- ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕ್ ಗೆ ಮೊದಲ ಗೆಲವು
- ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯ
- ಮುಂದಿನ ಪಂದ್ಯಗಳಲ್ಲಿ ಭಾರತ ಗೆಲ್ಲಲೇಬಾಕದ ಒತ್ತಡ
ದುಬೈ : ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತ ವಿರುದ್ಧ ಸತತ ಸೋಲುಗಳ ಸರಪಳಿಗಳಿಂದ ಪಾಕಿಸ್ತಾನ ಕೊನೆಗೂ ಬಿಡಿಸಿಕೊಳ್ಳಲು ಯಶಸ್ವಿಯಾಗಿದೆ. ಇಂದು ನಡೆದ ಸೂಪರ್-12 ಎರಡನೇ ಗುಂಪಿನ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ 10 ವಿಕೆಟ್ಗಳಿಂದ ಜಯಭೇರಿ ಭಾರಿಸಿತು.
ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ನೀಡಿದ ಟಾರ್ಗೆಟ್ ಬೆನ್ನತ್ತಿದ ಪಾಕ್ ವಿಕೆಟ್ ನಷ್ಟವಿಲ್ಲದೆ 17.5 ಓವರ್ಗಳಲ್ಲಿ 152 ರನ್ ಗಳಿಸುವ ಮೂಲಕ ಗೆಲುವು ಕಂಡರು.
ಭಾರತದ ಬ್ಯಾಟಿಂಗ್ ವೈಫಲ್ಯ: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 152 ರನ್ಗಳ ಸಾಧಾರಣ ಮೊತ್ತ ಟಾರ್ಗೆಟ್ ನೀಡಿತ್ತು.
ಆರಂಭದಲ್ಲೇ ಬ್ಯಾಕ್ ಟು ಬ್ಯಾಟ್ ವಿಕೆಟ್ ಕಳೆದುಕೊಂಡರೂ ಸಹ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅರ್ಧಶತಕದ ಸಹಾಯದಿಂದ ಹಾಗೂ ರಿಷಬ್ ಪಂತ್ ರ ಸಮಯೋಚಿತ ಆಟದಿಂದ 151 ರನ್ ಪೇರಿಸಿತ್ತು.
ಶಾಹೀನ್ ಅಫ್ರಿದಿ ಅವರು ತಮ್ಮ ಮೊದಲ ಓವರ್ನಲ್ಲೇ ರೋಹಿತ್ ಶರ್ಮಾ ಅವರನ್ನ ಔಟ್ ಮಾಡಿದರು. ಅಫ್ರಿದಿ ತಮ್ಮ ಎರಡನೇ ಓವರ್ನಲ್ಲಿ ಕೆಎಲ್ ರಾಹುಲ್ ಅವರನ್ನೂ ಔಟ್ ಮಾಡಿದರು. ನಂತರ ಸೂರ್ಯಕುಮಾರ್ ಯಾದವ್ ಕೂಡ ಹೆಚ್ಚು ರನ್ ಗಳಿಸದೇ ಪೆವಿಲಿಯನ್ಗೆ ಮರಳಿದರು. ಭಾರತದ ಪರ ಕೆ.ಎಲ್ ರಾಹುಲ್ 3, ವಿರಾಟ್ ಕೊಹ್ಲಿ 57, ಸೂರ್ಯಕುಮಾರ್ ಯಾದವ್ 11, ರಿಷಭ್ ಪಂತ್ 39, ರವೀಂದ್ರ ಜಡೇಜಾ 13, ಹಾರ್ದಿಕ್ ಪಾಂಡ್ಯ 11 ರನ್ ಗಳಿಸಿದರು.
ಇನ್ನು, ಪಾಕ್ ಪರ ತಾಳ್ಮೆಯಿಂದಲೇ ಆಟವಾಡಿದ ನಾಯಕ ಬಾಬರ್ ಅಜಂ 68, ಮೊಹಮ್ಮದ್ ರಿಜ್ವಾನ್ 79 ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.