆ. ದೋಹಾದಲ್ಲಿನ ಪಂದ್ಯದಲ್ಲಿ ಭಾರತಕ್ಕಾಗಿ ಸುನೀಲ್‌ ಚೆಟ್ರಿ 79 ಮತ್ತು 92 ನಿಮಿಷದಲ್ಲಿ ಗೋಲು ಬಾರಿಸಿದರು.

ಈ ಗೆಲುವಿನೊಂದಿಗೆ ಭಾರತವು ಏಳು ಪಂದ್ಯಗಳಿಂದ ಆರು ಅಂಕಗಳೊಂದಿಗೆ ಗ್ರೂಪ್ ಇ ಯಲ್ಲಿ ಮೂರನೇ ಸ್ಥಾನಕ್ಕೆ ಏರಿತು. ಆದರೆ ವಿಶ್ವಕಪ್ 2022ಗೆ ಅರ್ಹತೆ ಪಡೆಯಲು ಭಾರತ ತಂಡವು ಈಗಾಗಲೇ ವಿಫಲವಾಗಿದೆ. ಜೂನ್ 15 ರಂದು ಕ್ವಾಲಿಫೈಯರ್‌ ಮತ್ತೊಂದು ಪಂದ್ಯದಲ್ಲಿ ಭಾರತವು ಅಫ್ಘಾನಿಸ್ತಾನವನ್ನು ಎದುರಿಸಲಿದೆ.

Donate Janashakthi Media

Leave a Reply

Your email address will not be published. Required fields are marked *