ಟೋಕಿಯೊ: ಟೊಕಿಯೋ ಒಲಿಂಪಿಕ್ಸ್ ಹಾಕಿ ಕ್ವಾರ್ಟರ್ ಫೈನ್ಲ್ ನಲ್ಲಿ ಪುರುಷರ ಹಾಕಿ ತಂಡ ಭರ್ಜರಿ ಗೆಲುವು ಸಾಧಿಸಿದೆ. ಗ್ರೇಟ್ ಬ್ರಿಟನ್ ತಂಡದ ವಿರುದ್ಧ ಭಾರತ ತಂಡ 3 -1 ಗೋಲುಗಳ ಅಂತರದಿಂದ ಜಯಗಳಿಸಿದೆ. ಈ ಜಯದೊಂದಿಗೆ ಪುರುಷರ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸಿದೆ.
ದಿಲ್‌ಪ್ರೀತ್ ಸಿಂಗ್(7ನೇ ನಿಮಿಷ), ಗುರ್ಜಂತ್ ಸಿಂಗ್ (16ನೇ) ಮತ್ತು ಹಾರ್ದಿಕ್ ಸಿಂಗ್ (57ನೇ) ಮೂಲಕ ಭಾರತವು ಮೂರು ಗೋಲುಗಳನ್ನು ಗಳಿಸಿ ಎಂಟು ಬಾರಿ ಒಲಂಪಿಕ್ಸ್ ಚಾಂಪಿಯನ್ ತಂಡ ಮತ್ತೊಂದು ಪದಕದ ಭರವಸೆ ಮೂಡಿಸಿದೆ.
1980ರಲ್ಲಿ ಚಿನ್ನದ ಪದಕ ಗೆದ್ದ ನಂತರ ಭಾರತ ಸೆಮಿಫೈನಲ್ ಪ್ರವೇಶಿಸಿರಲಿಲ್ಲ.
ಈ ಮೂಲಕ 41 ವರ್ಷಗಳ ಬಳಿಕ ಭಾರತ ಪುರುಷರ ಹಾಕಿ ತಂಡ ಒಲಂಪಿಕ್ಸ್ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ.
ಭಾರತವು ಮಂಗಳವಾರ ನಡೆಯಲಿರುವ ಅಂತಿಮ-4ರ ಸುತ್ತಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಬೆಲ್ಜಿಯಂ ತಂಡದ ಸವಾಲನ್ನು ಎದುರಿಸಲಿದೆ. ಬೆಲ್ಜಿಯಂ ತಂಡವು ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿ ಸೆಮಿ ಫೈನಲ್ ತಲುಪಿದೆ.