ಕೇರಳದಲ್ಲಿ ದೇಶದ ಮೊದಲ ಸರ್ಕಾರಿ ಒಟಿಟಿ ಉದ್ಘಾಟನೆ

ತಿರುವನಂತಪುರಂ: ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಕೇರಳದಲ್ಲಿ ಸರ್ಕಾರ ಸ್ವಾಮದ್ಯದ OTT C ಸ್ಪೇಸ್ ಅನ್ನು ಆರಂಭಿಸಲಾಗಿದೆ. ಇದು ಮಾರ್ಚ್‌ 07 ಅಧಿಕೃತವಾಗಿ ಕಾರ್ಯಾರಂಭ ಆಗಿದೆ.ಕೇರಳ

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಸಿ ಸ್ಪೇಸ್ ಒಟಿಟಿ ವೇದಿಕೆಯನ್ನು ದೇಶಕ್ಕೆ ಸಮರ್ಪಿಸಿದರು. ಈ ಎಲ್ಲ ಪ್ರೇಕ್ಷಕರಿಗೆ ಕಡಿಮೆ ವೆಚ್ಚದಲ್ಲಿ ಕಲಾತ್ಮಕ ಚಲನಚಿತ್ರಗಳನ್ನು ಆನಂದಿಸಲು ಈ ಮೂಲಕ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಡಿ OTT ವೇದಿಕೆ ನಿರ್ಮಿಸಲಾಗಿದೆ.  ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ಆ್ಯಪ್ ಲಭ್ಯವಾಗಲಿದೆ.

ಸಿ ಸ್ಪೇಸ್ ಒಟಿಟಿ ಪ್ಲಾಟ್‌ಫಾರ್ಮ್: ಇತರ OTT ಪ್ಲಾಟ್‌ಫಾರ್ಮ್‌ಗಳಿಗೆ ಹೋಲಿಸಿದರೆ C ಸ್ಪೇಸ್‌ನ ವಿಶೇಷತೆ ಎಂದರೆ ಜನರು ಪೇ – ಪರ್-ವ್ಯೂ ಆಧಾರದ ಮೇಲೆ ಚಲನಚಿತ್ರಗಳನ್ನು ವೀಕ್ಷಿಸಬಹುದು. OTT ಪ್ಲಾಟ್‌ಫಾರ್ಮ್‌ನಲ್ಲಿರುವ ಎಲ್ಲ ವಿಷಯಗಳಿಗೆ ಪ್ರೇಕ್ಷಕರು ಹಣ ಪಾವತಿಸಬೇಕಾಗಿಲ್ಲ. ಅವರು ಸಿ – ಸ್ಪೇಸ್‌ನಲ್ಲಿ ವೀಕ್ಷಿಸಿದ ಚಲನಚಿತ್ರಗಳಿಗೆ ಮಾತ್ರ ಹಣ ಪಾವತಿಸಬಹುದು. ಫೀಚರ್ ಫಿಲ್ಮ್‌ಗಳನ್ನು 75 ರೂ. ಪಾವತಿಸಿ ನೋಡಬಹುದಾಗಿದೆ. ಇನ್ನು 40 ನಿಮಿಷದ ಚಲನಚಿತ್ರಗಳು ಕೇವಲ 40 ರೂಪಾಯಿಗಳಿಗೆ ಮತ್ತು 30 ನಿಮಿಷಗಳ ಚಲನಚಿತ್ರಗಳನ್ನ 30 ರೂಪಾಯಿಗಳಿಗೆ ಹಾಗೂ 20 ನಿಮಿಷಗಳ ಚಲನಚಿತ್ರಗಳನ್ನು ಜಸ್ಟ್​ 20 ರೂಪಾಯಿ ಪಾವತಿಸಿ ನಿಮ್ಮಿಷ್ಟದ ವಿಡಿಯೋಗಳನ್ನ ನೋಡಬಹುದಾಗಿದೆ. ಕೇರಳ

ವೇದಿಕೆಯಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಚಲನಚಿತ್ರಗಳು, ಚಲನಚಿತ್ರ ಅಕಾಡೆಮಿ ನಿರ್ಮಿಸಿದ ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಮತ್ತು ಪ್ರಯೋಗಾತ್ಮಕ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಸಾಂಸ್ಕೃತಿಕ ಕ್ಷೇತ್ರದ ಗಣ್ಯರಾದ ಬೆನ್ಯಮಿನ್‌, ಒ ವಿ ಉಷಾ, ಸಂತೋಷ್‌ ಸಿವನ್‌, ಶ್ಯಾಮ್‌ ಪ್ರಸಾದ್‌, ಸನ್ನಿ ಜೋಸೆಫ್‌ ಮತ್ತು ಜಿಯೋ ಬೇಬಿ ಕ್ಯುರೇಟರ್‌ ಸಮಿತಿಯಲ್ಲಿದ್ದಾರೆ. ಈ ಒಟಿಟಿ ವೇದಿಕೆಗೆ ಸಲ್ಲಿಕೆಯಾಗುವ ಎಲ್ಲಾ ಸಿನಿಮಾ ಅಥವಾ ಸಾಕ್ಷ್ಯಚಿತ್ರಗಳನ್ನು ಈ ಸಮಿತಿಯ ಮೂವರು ತಜ್ಞರು ಪರಾಮರ್ಶಿಸಲಿದ್ದಾರೆ. ಅರ್ಧದಷ್ಟು ಆದಾಯವು ಚಲನಚಿತ್ರ ಅಕಾಡೆಮಿಗೆ ಹೋಗುತ್ತದೆ ಮತ್ತು ಉಳಿದ ಅರ್ಧ ಚಿತ್ರದ ನಿರ್ಮಾಪಕರು ಅಥವಾ ಹಕ್ಕು ಸ್ವಾಮ್ಯ ಹೊಂದಿರುವವರಿಗೆ ಹೋಗುತ್ತದೆ.

ಬದಲಾದ ಕಾಲಘಟ್ಟದಲ್ಲಿ ಚಲನಚಿತ್ರಗಳನ್ನು ಈಗ ನಿಮ್ಮ ಮನೆಯಲ್ಲೇ ಕುಳಿತು, ಅದರಲ್ಲಿ ನಿಮ್ಮ ಅಂಗೈಯಲ್ಲೇ ವೀಕ್ಷಣೆ ಮಾಡಬಹುದಾಗಿದೆ. ಇಂಟರ್ನೆಟ್ ಯುಗದಲ್ಲಿ OTT ಪ್ಲಾಟ್‌ಫಾರ್ಮ್‌ಗಳು ಹೆಚ್ಚು ಪ್ರಸ್ತುತವಾಗುತ್ತಿವೆ. C ಸ್ಪೇಸ್ ಮಲಯಾಳಂ ಚಿತ್ರರಂಗದ ಪೋಷಣೆ ಮತ್ತು ಬೆಳವಣಿಗೆಗೆ ಈ ಸರ್ಕಾರಿ ಸ್ವಾಮ್ಯದ ಒಟಿಟಿ ಹೊಸ ಹೆಜ್ಜೆಯಾಗಲಿದೆ‘‘ ಎಂದು ಸಿಎಂ ಪಿಣರಾಯಿ ವಿಜಯನ್​ ಹೇಳಿದರು. ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ಈ ಬಗ್ಗೆ ಮಾತನಾಡಿ, ಸಿ ಸ್ಪೇಸ್ ದೇಶದ ಯಾವುದೇ ರಾಜ್ಯ ಸರ್ಕಾರದ ಅಡಿಯಲ್ಲಿ ಪ್ರಾರಂಭವಾಗುವ ಮೊದಲ OTT ವೇದಿಕೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

 

Donate Janashakthi Media

Leave a Reply

Your email address will not be published. Required fields are marked *