ಒಸ್ಮಾನಾಬಾದ್: ಮಹಾರಾಷ್ಟ್ರದ ಗ್ರಾಮ ಒಂದರಲ್ಲಿ ಮಂಗಗಳ ಹೆಸರಿನಲ್ಲಿ 32 ಎಕರೆ ಜಮೀನು ಇದೆ. ಅರೇ ಇದೇನಿದು ಅಂತಾ ಅಚ್ಚರಿ ಪಡ್ತಾ ಇದ್ದೀರಿ, ಜನರ ನಡುವೆ ಜಮೀನು ವಿವಾದಗಳು ಸಾಮಾನ್ಯವಾಗಿರುವ ಈ ಸಮಯದಲ್ಲಿ ಇದು ಹೇಗೆ ಸಾಧ್ಯ ಅಂತಾ ಹುಬ್ಬೇರಿಸಬೇಡಿ.
ಹೌದು,ಒಸ್ಮಾನಾಬಾದ್ ಜಿಲ್ಲೆಯ ಉಪ್ಲಾ ಗ್ರಾಮದಲ್ಲಿ ಈ ರೀತಿ ಮಂಗಗಳ ಹೆಸರಿಗೆ ಜಮೀನಿದೆ. ಈ ಗ್ರಾಮದಲ್ಲಿ ಮಂಗಗಳಿಗೆ ವಿಶೇಷವಾದ ಮರ್ಯಾದೆ ನೀಡುತ್ತಾರೆ. ಪೂರ್ವಜರ ಕಾಲದಿಂದಲೂ ಮಂಗಗಳು ಮನೆ ಬಾಗಿಲಿಗೆ ಬಂದರೆ ಅವುಗಳಿಗೆ ಊಟ ಕೊಡುವ ಪದ್ಧತಿ ಇದೆ. ಊರಲ್ಲಿ ಯಾರದ್ದೇ ಮದುವೆಯಾದರೂ ಅಲ್ಲಿ ಮೊದಲನೇ ಉಡುಗೊರೆಯನ್ನು ಮಂಗಕ್ಕೇ ಕೊಡಲಾಗುತ್ತದೆಯಂತೆ.
ಈ ಊರಿನಲ್ಲಿರುವ 32 ಎಕರೆ ಜಮೀನು ಊರಿನ ಮಂಗಗಳ ಹೆಸರಿನಲ್ಲಿ ನೋಂದಣಿಯಾಗಿದೆ. ಆದರೆ ಅದನ್ನು ಯಾವ ಕಾಲದಲ್ಲಿ ಯಾರು ನೋಂದಣಿ ಮಾಡಿಸಿದರು ಎನ್ನುವ ಬಗ್ಗೆ ನಮಗೂ ಮಾಹಿತಿಯಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು.
ಊರಿನಲ್ಲಿ ಸುಮಾರು 100 ಮಂಗಗಳು ಇವೆ. ಸದ್ಯ ಮಂಗಗಳ ಹೆಸರಿನಲ್ಲಿರುವ ಜಾಗವನ್ನು ಸರ್ಕಾರ ಪ್ಲಾಂಟೇಷನ್ ಮಾಡಿದೆ ಎಂದು ತಿಳಿದು ಬಂದಿದೆ.
Accept janshakti media