ದೇಶಕ್ಕೆ ಚಿನ್ನ ತಂದುಕೊಟ್ಟ ಅಥ್ಲೇಟಿಕ್‌ ನೀರಜ್ ಚೋಪ್ರಾ

ಟೋಕಿಯೋ: ಒಲಿಂಪಿಕ್ಸ್‌ನಲ್ಲಿ ನಿರೀಕ್ಷೆಯಂತೆ ಜಾವಲಿನ್‌ ಪಟು ನೀರಜ್‌ ಚೋಪ್ರಾ ಚಿನ್ನದ ಪದಕ ಗೆಲ್ಲುವುದೊಂದಿಗೆ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಪಟ್ಟಿಯಲ್ಲಿ ಹೊಸ ಸಾಧನೆ ನಿರ್ಮಿಸಿದ್ದಾರೆ. ಜಾವಲಿನ್‌ ಫೈನಲ್‌ ಸ್ಪರ್ಧೆಯಲ್ಲಿ ಬರೋಬ್ಬರಿ 85.30 ಮೀಟರ್ ಎಸೆಯುವ ಮೂಲಕ ಪದಕ ಜಯಿಸಿದ್ದಾರೆ.

ಒಲಿಂಪಿಕ್ಸ್‌ ಕ್ರೀಡಾಕೂಟದ ಅಥ್ಲೀಟಿಕ್ಸ್‌ ವಿಭಾಗದ ಇತಿಹಾಸದಲ್ಲಿ ಭಾರತ ಸ್ವಾತಂತ್ರ್ಯಗೊಂಡ ಬಳಿಕ ದೇಶಕ್ಕೆ ಚಿನ್ನವನ್ನು ತಂದುಕೊಟ್ಟವರು ನೀರಜ್‌ ಚೋಪ್ರಾ ಆಗಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ ಬಳಿಕ ಒಲಿಂಪಿಕ್ಸ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಪರ ಚಿನ್ನದ ಪದಕ ಗೆದ್ದ ಸಾಧನೆ ಮಾಡಿರುವ ಭಾರತೀಯ ಸೇನೆಯಲ್ಲಿ ಉದ್ಯೋಗಿಯಾಗಿರುವ ನೀರಜ್ ಚೋಪ್ರಾ ಐತಿಹಾಸಿಕ ಸಾಧನೆಯಾಗಿದೆ.

ಮೊದಲ ಪ್ರಯತ್ನದಲ್ಲಿ ನೀರಜ್‌ ಚೋಪ್ರಾ ಬರೋಬ್ಬರಿ 87.03 ಮೀಟರ್‌ ದೂರ ಎಸೆಯುವ ಮೂಲಕ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡರು. ಜರ್ಮನಿಯ ಜೂಲಿಯನ್ ವೇಬರ್ 85.30 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದರು. ಉಳಿದಂತೆ ಮೊದಲ ಸುತ್ತಿನಲ್ಲಿ ಮತ್ತೆ ಯಾವ ಜಾವಲಿನ್‌ ಪಟುವು 85 ಮೀಟರ್‌ಗಿಂತ ದೂರ ಜಾವಲಿನ್ ಎಸೆಯಲಿಲ್ಲ.

ಇದನ್ನು ಓದಿ: ಭಾರತಕ್ಕೆ ಮತ್ತೊಂದು ಪದಕ: ಕುಸ್ತಿಪಟು ಭಜರಂಗ್‌ ಪುನಿಯಾಗೆ ಕಂಚು

ಎರಡನೇ ಪ್ರಯತ್ನದಲ್ಲಿಯೂ ನೀರಜ್‌ ಚೋಪ್ರಾ 87.58 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ಪ್ರದರ್ಶನ ನೀಡಿದರು. ಎರಡನೇ ಸುತ್ತಿನ ಅಂತ್ಯದ ವೇಳೆಗೂ ನೀರಜ್‌ ಚೋಪ್ರಾ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಮೂರನೇ ಪ್ರಯತ್ನದಲ್ಲಿ ನೀರಜ್‌ ಚೋಪ್ರಾ ಮೊದಲೆರಡು ಸುತ್ತಿನಲ್ಲಿ ತೋರಿದಷ್ಟು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಿರಲಿಲ್ಲ. ಮೂರನೇ ಪ್ರಯತ್ನದಲ್ಲಿ ಅವರು 76.79 ಮೀಟರ್ ದೂರ ಮಾತ್ರ ಎಸೆದರು. ಜೆಕ್ ರಿಪಬ್ಲಿಕ್‌ನ ವಿಜೆಲ್ವ್ ವೆಸ್ಲೇ 85.44 ಮೀಟರ್‌ ದೂರ ಎಸೆಯುವ ಮೂಲಕ ಗರಿಷ್ಠ ದೂರ ಎಸೆದು ಎರಡನೇ ಸ್ಥಾನಕ್ಕೇರಿದರು.

ಇದನ್ನು ಓದಿ: ನಾಲ್ಕು ದಶಕಗಳ ಬಳಿಕ ಹಾಕಿಯಲ್ಲಿ ಪದಕ ಗೆದ್ದು ಬೀಗಿದ ಭಾರತ

ವಿಶ್ವ ನಂ.1 ಜಾವಲಿನ್ ಥ್ರೋ ಪಟು ಜೊಹಾನಸ್‌ ವೆಟ್ಟರ್ ಅಂತಿಮ 8ರ ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ವಿಫಲರಾದರು. ಆದರೆ ಅವರು ಫೈನಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿ ನಿರಾಸೆ ಅನುಭವಿಸಿದರು. ನಾಲ್ಕನೇ ಸುತ್ತಿನಲ್ಲಿ ಮತ್ತೊಮ್ಮೆ ತಮ್ಮ ಹಳೆಯ ಲಯ ಕಂಡುಕೊಳ್ಳಲು ವಿಫಲರಾದರು. ಹೀಗಾಗಿ ನಾಲ್ಕನೇ ಸುತ್ತಿನಲ್ಲಿ ಚೋಪ್ರಾ ಗೆರೆ ದಾಟಿ ಪೌಲ್‌ ಮಾಡಿದರು. ಇನ್ನು 5ನೇ ಸುತ್ತಿನಲ್ಲಿ ಕೂಡಾ ನೀರಜ್‌ 80 ಮೀಟರ್ ಗಡಿ ದಾಟಲಿಲ್ಲ.

ನೀರಜ್ ಮೊದಲ  ಮೂರು ಪ್ರಯತ್ನಗಳಲ್ಲಿ ಕ್ರಮವಾಗಿ 87.03 ಮೀಟರ್,  87.58 ಮೀಟರ್, ಮತ್ತು 76.79 ಮೀಟರ್ ಸಾಮರ್ಥ್ಯ ತೋರಿದರು. ನಾಲ್ಕನೇ ಹಾಗೂ ಐದನೇ ಯತ್ನ ‘ಫೌಲ್’ ಆದರೂ ನೀರಜ್ ಗರಿಷ್ಠ ಸಾಧನೆಯನ್ನು ಪದಕ ಸುತ್ತಿನಲ್ಲಿದ್ದ ಯಾವ ಸ್ಪರ್ಧಿಯಿಂದಲೂ ಮೀರಿಸಲು ಸಾಧ್ಯವಾಗಲಿಲ್ಲ.

Donate Janashakthi Media

Leave a Reply

Your email address will not be published. Required fields are marked *