ಬೆಂಗಳೂರು: ನಗರದ ಮಣಿಪಾಲ್ ಸಂಸ್ಥೆಗಳ ಮೇಲೆ ಏಕಕಾಲಕ್ಕೆ ಆದಾಯ ತೆರಿಕೆ ಇಲಾಖೆ(ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ದೇಶದ 22 ಕಡೆಗಳಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತಿದೆ.
ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಬೆಳಗಿನ ಜಾವ 6 ಗಂಟೆಗೆ ಆಗಮಿಸಿದ ನಾಲ್ಕು ಇನ್ನೋವಾ ವಾಹನದಲ್ಲಿ ಆಗಮಿಸಿರುವ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು ಮಣಿಪಾಲ್ ಸಂಸ್ಥೆಗಳು ಒಳಗೊಂಡಂತೆ, ಉಡುಪಿ ಜಿಲ್ಲೆ ಮಣಿಪಾಲದಲ್ಲೂ ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತಿದೆ. ಮಣಿಪಾಲ ಗ್ರೂಪ್ ನ ಫೈನಾನ್ಸ್ ವಿಭಾಗದ ಮೇಲೆ ಐಟಿ ದಾಳಿ ನಡೆದಿದೆ. 200 ಕ್ಕೂ ಹೆಚ್ಚು ಐಟಿ ಅಧಿಕಾರಿಗಳಿಂದ ಒಟ್ಟು 22 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆದಿದ್ದು, ಓಲ್ಡ್ ಏರ್ ಪೋರ್ಟ್ ರೋಡ್, ಕನ್ನಿಂಗ್ ಹ್ಯಾಮ್ ರೋಡ್, ಯಶವಂತಪುರ, ಏರ್ ಪೋರ್ಟ್ ರೋಡ್ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.