ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ಈ ಬಾರಿ ಕೂಡ ಕ್ರೂರವಾಗಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಶುಲ್ಕದಲ್ಲಿ ರೂ 1,400/-ರಷ್ಟು ಹೆಚ್ಚಿಸಿದೆ. ಮತ್ತು ಪ್ರತಿಷ್ಠಿತ ಯುವಿಸಿಇ (ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್) ಶುಲ್ಕದಲ್ಲಿ ರೂ 2000/-ರಷ್ಟು ಹೆಚ್ಚಿಸಿದೆ ಎಂದು ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಹೇಳಿದ್ದಾರೆ.
ಸರ್ಕಾರದ 3 ವರ್ಷಗಳ ಈ ಪಾತಕಿ ಕೃತ್ಯದಿಂದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕವು ದ್ವಿಗುಣಗೊಂಡು ರೂ42,000/-ಕ್ಕೆ ಏರಿದೆ. ತನ್ನನ್ನು ಬಡಜನರ ಪರ, ದಮನಿತರ ಪರ ಎಂದು ಕರೆದುಕೊಳ್ಳುವ ಯಾವುದೇ ಸರ್ಕಾರ ಕೂಡ ಈ ರೀತಿ ಶುಲ್ಕ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಸಿನಿಮಾ ಟಿಕೆಟ್, OTT ಸಬ್‌ಸ್ಕ್ರಿಪ್ಶನ್ ಮೇಲೆ ಶೇ. 2 ರಷ್ಟು ಸೆಸ್ ವಿಧಿಸಲು ಸರ್ಕಾರ ಚಿಂತನೆ
ಕುತಂತ್ರದಿಂದ ಯುವಿಸಿಇಯನ್ನು ಪ್ರತ್ಯೇಕವಾಗಿರಿಸಿ ಶುಲ್ಕವನ್ನು ಹೆಚ್ಚಿಸಿರುವುದು, ಈ ಮಹಾನ್ ಸಂಸ್ಥೆಯನ್ನು ಸ್ವ ಹಣಕಾಸು ಸಂಸ್ಥೆಯನ್ನಾಗಿಸುವುದರ ವಿರುದ್ಧ ಧ್ವನಿಯೆತ್ತಿರುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರ ಪ್ರತಿಭಟನೆಯ ಕೂಗಿಗೆ ಸರ್ಕಾರ ಕಿವುಡಾಗಿರುವುದನ್ನು ಸಾಬೀತುಪಡಿಸುತ್ತದೆ.
ಸರ್ಕಾರದ ಈ ಶುಲ್ಕ ಹೆಚ್ಚಳವು ಅಪರಾಧ ಎಂದು ಎಐಡಿಎಸ್ಓ ಪರಿಗಣಿಸುತ್ತದೆ. ಮತ್ತು ಕೂಡಲೇ ಇದನ್ನು ಹಿಂಪಡೆಯಬೇಕೆಂದು ಆಗ್ರಹಿಸುತ್ತದೆ. ರಾಜ್ಯದ ಶಿಕ್ಷಣ ಪ್ರೇಮಿ ಜನತೆಯು ಸಂಘಟಿತರಾಗಿ ವೃತ್ತಿಪರ ಕೋರ್ಸ್ ಗಳನ್ನು ಹಣ ಗಳಿಕೆಯ ಅಸ್ತ್ರವಾಗಿ ಬಳಸುವುದರ ವಿರುದ್ಧ ಧ್ವನಿ ಎತ್ತಬೇಕೆಂದು ಎಐಡಿಎಸ್ಓ ಕರೆ ನೀಡುತ್ತದೆ ಎಂದು ಹೇಳಿದರು.
ಇದನ್ನೂ ನೋಡಿ: ತ್ರಿವರ್ಣ ಧ್ವಜ ಬಣ್ಣದಿಂದ ಕಂಗೊಳಿಸುತ್ತಿರುವ ಹೇಮಾವತಿ ಡ್ಯಾಂ|Janashakthi Media.