ನವದೆಹಲಿ| ಮೇ 12ರಂದು ಭಾರತೀಯ ಸೇನೆ ಮಹತ್ವದ ಸುದ್ದಿಗೋಷ್ಟಿ

ನವದೆಹಲಿ: ಮೇ 12 ಸೋಮವಾರ ಮಧ್ಯಾಹ್ನ 2:30 ಕ್ಕೆ ಭಾರತ-ಪಾಕಿಸ್ತಾನದ ನಡುವಿನ ಕದನ ವಿರಾಮದ ಕುರಿತು ಭಾರತೀಯ ಸೇನೆ ಮಹತ್ವದ ಸುದ್ದಿಗೋಷ್ಟಿ ನಡೆಸಲಿದೆ.

ಆಪರೇಷನ್ ಸಿಂಧೂರ ಮುಂದುವರೆಸುವ ಬಗ್ಗೆ ಹಾಗೂ ಕದನ ವಿರಾಮದ ಕುರಿತು ಸೇನಾಧಿಕಾರಿಗಳು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ಸುದ್ದಿಗೋಷ್ಟಿ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಮೇ 20ಕ್ಕೆ ರೈತ – ಕಾರ್ಮಿಕರಿಂದ ಸಾರ್ವತ್ರಿಕ ಮುಷ್ಕರಕ್ಕೆ ಕರೆ

ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ಪ್ರಮುಖ ಭದ್ರತಾ ಸಭೆ ನಡೆದ ನಂತರ ಭಾರತ ಮತ್ತು ಪಾಕಿಸ್ತಾನದ ಉನ್ನತ ಮಿಲಿಟರಿ ಅಧಿಕಾರಿಗಳು ಕದನ ವಿರಾಮದ ಕುರಿತು ಮಾತುಕತೆ ಆರಂಭಿಸಿದರು.

ಪ್ರಧಾನಿಯವರ ಮನೆಯಲ್ಲಿ ನಡೆದ ಸಭೆಯಲ್ಲಿ ಮೂರು ಸೇನಾ ಮುಖ್ಯಸ್ಥರು, ವಿದೇಶಾಂಗ ಸಚಿವ ಎಸ್ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿದ್ದರು.

ಇದನ್ನೂ ನೋಡಿ: 25 ಕೋಟಿ ಜನಸಂಖ್ಯೆಯನ್ನು ಬಡತನದಿಂದ ಹೊರ ತಂದಿರುವುದಾಗಿ ಹೇಳುತ್ತಿರುವ ಮೋದಿ ಸರ್ಕಾರ ? ವಾಸ್ತವವೇನು?‌

Donate Janashakthi Media

Leave a Reply

Your email address will not be published. Required fields are marked *